ಹಾಲಿನ ದರ ಹೆಚ್ಚಾದ ಬೆನ್ನಲ್ಲೇ ಹಾಲುಗಳ್ಳರ ಕಾಟ ಹೆಚ್ಚಳ

Public TV
1 Min Read
Kamakshipalya Milk theft

ಬೆಂಗಳೂರು: ಕಳೆದ ಒಂದು ವರ್ಷದಲ್ಲಿ ನಂದಿನಿ ಹಾಲಿನ ದರ ಮೂರು ಬಾರಿ ಹೆಚ್ಚಾಗಿದ್ದು, ಇದರ ಬೆನ್ನಲ್ಲೇ ಹಾಲುಗಳ್ಳರ ಕಾಟ ಕೂಡ ಹೆಚ್ಚಾಗಿದೆ. ಪಾಕೆಟ್ ಗಟ್ಟಲೆ ನಂದಿನಿ ಹಾಲು (Nandini Milk) ಕದಿಯುವುದನ್ನೇ ಬಿಸಿನೆಸ್ ಮಾಡಿಕೊಂಡಿರುವ ಕಳ್ಳರು ಬೆಳಗಿನ ಜಾವ ಸ್ಕೂಟರ್‌ನಲ್ಲಿ ಬಂದು ಹಾಲು ಕದ್ದು ಎಸ್ಕೇಪ್ ಆಗಿದ್ದಾರೆ.

ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ (Kamakshipalya police station) ವ್ಯಾಪ್ತಿಯ ನಂದಿನಿ ಬೂತ್ ಒಂದರಲ್ಲಿ ಹಾಲಿನ ಪ್ಯಾಕೆಟ್‌ಗಳನ್ನು ಕಳ್ಳತನ ಮಾಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಹಾಲುಗಳ್ಳರ ಕಾಟಕ್ಕೆ ಅಂಗಡಿ ಮಾಲೀಕ ಗಿರಿಗೌಡ ಹೈರಾಣಾಗಿದ್ದಾರೆ. ಇದನ್ನೂ ಓದಿ: RCB | ಪಾಟಿದಾರ್‌ ಕ್ಯಾಪ್ಟನ್ಸಿ ಬಗ್ಗೆ ಅಸಮಾಧಾನ – ಡಿಕೆಗೆ ಕೊಹ್ಲಿ ದೂರು?

ಬೆಳಗಿನ ಜಾವ ಹಾಲಿನ ಕ್ರೇಟ್ ಇಳಿಸಿದ ಬಳಿಕ ಎಂಟ್ರಿ ಕೊಡುವ ಕಳ್ಳರು ಬೆಳಗಿನ ಜಾವ 4 ಗಂಟೆಯಿಂದ 5 ಗಂಟೆ ಸಮಯದಲ್ಲಿ ಹಾಲು ಕದ್ದು ಎಸ್ಕೇಪ್ ಆಗುತ್ತಾರೆ. ಇದೇ ತಿಂಗಳ 4ರಂದು ಬೆಳಗಿನ ಜಾವ 4.11ಕ್ಕೆ 2 ಸ್ಕೂಟರ್‌ಗಳಲ್ಲಿ ಬಂದಿದ್ದ ಕಳ್ಳರು ನಾಲ್ಕೈದು ಲೀಟರ್ ಹಾಲು ಕದ್ದು ಪರಾರಿಯಾಗಿದ್ದರು. ಇದನ್ನೂ ಓದಿ: ಡಿಸಿಗೆ ಪ್ರಮೋದಾದೇವಿ ಪತ್ರ – ಜಾಗ ನೀಡಿದ್ರೆ 4500 ಜನರ ಇಡೀ ಗ್ರಾಮವೇ ಖಾಲಿ!

ಈ ಪ್ರದೇಶಗಳಲ್ಲಿ ಪೊಲೀಸರ ಬೀಟ್ ಹೆಚ್ಚಾದರೆ ಇಂಥ ಕಳ್ಳತನ ನಿಲ್ಲಬಹುದು ಎಂದು ಹಾಲುಗಳ್ಳರ ಕಾಟಕ್ಕೆ ಹೈರಾಣಾಗಿರುವ ಅಂಗಡಿ ಮಾಲೀಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಪತ್ನಿಯ ಜೊತೆಗಿದ್ದ ಪ್ರಿಯಕರನ ಬರ್ಬರ ಹತ್ಯೆ – ಒಂದೇ ಗಂಟೆಯಲ್ಲಿ ಪತ್ತೆ ಹಚ್ಚಿದ ತಾರಾ!

Share This Article