ಶ್ರೀಕೃಷ್ಣ ಜನ್ಮಾಷ್ಟಮಿ ಬಂದ್ರೆ ಸಾಕು ಸಾಮಾನ್ಯವಾಗಿ ಮಕ್ಕಳಿಗೆ ರಾಧಾ ಕೃಷ್ಣರ ವೇಶ ಹಾಕಿ ತಂದೆತಾಯಿ ಖುಷಿ ಪಡ್ತಾರೆ. ಆದರಿಲ್ಲಿ ಜನ್ಮಾಷ್ಟಮಿ ವಿಶೇಷವಾಗಿ ಖ್ಯಾತ ನಟಿ ತಮನ್ನಾ ಭಾಟಿಯಾ ರಾಧೆಯ ಲುಕ್‌ನಲ್ಲಿ ಫೋಟೋಶೂಟ್ ಮಾಡಿಸಿದ್ದಾರೆ. ರಾಧೆಯ ಲುಕ್‌ನಲ್ಲಿ ಅತ್ಯಂತ ಸುಂದರವಾಗಿ ಕಾಣಿಸ್ಕೊಂಡಿದ್ದಾರೆ ಈ ಗ್ಲಾಮರಸ್ ನಟಿ. ಇನ್ನು ಕೃಷ್ಣನ ವೇಶಧಾರಿಯೂ ರಾಧೆಯ ಜೊತೆಯಲ್ಲಿ ನಿಂತಿರೋದ್ರಿಂದ ಫೋಟೋಶೂಟ್ ಅಂದ ಹೆಚ್ಚಾಗಿದೆ. ಫೋಟೋಶೂಟ್ ವಿಶೇಷ ಏನೆಂದರೆ, ಬೃಂದಾನವನದಲ್ಲಿ ರಾಧಾ ಕೃಷ್ಣರ ಪ್ರೀತಿಯ ಪರಾಕಾಷ್ಟೆ ನೋಡಬಹುದು. ಗೋಪಿಕಾಸ್ತ್ರಿಯರ ಅಂದಚೆಂದವಂತೂ ಕಣ್ಣಿಗೆ ಹಬ್ಬ.
ಅಂದಹಾಗೆ ತಮನ್ನಾ ಹೀಗೆ ಫೋಟೋಶೂಟ್ ಮಾಡಿಸಿದ್ದು ವಿಶೇಷವಾದ್ರೂ ಇನ್ನೊಂದು ವಿಶೇಷ ಸಂಗತಿ ಹಂಚಿಕೊಂಡಿದ್ದಾರೆ ಮಿಲ್ಕೀಬ್ಯೂಟಿ. ಈ ಫೋಟೋಶೂಟ್ ಹಾಗೂ ಅದರ ಜಾಗೃತಿ ಬಗ್ಗೆ ಬರವಣಿಗೆಯ ಮೂಲಕ ಮಾಹಿತಿ ಕೊಟ್ಟ ರೀತಿ ಗಮನಾರ್ಹವಾಗಿದೆ. ಯಾಕಂದ್ರೆ ತಮನ್ನಾ ಹೇಳ್ತಾರೆ `ತಮ್ಮ 18 ವರ್ಷಗಳ ವೃತ್ತಿಯಲ್ಲಿ ಇದುವೇ ತಮಗೆ ಅತ್ಯಂತ ಖುಷಿ ಕೊಟ್ಟ ಅಭಿಯಾನ’ ಎಂದು. ಹಾಗಾದ್ರೆ ಅಂಥದ್ದೇನು ವಿಶೇಷ ಅಡಗಿದೆ ಈ ಫೋಟೋಶೂಟ್‌ನಲ್ಲಿ ಅನ್ನೋದಾದ್ರೆ ರಾಧೆಯ ಪಾತ್ರಧಾರಿಯಾಗಿ ಕಾಣಿಸ್ಕೊಂಡಿದ್ದೇ ವಿಶೇಷ ಅನ್ನೋದಕ್ಕೆ ಪದಗಳಲ್ಲಿ ಸ್ಪಷ್ಟನೆ ಕೊಟ್ಟಿದ್ದಾರೆ ಈ ನಟಿ.
ರಾಧೆಯನ್ನು ಸಾಕಾರಗೊಳಿಸುವಾಗ ತಮನ್ನಾ ಅಂತೀದ್ರಿಯ ಸಂಪರ್ಕವನ್ನು ಅನುಭವಿಸಿದಂತೆ ಭಾಸವಾದರಂತೆ. ಇದರ ಹಿಂದೆ ಒಂದು ದೈವಿಕ ಶಕ್ತಿ ಇದ್ದಂತೆ ಕಂಡುಕೊಂಡರಂತೆ, ಹೀಗಾಗಿ ಈ ಅಭಿಯಾನದ ದೃಶ್ಯದಲ್ಲಿ ದೈವತ್ವವು ಸ್ಪಷ್ಟವಾಗಿದೆ ಎನ್ನುತ್ತಾರೆ ತಮನ್ನಾ.
ತಮನ್ನಾ ಇದುವರೆಗೂ ಯಾವುದೇ ದೇವತೆಯ ಪಾತ್ರದಲ್ಲಿ ಅಭಿನಯಿಸಿಲ್ಲ. ಇದೀಗ ರಾಧೆಯ ಪಾತ್ರವಾಗಿ ಜೀವಿಸಿ ಅತೀಂದ್ರಿಯ ಶಕ್ತಿಯ ಪ್ರಭಾವಕ್ಕೆ ಒಳಗಾದವರಂತೆ ಬರೆದುಕೊಂಡಿದ್ದಾರೆ. ಫೋಟೋಗಳಲ್ಲೂ ತಮನ್ನಾರ ಸ್ನಿಗ್ಧ ಸೌಂದರ್ಯ ಕಾಣುತ್ತೆ. ಶಕ್ತಿ ಸ್ವರೂಪಿಣಿ ಅತಿಸೌಂದರ್ಯವತಿ ರಾಧೆಯ ಅಂದ ಚೆಂದವನ್ನ ಪ್ರತಿರೂಪಿಸುವ ಪ್ರಯತ್ನ ಮಾಡಿದ್ದಾರೆ ತಮನ್ನಾ. ಹೀಗಾಗಿ ತಮ್ಮ 18 ವರ್ಷದ ಕರಿಯರ್‌ನಲ್ಲಿ ಇದುವೇ ಉತ್ತಮ ಚಿತ್ರೀಕರಣ ಎಂದಿದ್ದಾರೆ ತಮನ್ನಾ.
ಅಂದಹಾಗೆ ತಮನ್ನಾಗೆ ಅವರನ್ನ ಗ್ಲಾಮರ್ ಅವತಾರದಲ್ಲಿ ತೋರಿಸುವ ಪಾತ್ರಗಳೇ ಹೆಚ್ಚಾಗಿ ಬರ್ತವೆ. ಆದರೀಗ ಇಂಥಹ ಗ್ಲಾಮರ್ ಗೊಂಬೆಗೆ ರಾಧಾಮಾತೆಯ ವೇಶ ಹಾಕಿಸಲಾಗಿದ್ದು ಆಕೆಯ ಫ್ಯಾನ್ಸ್ ಕೂಡ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.