ಭೈರತಿ ರಣಗಲ್ ಶಿವಣ್ಣಗೆ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಜೋಡಿ?

Public TV
2 Min Read
Tamannaah Bhatia 1

ಶಿವರಾಜ್ ಕುಮಾರ್ (Shivraj Kumar) ನಟನೆಯ ಬಹುನಿರೀಕ್ಷಿತ ಸಿನಿಮಾ ಭೈರತಿ ರಣಗಲ್ (Bhairati Rangal) ಸಿನಿಮಾಗೆ ಮೇ 26ರಂದು ಚಾಲನೆ ನೀಡಲಾಗಿದೆ. ಸಿನಿಮಾ ಶೂಟಿಂಗ್ ಸಿದ್ಧತೆಯ ಬೆನ್ನಲ್ಲೇ ಈ‌‌ ಚಿತ್ರಕ್ಕೆ ನಾಯಕಿ ಯಾರಿರಬಹುದು ಎನ್ನುವ ಕುತೂಹಲ ಮೂಡಿತ್ತು. ಅದಕ್ಕೀಗ ಉತ್ತರ ಸಿಕ್ಕಿದೆ.

Tamannaah Bhatia 3

ನರ್ತನ್ (Narthan) ನಿರ್ದೇಶನದ ಮಫ್ತಿ ಸಕ್ಸಸ್ ನಂತರ ಈ ಚಿತ್ರದ ಸೀಕ್ವೇಲ್ ಭೈರತಿ ರಣಗಲ್ ಗೆ ಭರ್ಜರಿ ತಯಾರಿ ನಡೆಯುತ್ತಿದೆ. ಶಿವಣ್ಣಗೆ ನಾಯಕಿಯಾಗುವ ಆ ಲಕ್ಕಿ ನಟಿ ಯಾರು ಎಂಬುದಕ್ಕೆ ಸುಳಿವು ಸಿಕ್ಕಿದ್ದು, ಶಿವಣ್ಣ ಜೊತೆ ತಮನ್ನಾ ಭಾಟಿಯಾ ಡ್ಯುಯೇಟ್ ಹಾಡೋದಕ್ಕೆ ರೆಡಿಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಭೈರತಿ ರಣಗಲ್ ಚಿತ್ರದಲ್ಲಿ ನಾಯಕಿ ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ಇದ್ದು, ಮಿಲ್ಕಿ ಬ್ಯೂಟಿ ತಮನ್ನಾರನ್ನ (Tamannaah Bhatia) ಚಿತ್ರತಂಡ ಫೈನಲ್ ಮಾಡಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಇದನ್ನೂ ಓದಿ:ಹುಟ್ಟುಹಬ್ಬದ ಸಂಭ್ರಮದಲ್ಲಿ ‘ಹೊಯ್ಸಳ’ ಬಲಿ- ಫ್ಯಾನ್ಸ್‌ಗೆ ಸಿಕ್ತು ಸಿಹಿಸುದ್ದಿ

shivanna 7

ನಿನ್ನೆ ಶುಕ್ರವಾರ (ಮೇ 26) ನಡೆದ ಚಿತ್ರದ ಪ್ರೆಸ್ ಮೀಟ್ ನಲ್ಲಿ, ನಾಯಕಿಯ ಆಯ್ಕೆ ಬಗ್ಗೆ ನಿರ್ದೇಶನ ನರ್ತನ್ ರಿಯಾಕ್ಟ್ ಮಾಡಿದ್ದರು. ನಮಗೆ ಶಿವಣ್ಣ ಅವರ ಡೇಟ್ ತುಂಬಾ ಮುಖ್ಯ. ಆ ಡೇಟು ಪ್ಲಸ್ ರೇಟು ಮ್ಯಾಚ್ ಆದರೆ ಯಾರಾದರೂ ಓಕೆ ಅಂತಾ ನಗುತ್ತಾ ನಿರ್ದೇಶಕ ನರ್ತನ್ ಪ್ರತಿಕ್ರಿಯೆ ನೀಡಿದ್ದರು. ಬಳಿಕ ಶಿವಣ್ಣ ಮಾತನಾಡಿ, ನಾಯಕಿಯ ಪಾತ್ರಕ್ಕೆ ಯಾರು ಸೂಟ್ ಆಗುತ್ತಾರೋ ಅವರೇ ಹಾಕಿಕೊಳ್ತೀವಿ. ಅದಕ್ಕೆ ಕನ್ನಡ ನಟಿ ಪರಭಾಷಾ ನಟಿ ಎಂಬುದು ಇಲ್ಲ. ಆ ಪಾತ್ರಕ್ಕೆ ಹೊಂದುವಂತಹ ನಟಿಯನ್ನ ಆಯ್ಕೆ ಮಾಡ್ತೀವಿ ಅಂತಾ ತಿಳಿಸಿದ್ದರು. ಕನ್ನಡದ ನಟಿಯನ್ನ ಹಾಕಬಾರದು ಅಂತಾ ಏನಿಲ್ಲ. ನಮ್ಮ ಭಾಷೆಯ ನಟಿ ಸೂಟ್ ಆಗುತ್ತಾರೆ ಅಂದರೆ ಚಿತ್ರಕ್ಕೆ ಹಾಕಿಕೊಳ್ಳಲು ಯಾವುದೇ ಬೇಸರವಿಲ್ಲ. ಆದರೆ ನಾಯಕಿಯ ಪಾತ್ರಕ್ಕೆ ಪ್ರಾಮುಖ್ಯತೆ ಇದೆ. ಅದೊಂದು ಪ್ರಬುದ್ಧ ಪಾತ್ರ ಎಂದು ಹೇಳಿದ್ದರು.

Tamannaah Bhatia 2

ಈ ಬೆನ್ನಲ್ಲೇ ತಮನ್ನಾ ಅವರು ಶಿವಣ್ಣಗೆ ಜೋಡಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ ಅಷ್ಟಕ್ಕೂ ಈ ವಿಚಾರ ನಿಜಾನಾ? ಅಥವಾ ಗಾಳಿಸುದ್ದಿ ನಾ? ಎಂಬುದನ್ನ ಚಿತ್ರತಂಡವೇ ಸ್ಪಷ್ಟಪಡಿಸಬೇಕಿದೆ. ಬಲ್ಲ ಮೂಲಗಳಿಂದ ಮಾಹಿತಿ ಸಿಕ್ಕಿರುವ ಪ್ರಕಾರ ಬಹುತೇಕ ತಮನ್ನಾ ಅವರೇ ಆಗಲಿದ್ದಾರೆ ಎನ್ನಲಾಗುತ್ತಿದೆ.

Share This Article