ತಿರುವನಂತಪುರಂ: ಕರ್ನಾಟಕದಲ್ಲಿ (Karnataka) ಹಾಲಿನ (Milk) ದರ ಹೆಚ್ಚಳಗೊಂಡ ಬೆನ್ನಲ್ಲೇ ಕೇರಳದ (Kerala) ಹಾಲು ಒಕ್ಕೂಟ ಮಿಲ್ಮಾ (Milma) ಹಾಲಿನ ದರ ಹೆಚ್ಚಳಕ್ಕೆ ಮುಂದಾಗಿದೆ.
Advertisement
ಮಿಲ್ಮಾ ಹಾಲಿನ ದರವನ್ನು ಡಿ.1 ರಿಂದ ಲೀಟರ್‌ಗೆ 6 ರೂ. ಏರಿಕೆಗೆ ನಿರ್ಧರಿಸಿದೆ. ಈ ಹಿಂದೆ 2019ರಲ್ಲಿ ಲೀ.4 ರೂ. ಏರಿಸಲಾಗಿತ್ತು. ಇದೀಗ 3 ವರ್ಷಗಳ ನಂತರ ಲೀ.6 ರೂ. ಏರಿಕೆ ಮಾಡಲು ಮಿಲ್ಮಾ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ಮನೆ ಕೆಲಸದಾಕೆ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗ ಹೃದಯಾಘಾತ
Advertisement
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಮಿಲ್ಮಾ ಫೆಡರೇಶನ್ ಅಧ್ಯಕ್ಷ ಕೆ.ಎಸ್. ಮಣಿ, ಈ ಹಿಂದೆ ಹಾಲಿನ ದರ ಏರಿಕೆ ಮಾಡಿದಾಗ ರೈತರಿಗೆ 3.35 ರೂ. ಸಿಗುತ್ತಿತ್ತು. ಇದೀಗ 6 ರೂ. ಏರಿಕೆ ಮಾಡಿದಾಗ 5.25 ರೈತರಿಗೆ ಸಿಗಲಿದೆ. ಈ ಬಗ್ಗೆ ಮಿಲ್ಮಾ ಹಾಲು ಒಕ್ಕೂಟದ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದರು.
Advertisement
Advertisement
ಮಿಲ್ಮಾ ಹಾಲು ದರ ಏರಿಕೆಗೂ ಮುನ್ನ ಪಶುವೈದ್ಯಕೀಯ ಮತ್ತು ಕೃಷಿ ವಿಶ್ವವಿದ್ಯಾನಿಲಯಗಳು ಹೈನುಗಾರರಿಗೆ ತಗಲುವ ವೆಚ್ಚಗಳ ಕುರಿತು ಅಧ್ಯಯನ ನಡೆಸಿತ್ತು. ಈ ಅಧ್ಯಯನದ ವರದಿಯನ್ನು ಆಧಾರಿಸಿದಾಗ ರೈತರಿಗೆ ಒಂದು ಲೀ.ಗೆ 8.57 ರೂ. ನಷ್ಟವಾಗುತ್ತಿರುವ ಬಗ್ಗೆ ಸ್ಪಷ್ಟವಾಗಿತ್ತು. ಹಾಗಾಗಿ ಮಿಲ್ಮಾ ಹಾಲಿನ ದರ 6 ರೂ. ಏರಿಕೆಗೆ ನಿರ್ಧರಿಸಿದೆ. ಇದನ್ನೂ ಓದಿ: ಐಫೋನ್ ಫ್ಯಾಕ್ಟರಿಯ ಘರ್ಷಣೆ – ಲಾಕ್‌ಡೌನ್ ವಿಸ್ತರಿಸಿದ ಚೀನಾ