ಹಾಲು ಮತ್ತು ಡ್ರೈ ಫ್ರೂಟ್ಸ್ ಮಕ್ಕಳಿಂದ ವೃದ್ಧರವರೆಗೂ ತುಂಬಾ ಅಗತ್ಯವಾದ ಪೌಷ್ಟಿಕ ಆಹಾರವಾಗಿದೆ. ಇವೆರೆಡನ್ನು ಸೇರಿಸಿ ನಿಮಗೆ ಇಂದು ಅದ್ಭುತ ಮತ್ತು ಆರೋಗ್ಯಕರವಾದ ರೆಸಿಪಿಯನ್ನು ಕೇಳಿಕೊಡುತ್ತಿದ್ದೇವೆ. ಇದನ್ನು ಎಲ್ಲರೂ ಇಷ್ಟಪಟ್ಟು ಸವಿಯುತ್ತಾರೆ. ಜೊತೆಗೆ ಎಲ್ಲರಿಗೂ ತುಂಬಾ ಅವಶ್ಯಕವಾದ ಪೋಷಕಾಂಶವನ್ನು ಈ ರೆಸಿಪಿ ಹೊಂದಿದೆ. ನಾವು ಇಂದು ಕೇಳಿಕೊಡುವ ‘ಡ್ರೈ ಫ್ರೂಟ್ಸ್ ಹಾಲಿನ ಶರಬತ್ತುನ್ನು ವಾರಕ್ಕೊಮ್ಮೆಯಾದರು ಮಾಡಿಕೊಂಡು ಕುಡಿದರೆ ದೇಹಕ್ಕೆ ತುಂಬಾ ಒಳ್ಳೆಯದು.
Advertisement
ಡ್ರೈ ಫ್ರೂಟ್ ಪೇಸ್‍ಗಾಗಿ ಬೇಕಾಗಿರುವ ಪದಾರ್ಥಗಳು:
* ಬಾದಾಮಿ – 2 ಟೇಬಲ್ಸ್ಪೂನ್
* ಪಿಸ್ತಾ – 2 ಟೇಬಲ್ಸ್ಪೂನ್
* ಗೋಡಂಬಿ – 2 ಟೇಬಲ್ಸ್ಪೂನ್
* ಬಿಸಿನೀರು (ನೆನೆಸಲು)
* ಹಾಲು – 2 ಟೇಬಲ್ಸ್ಪೂನ್
Advertisement
Advertisement
ಶರಬತ್ತುಗೆ ಬೇಕಾಗಿರುವ ಪದಾರ್ಥಗಳು:
* ಹಾಲು – ಒಂದುವರೆ ಲೀಟರ್
* ಕೇಸರಿ – ಸ್ವಲ್ಪ
* ಕಸ್ಟರ್ಡ್ ಪುಡಿ – 2 ಟೀಸ್ಪೂನ್
* ಸಕ್ಕರೆ – ಅರ್ಧ ಕಪ್
* ಪಿಸ್ತಾ(ಅಲಂಕರಿಸಲು)
Advertisement
ಮಾಡುವ ವಿಧಾನ:
* ಮೊದಲನೆಯದಾಗಿ, ಒಂದು ಬಟ್ಟಲಿನಲ್ಲಿ ಬಾದಾಮಿ, ಪಿಸ್ತಾ, ಗೋಡಂಬಿ ತೆಗೆದುಕೊಳ್ಳಿ. ಬಿಸಿನೀರಿನಲ್ಲಿ 10 ನಿಮಿಷಗಳ ಕಾಲ ನೆನೆಸಿ.
* ಬಾದಾಮಿಯ ಸಿಪ್ಪೆಯನ್ನು ತೆಗೆದು ಡ್ರೈ ಫ್ರೂಟ್ಸ್‍ಗಳನ್ನು ಮಿಕ್ಸರ್ ಜಾರ್‌ಗೆ ಹಾಕಿ ಹಾಲು ಸೇರಿಸಿ ರುಬ್ಬಿಕೊಳ್ಳಿ. ಇದನ್ನು ಪಕ್ಕಕ್ಕೆ ಇರಿಸಿ.
* ದೊಡ್ಡ ಕಡಾಯಿಯಲ್ಲಿ ಹಾಲು ಹಾಕಿ ಅದಕ್ಕೆ ಕೇಸರಿ ಹಾಕಿ ಹಾಲನ್ನು ಕುದಿಸಿ.
* ಈಗ ತಯಾರಾದ ನಟ್ಸ್ ಪೇಸ್ಟ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಹಾಲು ಸ್ವಲ್ಪ ಗಟ್ಟಿಯಾಗುವವರೆಗೂ ಕುದಿಸಿ.
* ಸಣ್ಣ ಬಟ್ಟಲಿನಲ್ಲಿ ಕಸ್ಟರ್ಡ್ ಪುಡಿ ಮತ್ತು ಹಾಲು ತೆಗೆದುಕೊಳ್ಳಿ. ನಂತರ ಕಸ್ಟರ್ಡ್ ಪುಡಿಯನ್ನು ಹಾಲಿನೊಂದಿಗೆ ಚೆನ್ನಾಗಿ ಮಿಶ್ರಣ ಮಾಡಿ. ಕಸ್ಟರ್ಡ್ ಮಿಶ್ರಣವನ್ನು ಹಾಲಿನ ಮಿಶ್ರಣಕ್ಕೆ ಸುರಿದು ಚೆನ್ನಾಗಿ ಮಿಕ್ಸ್ ಮಾಡಿ. ನಂತರ ಸಕ್ಕರೆಯನ್ನು ಸೇರಿಸಿ ಸರಿಯಾಗಿ ಸಂಯೋಜಿಸಿ. ಗ್ಯಾಸ್ ಆಫ್ ಮಾಡಿ.
* ಹಾಲು ಸಂಪೂರ್ಣವಾಗಿ ತಣ್ಣಗಾದ ಮೇಲೆ ಅದನ್ನು ದೊಡ್ಡ ಬಟ್ಟಲಿಗೆ ವರ್ಗಾಯಿಸಿ ಮತ್ತು 4 ಗಂಟೆಗಳ ಕಾಲ ರೆಫ್ರಿಜೆರೇಟ್‍ನಲ್ಲಿ ಹಿಡಿ.
* 4 ಗಂಟೆಗಳ ನಂತರ ಹಾಲಿನ ಶರ್ಬತ್‍ನ್ನು ಚೆನ್ನಾಗಿ ಮಿಕ್ಸ್ ಮಾಡಿ.
– ಅಂತಿಮವಾಗಿ, ಹಾಲಿನ ಶರಬತ್ತನ್ನು ಐಸ್ ಕ್ಯೂಬ್, ಪಿಸ್ತಾ ಮತ್ತು ಕೇಸರಿ ಹಾಕಿ ಸರ್ವ್ ಮಾಡಿ.