ಮುಂಬೈ: ಮಹಾರಾಷ್ಟ್ರದ (Maharashtra) ಛತ್ರಪತಿ ಸಂಭಾಜಿನಗರ ಜಿಲ್ಲೆಯ ಸಮೃದ್ಧಿ ಎಕ್ಸ್‌ಪ್ರೆಸ್ ವೇಯಲ್ಲಿ (Samruddhi Expressway) ಮಿನಿ ಬಸ್‌ವೊಂದು (Mini Bus) ಕಂಟೈನರ್‌ಗೆ (Container) ಡಿಕ್ಕಿ ಹೊಡೆದ ಪರಿಣಾಮ 12 ಜನ ಸಾವನ್ನಪ್ಪಿದ್ದು, 23 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
12 Logo Ki Dead 23 Log Huvi Injury Bus Accident Se At Maharashtra Sambhaji Nagar#Maharashtra Ke #Samundri Express #sambhajinagar Nagar Ke Pass Mini Bus Aur Truck Ki Thakkar Hone Se 12 Logo Ki Dead Aur 23 Log Injury Huvi Hai
Aaisa Bataya Jaha Raha Hai Mini Bus Me Travel Kar l pic.twitter.com/qvXV057ALW
— Mumbai Samay News (@mumbaisamay) October 15, 2023
ಶನಿವಾರ ತಡರಾತ್ರಿ ಘಟನೆ ನಡೆದಿದ್ದು, ವೇಗವಾಗಿ ಬಂದ ಬಸ್ ಕಂಟೈನರ್‌ಗೆ ಡಿಕ್ಕಿ ಹೊಡೆದಿದೆ. ಒಟ್ಟು 35 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎಂದು ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: 15 ವರ್ಷದ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ – ಹಾಸ್ಟೆಲ್ ಅಡುಗೆಯಾತ, ನಿರ್ವಾಹಕ ಅರೆಸ್ಟ್
ಮುಂಬೈನಿಂದ ಸುಮಾರು 350 ಕಿಲೋ ಮೀಟರ್ ದೂರದಲ್ಲಿರುವ ಜಿಲ್ಲೆಯ ವೈಜಾಪುರ ಪ್ರದೇಶದಲ್ಲಿ ಮಧ್ಯರಾತ್ರಿ 12:30ರ ಸುಮಾರಿಗೆ ಅಪಘಾತ ಸಂಭವಿಸಿದೆ. ಬಸ್ ಚಾಲಕ ನಿಯಂತ್ರಣ ಕಳೆದುಕೊಂಡ ಪರಿಣಾಮ ಕಂಟೈನರ್ ಹಿಂಬದಿಗೆ ಡಿಕ್ಕಿಯಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಮಣಿಪುರ ವಿದ್ಯಾರ್ಥಿಗಳ ಹತ್ಯೆ ಪ್ರಕರಣ – ಆರೋಪಿ ಪುಣೆಯಲ್ಲಿ ಅರೆಸ್ಟ್
ಘಟನೆಯಲ್ಲಿ 12 ಪ್ರಯಾಣಿಕರು ಸಾವನ್ನಪ್ಪಿದ್ದು, ಅದರಲ್ಲಿ ಐವರು ಪುರುಷರು, ಆರು ಮಹಿಳೆಯರು ಮತ್ತು ಒಬ್ಬಳು ಅಪ್ರಾಪ್ತ ಬಾಲಕಿ ಎಂದು ಗುರುತಿಸಲಾಗಿದೆ. ಉಳಿದ 23 ಮಂದಿ ಗಾಯಾಳುಗಳನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಸ್ನೇಹಿತನಿಂದಲೇ ವಿದ್ಯಾರ್ಥಿನಿಯ ಅತ್ಯಾಚಾರ – ಆರೋಪಿ ಅರೆಸ್ಟ್
Web Stories