ಬೆಂಗಳೂರು: ಕರ್ನಾಟಕದಲ್ಲಿ ಈಗ ಸದ್ದು ಮಾಡುತ್ತಿರುವ ಟ್ರೋಲ್ ಮಿಣಿ ಮಿಣಿ ಪೌಡರ್. ಮಂಗಳೂರು ಬಾಂಬ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮಿಣಿ ಮಿಣಿ ಪೌಡರ್ ಗೆ ಹೋಲಿಕೆ ಮಾಡಿದ ಮಾಜಿ ಸಿಎಂ ಹೆಚ್‍ಡಿ ಕುಮಾರಸ್ವಾಮಿ ಹೇಳಿಕೆ ಈಗ ಟ್ರೋಲ್‍ಗೆ ಸಿಕ್ಕ ಆಹಾರ. ನಿಖಿಲ್ ಎಲ್ಲಿದ್ದೀಯಪ್ಪಾ? ಎಂಬ ಡೈಲಾಗ್ ಇಂಟರ್ ನ್ಯಾಷನಲ್ ಟ್ರೋಲ್ ಆಗಿತ್ತು. ಈಗ ಮಿಣಿಮಿಣಿ ಪೌಡರ್ ಸರದಿ.
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಟ್ರೋಲ್‍ಗಳಿಗೆ ಲೆಕ್ಕವಿಲ್ಲ. ಮಂಡ್ಯ ಕ್ಷೇತ್ರದಲ್ಲಂತೂ ಮುಯ್ಯಿಗೆ ಮುಯ್ಯಿ ಎಂಬಂತೆ ಟ್ರೋಲ್ ಮೇಲೆ ಟ್ರೋಲ್ ನಡೀತಾ ಇತ್ತು. ಆದರಲ್ಲೂ ನಿಖಿಲ್ ಎಲ್ಲಿದ್ದೀಯಪ್ಪಾ ಎಂಬ ಡೈಲಾಗ್ ಅಂತೂ ಬೇಕಾಬಿಟ್ಟಿಯಾಗಿ ಟ್ರೋಲ್ ಮಾಡಿದ್ರು. ಕರ್ನಾಟಕದಲ್ಲಷ್ಟೇ ಅಲ್ಲ ವಿದೇಶಗಳಲ್ಲಿಯೂ ಟ್ರೋಲ್‍ಗೆ ಒಳಗಾಗಿತ್ತು. ಈ ಟ್ರೋಲ್ ಹಬ್ಬಿಸಿದ ವಿರೋಧಿಗಳಿಗೆ ಮಾಜಿ ಸಿಎಂ ಹೆಚ್‍ಡಿಕೆ, ನಿಖಿಲ್ ಕುಮಾರಸ್ವಾಮಿ ಖಡಕ್ ಟಾಂಗ್ ಕೊಟ್ಟಿದ್ದರು.
Advertisement
Advertisement
ಆದರೆ ಈಗ ಮಿಣಿಮಿಣಿ ಪೌಡರ್ ಟ್ರೋಲ್ ಆಗ್ತಿದೆ. ಸಾಮಾಜಿಕ ಜಾಲತಾಣಗಳಲ್ಲಿ ಮಿಣಿ ಮಿಣಿ ಪೌಡರ್ ಡೈಲಾಗ್ ನಾನಾ ರೀತಿಯ ವಿಡಿಯೋಗಳನ್ನ ಎಡಿಟ್ ಮಾಡಿ ಟ್ರೋಲ್ ಮಾಡುತ್ತಿದ್ರೆ, ವಿದೇಶದಲ್ಲೂ ಮಿಣಿ ಮಿಣಿ ಪೌಡರ್ ಸದ್ದು ಮಾಡ್ತಿದೆ. ನ್ಯೂಜಿಲ್ಯಾಂಡ್‍ನ ಆಕ್ಲೆಂಡ್‍ನಲ್ಲಿ ನಡೆಯುತ್ತಿದ್ದ ಭಾರತ, ನ್ಯೂಜಿಲ್ಯಾಂಡ್ ಟಿ20 ಪಂದ್ಯದಲ್ಲಿ ಹೌದೋ ಹುಲಿಯಾ ಭಿತ್ತಿ ಪತ್ರದ ಜತೆ ಮಿಣಿ ಮಿಣಿ ಪೌಡರ್ ಭಿತ್ತಿ ಪತ್ರ ರಾರಾಜಿಸಿತ್ತು. ಕನ್ನಡದ ಕ್ರಿಕೆಟ್ ಅಭಿಮಾನಿಗಳು ‘ಹೌದೋ ಹುಲಿಯಾ’ ಮಿಣಿ ಮಿಣಿ ಪೌಡರ್ ಅಂತಾ ಘೋಷಣೆ ಕೂಗುತ್ತಿದ್ದರು. ಈ ವಿಡಿಯೋ ಕೂಡ ಹೆಚ್ಚು ವೈರಲ್ ಆಗ್ತಿದ್ದು, ಇಂಟರ್ ನ್ಯಾಷನಲ್ ಮಿಣಿಮಿಣಿ ಪೌಡರ್ ಅನ್ನೋ ಹೊಸ ಟ್ರೋಲ್ ಶುರುವಾಗಿದೆ.