ಚಾಮರಾಜನಗರ: ಮಿನಿ ಬಸ್ ಪಲ್ಟಿಯಾದ ಪರಿಣಾಮ ಮಹಿಳೆಯ ಕೈ ತುಂಡಾಗಿದ್ದು, ಹಲವರಿಗೆ ಗಾಯವಾಗಿರುವ ಘಟನೆ ಜಿಲ್ಲೆಯ ಹನೂರಿನ ವಲಯದಲ್ಲಿ ನಡೆದಿದೆ.
ಹನೂರು ತಾಲೂಕಿನ ಬೊಪ್ಪೆಗೌಡನಪುರ ಗ್ರಾಮದ ನಿವಾಸಿ ಅಮ್ಮಣ್ಣಿಯಮ್ಮ(55) ಕೈ ಕಳೆದುಕೊಂಡ ಮಹಿಳೆ. ಇಂದು ಭೀಮನ ಅಮವಾಸ್ಯೆ ಅಂಗವಾಗಿ ಭಕ್ತರು ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದೆ.
ಭೀಮನ ಅಮವಾಸ್ಯೆ ಪ್ರಯುಕ್ತ ಇಂದು ಮಲೆಮಹಾದೇಶ್ವರ ಬೆಟ್ಟದಲ್ಲಿ ವಿಶೇಷ ಪೂಜೆ ಇತ್ತು. ಆದ್ದರಿಂದ ಮಿನಿ ಬಸ್ಸಿನಲ್ಲಿ ಮಹದೇಶ್ವರ ಬೆಟ್ಟಕ್ಕೆ ಹೋಗುತ್ತಿದ್ದರು. ಹನೂರಿನ ವಲಯದಲ್ಲಿ ಕಿರಿದಾದ ರಸ್ತೆ ಇದ್ದ ಪರಿಣಾಮ ಎದುರಿಗೆ ಬರುತ್ತಿದ್ದ ಟಿಟಿ ನಡುವಿನ ಅಪಘಾತ ತಪ್ಪಿಸಲು ಹೋಗಿ ಮಿನಿ ಬಸ್ ಪಲ್ಟಿಯಾಗಿದೆ. ಪರಿಣಾಮ ಮಿನಿ ಬಸ್ ನಲ್ಲಿದ್ದ ಮಹಿಳೆ ಕೈ ತುಂಡಾಗಿದೆ. ಉಳಿದ ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯಗಳಾಗಿವೆ.
ಅಪಘಾತ ಸಂಭವಿಸಿ ರಕ್ತದ ಮಡುವಿನಲ್ಲಿ ನರಳುತ್ತಿದ್ದ ಮಹಿಳೆಯನ್ನು ಆಸ್ಪತ್ರೆಗೆ ದಾಖಲಿಸಿದೆ ಜನರು ಸುಮ್ಮನೆ ನೋಡುತ್ತಾ ಮಾನವಿಯತೆಯನ್ನು ಮರೆತಿದ್ದಾರೆ. ಕೊನೆಗೆ ಸ್ಥಳದಲ್ಲಿದ್ದವರು ಅಂಬುಲೆನ್ಸ್ ಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಆದರೆ ಅಪಘಾತ ಸಂಭವಿಸಿ ಒಂದೂವರೆ ಗಂಟೆ ಆದರೂ ಸ್ಥಳಕ್ಕೆ ಅಂಬುಲೆನ್ಸ್ ಬರಲಿಲ್ಲ. ಇತ್ತ ಅಪಘಾತದಿಂದ ಕೈ ತುಂಡಾಗಿ ನರಳಾಡುತ್ತಿದ್ದರೂ ಜನರು ನೆರವಿಗೆ ಬರಲಿಲ್ಲ. ಕೊನೆಗೆ ತಡವಾಗಿ ಅಂಬುಲೆನ್ಸ್ ಬಂದಿದ್ದು, ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಘಟನೆ ಹನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews