ಮಡಿಕೇರಿ: ಕೊಡಗಿನ ಪ್ರಕೃತಿಯ ಮಡಿಲಲ್ಲಿರುವ ಪ್ರತಿಯೊಂದು ಸ್ಥಳಗಳು ಮನಮೋಹಕ. ಅದ್ರಲ್ಲೂ ಮಳೆಗಾಲ ಬಂದ್ರೆ ಮತ್ತಷ್ಟು ಸೌಂದರ್ಯದಿಂದ ಕಂಗೊಳಿಸೋ ಕರ್ನಾಟಕದ ಕಾಶ್ಮೀರದಲ್ಲಿ ನಿಸರ್ಗದ ಸಿರಿ ನೋಡುಗರಿಗೆ ಮುದನೀಡುತ್ತೆ. ಇಂತಹ ಸುಂದರ ತಾಣಗಳ ಸಾಲಿಗೆ ಸೇರೋದೆ ಚಿಕ್ಲಿಹೊಳೆ ಜಲಾಶಯ. ಇದನ್ನು ನೋಡಲು ಪುಟ್ಟದಾಗಿದ್ದರೂ ತನ್ನ ಸೌಂದರ್ಯದಿಂದ ಎಲ್ಲರನ್ನೂ ತನ್ನತ್ತ ಸೆಳೆಯುತ್ತಿದೆ.
Advertisement
ಸುತ್ತಲೂ ನಿಸರ್ಗದ ಮಡಿಲು. ಕಣ್ಣು ಹಾಯಿಸಿದಲ್ಲೆಲ್ಲಾ ಕಂಗೊಳಿಸೋ ಹಸಿರ ಸಿರಿ. ಇದರ ನಡುವೆ ಹಾಲ್ನೊರೆಯಂತೆ ದುಮ್ಮಿಕ್ಕೋ ನೀರು, ಪ್ರಕೃತಿಯ ಸೌಂದರ್ಯಕ್ಕೆ ಮನಸೋತು ಜಲಾಶಯ ನೋಡುತ್ತಿರೋ ಜನ. ಹೌದು, ಇದು ಕೊಡಗಿನ ಪುಟ್ಟ ಜಲಾಶಯ ಚಿಕ್ಲಿಹೊಳೆಯ ಮನಮೋಹಕ ದೃಶ್ಯ ವೈಭವ. ಇದನ್ನೂ ಓದಿ: ಭಾರತದ ಗಡಿಯನ್ನು ಅಕ್ರಮವಾಗಿ ಪ್ರವೇಶಿದ್ದ ಪೋಲೆಂಡ್ ಪ್ರಜೆ ಅರೆಸ್ಟ್
Advertisement
Advertisement
ಮಳೆಗಾಲದ ವಿಶೇಷ ಅತಿಥಿಯಾದ ಈ ಚಿಕ್ಲಿಹೊಳೆ ಜಲಾಶಯವನ್ನು ‘ಮಿನಿ ನಯಾಗರ ಫಾಲ್ಸ್’ ಅಂತಲೂ ಕರೀತ್ತಾರೆ. ಅರ್ಧ ವೃತ್ತಾಕಾರದಲ್ಲಿ ಐದಾರು ಅಡಿಗಳ ಎತ್ತರದಿಂದ ಹಾಲ್ನೊರೆಯಂತೆ ದುಮ್ಮಿಕ್ಕುವ ಈ ಸುಂದರ ದೃಶ್ಯವನ್ನು ನೋಡಲು ಎರಡು ಕಣ್ಣು ಸಾಲದು. ಬೇಸಿಗೆಯಲ್ಲಿ ಬರಡಾಗಿ ಕಾಣೋ ಈ ಜಲಾಶಯದಲ್ಲಿ ಕಳೆದ ಕೆಲವು ದಿನಗಳಿಂದ ಆರಂಭವಾಗಿರುವ ಮಳೆಯಿಂದ ಜಲಪಾತವೊಂದು ಸೃಷ್ಟಿಯಾಗಿದೆ.
Advertisement
ಹಸಿರ ಸಿರಿಯ ನಡುವೆ ದುಮ್ಮಿಕ್ಕೋ ಈ ಜಲಾಶಯವನ್ನು ನೋಡಲು ಜನರ ದಂಡೇ ಹರಿದುಬರುತ್ತಿದ್ದು, ಮಳೆಗಾಲದ ಮಜಾವನ್ನು ಜನ ಎಂಜಾಯ್ ಮಾಡ್ತಿದ್ದಾರೆ. ಜಿಲ್ಲೆಯ ಕುಶಾಲನಗರ ತಾಲೂಕಿನ ಸುಂಟಿಕೊಪ್ಪದ ಸಮೀಪವಿರೋ ಜಲಾಶಯಕ್ಕೆ ಮಳೆಗಾಲದಲ್ಲಿ ಜೀವಕಳೆ ಬರುತ್ತೆ. ಮಳೆಗಾಲದ ಐದಾರು ತಿಂಗಳು ನವವಧುವಿನಂತೆ ಕಂಗೊಳಿಸೋ ಜಲಾಶಯ ಚಿಕ್ಕದಾದರೂ ತನ್ನ ಸೌಂದರ್ಯದಿಂದಲೇ ಎಲ್ಲರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ಪಕ್ಕಾ ನಿಸರ್ಗದ ಮಡಿಲಿನಲ್ಲಿರೋ ಈ ಜಲಾಶಯ ಪ್ರಕೃತಿಮಾತೆಯ ತಿಲಕದಂತೆ ನಯನಮನೋಹರವಾಗಿ ಕಂಗೊಳಿಸುತ್ತಿದೆ. ಇದನ್ನೂ ಓದಿ: ಉತ್ತರ ಕನ್ನಡದಲ್ಲಿ ಸುಸಜ್ಜಿತ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ಸಿಎಂ ಜೊತೆ ಚರ್ಚಿಸುವೆ ಎಂದ ಸುಧಾಕರ್
ಸುತ್ತಲೂ ಹಸಿರಕಾನನ ಬೆಟ್ಟಗುಡ್ಡಗಳಿಂದಾವೃತವಾಗಿರೋ ಜಲಾಶಯ ಕಂಡು ಮೈಮರೆಯೋ ಜನರು ವೀಕೆಂಡ್‍ಗಳಲ್ಲಿ ಬಂದು ತಮ್ಮೆಲ್ಲ ನೋವನ್ನು ಮರೆತು ಖುಷಿಪಡ್ತಾರೆ. ಹೀಗೆ ಮಳೆಗಾಲದಲ್ಲಿ ಬಂದು ಸಾವಿರರು ಜನರ ಮನತಣಿಸೋ ಈ ಪುಟ್ಟ ಜಲರಾಶಿಯಲ್ಲಿ ಮೂಲಸೌಲಭ್ಯಗಳ ಕೊರತೆ ಕಾಡುತ್ತಿದೆ ಎನ್ನೊಂದು ಪ್ರವಾಸಿಗರ ಅಳಲಾಗಿದೆ.