8 ಪ್ರಯಾಣಿಕರ ವಾಹನದಲ್ಲಿ 6 ಏರ್‌ಬ್ಯಾಗ್‌ ಕಡ್ಡಾಯ

Public TV
1 Min Read
6 airbags 8 passenger car

ನವದೆಹಲಿ: 8 ಪ್ರಯಾಣಿಕರು ಪ್ರಯಾಣಿಸಬಹುದಾದ ವಾಹನದಲ್ಲಿ ಉತ್ಪಾದಕರು ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಒದಗಿಸಬೇಕೆಂಬ ನಿಯಮವನ್ನು ಕೇಂದ್ರ ಸರ್ಕಾರ ಜಾರಿಗೆ ತರಲಿದೆ.

8 ಪ್ರಯಾಣಿಕರನ್ನು ಸಾಗಿಸುವ ಮೋಟಾರು ವಾಹನಗಳಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಹೆಚ್ಚಿಸುವ ಸಲುವಾಗಿ ಈಗ ಕನಿಷ್ಠ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯಗೊಳಿಸುವ ಕರಡು ನಿಯಮನ್ನು ನಾನು ಅನುಮೋದಿಸಿದ್ದೇನೆ ಎಂದು ಸಾರಿಗೆ ಸಚಿವ ನಿತಿನ್‌ ಗಡ್ಕರಿ ಟ್ವೀಟ್‌ ಮಾಡಿ ತಿಳಿಸಿದ್ದಾರೆ.

Nitin Gadkari

ಏರ್‌ಬ್ಯಾಗ್‌ ಕಡ್ಡಾಯಗೊಳಿಸಿದ್ದರಿಂದ ವಾಹನಗಳ ಬೆಲೆ 8-10 ಸಾವಿರ ರೂ. ಏರಿಕೆಯಾಗುವ ಸಾಧ್ಯತೆಯಿದೆ. ಈ ವರ್ಷದ ಅಕ್ಟೋಬರ್‌ನಿಂದಲೇ ಇದು ಜಾರಿಗೆ ಬರುವ ಸಾಧ್ಯತೆಯಿದೆ. ಇದನ್ನೂ ಓದಿ: 3 ಲಕ್ಷ ರೂ. ಗೆ ಹೆತ್ತ ಮಗುವನ್ನೇ ಮಾರಿದ ದಂಪತಿ ಅರೆಸ್ಟ್

ಜುಲೈ 1, 2019 ರಿಂದ ಡ್ರೈವರ್ ಏರ್‌ಬ್ಯಾಗ್ ಮತ್ತು ಜನವರಿ 1, 2022 ರಿಂದ ಮುಂಭಾಗದ ಸಹ ಪ್ರಯಾಣಿಕನ ಏರ್‌ಬ್ಯಾಗ್‌ ಅನ್ನು ಸರ್ಕಾರ ಈಗಾಗಲೇ ಕಡ್ಡಾಯಗೊಳಿಸಿದೆ. ಈಗ ಎಂ1 ವಾಹನದ ಮುಂಭಾಗ ಮತ್ತು ಹಿಂಭಾಗದ ಎರಡೂ ವಿಭಾಗಗಳಲ್ಲಿ ಕುಳಿತಿರುವ ಪ್ರಯಾಣಿಕರಿಗೆ ನಾಲ್ಕು ಹೆಚ್ಚುವರಿ ಏರ್‌ಬ್ಯಾಗ್‌ ಕಡ್ಡಾಯಗೊಳಿಸಲಾಗಿದೆ. ಇದನ್ನೂ ಓದಿ: ರಾವತ್ ಹೆಲಿಕಾಪ್ಟರ್ ಪತನಕ್ಕೆ ಮೋಡ ಕಾರಣ: ಭಾರತೀಯ ವಾಯುಪಡೆ

ಸುರಕ್ಷತಾ ವೈಶಿಷ್ಟ್ಯಗಳ ವಿಷಯ ಬಂದಾಗ ಜಾಗತಿಕ ಕಂಪನಿಗಳ ಕಾರಿಗೆ ಹೋಲಿಸಿದರೆ ಭಾರತದ ಕಂಪನಿಗಳ ಕಾರು ಹಿಂದೆ ಉಳಿದಿವೆ. ಜಾಗತಿಕ ಕಂಪನಿಗಳು ಬೇರೆ ಮಾರುಕಟ್ಟೆಯಲ್ಲಿ ಬಿಡುಗಡೆ ಮಾಡಿದ ಕಾರುಗಳನ್ನು ಭಾರತದಲ್ಲಿ ಬಿಡುಗಡೆ ಮಾಡುವ ವೇಳೆ ಪ್ರಮುಖ ಸುರಕ್ಷತಾ ವೈಶಿಷ್ಟ್ಯಗಳನ್ನು ನೀಡುವುದಿಲ್ಲ.

ಬಡವರು ಖರೀದಿಸುವ ಸಣ್ಣ ಕಾರುಗಳಲ್ಲಿ ಏರ್‌ಬ್ಯಾಗ್‌ ಇರುವುದಿಲ್ಲ. ಆದರೆ ಶ್ರೀಮಂತರು ಖರೀದಿಸುವ ಕಾರುಗಳಲ್ಲಿ ಏರ್‌ಬ್ಯಾಗ್‌ ನೀಡಲಾಗುತ್ತದೆ. ಈ ರೀತಿಯ ತಾರತಮ್ಯ ಯಾಕೆ ಎಂದು ಸಚಿವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *