ಚಿಕ್ಕಬಳ್ಳಾಪುರ: ಕೈಗೆ ಬಂದಿದ್ದ ರಾಗಿ ಬೆಳೆ (Millet Crop) ಹೊಲದಲ್ಲೇ ಸುಟ್ಟು ಭಸ್ಮವಾಗಿದ್ದು, ರೈತ ಕಂಗಾಲಾಗಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಅರಸನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಆ ರೈತ ರಾಗಿ ಕಟಾವು ಮಾಡಿಕೊಂಡು ರಾಗಿಯ ಹುಲ್ಲನ್ನ ಹೊಲದಲ್ಲೇ ಬಿಟ್ಟಿದ್ದ, 2-3 ದಿನ ಬಿಟ್ಟು ಗುಡ್ಡೆ ಹಾಕಿ ಒಂದು ಕಡೆ ಖರಿಸಿಕೊಳ್ಳೋಣ ಅಂದುಕೊಳ್ಳುವಷ್ಟರಲ್ಲಿ ಬೆಂಕಿಗೆ ಇಡೀ ಹುಲ್ಲು ಸುಟ್ಟು ಕರಕಲಾಗಿದೆ. ಇದನ್ನೂ ಓದಿ: ಚುನಾವಣೆ ಮೇಲೆ ಸ್ಟಾಲಿನ್ ಕಣ್ಣು, ತಮಿಳುನಾಡು ಜನರಿಗೆ ಸಿಹಿಸುದ್ದಿ – ಪೊಂಗಲ್‌ಗೆ 3,000 ರೂ. ಗಿಫ್ಟ್!
ಅರಸನಹಳ್ಳಿ ಗ್ರಾಮದ ರೈತ ಮಂಜುನಾಥ್ ತನ್ನ ಎರಡು ಎಕೆರೆ ಜಮೀನಿನಲ್ಲಿ ರಾಗಿ ಬೆಳೆ ಬೆಳೆದಿದ್ದು, ರಾಗಿ ಕಟಾವು ಮಾಡಲಾಗಿತ್ತು. ಆದ್ರೆ ಹುಲ್ಲನ್ನ ಹಾಗೆಯೇ ಹೊಲದಲ್ಲಿ ಬಿಡಲಾಗಿತ್ತು. ಆದ್ರೆ ಈಗ ಹುಲ್ಲು ಎಲ್ಲವೂ ಬೆಂಕಿಗೆ ಬಲಿಯಾಗಿ ಬೂದಿಯಾಗಿದೆ. ಆದ್ರೆ ಇದು ಆಕಸ್ಮಿಕವೋ ಇಲ್ಲ ಕಿಡಿಗೇಡಿಗಳ ಕೃತ್ಯವೋ ಗೊತ್ತಿಲ್ಲ. ಎರಡು ಎಕರೆ ಪ್ರದೇಶದಲ್ಲಿದ್ದ ಹುಲ್ಲಿನಲ್ಲಿ ಬಹುತೇಕ ಹುಲ್ಲು ಬೆಂಕಿಗೆ ಆಹುತಿಯಾಗಿ ಹೋಗಿದೆ. ಇದನ್ನೂ ಓದಿ: ಕಲೆ ರಾಜ್ಯದ ಸಂಸ್ಕೃತಿಯ ಕನ್ನಡಿ, ಕಲಾವಿದರು, ಕಲಾಸಕ್ತರಿಗೆ ಚಿತ್ರಸಂತೆ ವೇದಿಕೆ ಕಲ್ಪಿಸಿದೆ: ಸಿಎಂ



