ಬೆಂಗಳೂರು: ಗ್ಯಾರಂಟಿಗಳ (Congress Guarantee) ಭಾರದ ಮಧ್ಯೆ ರಾಜ್ಯದ ಜನತೆಗೆ ಬಸ್, ಮೆಟ್ರೋ ಬಳಿಕ ಪ್ರತಿ ಲೀಟರ್ ಹಾಲು ದರವನ್ನು (Milk Price Hike) 4 ರೂ. ಹೆಚ್ಚಳ ಮಾಡುವ ಮೂಲಕ ಸರ್ಕಾರ ಶಾಕ್ ನೀಡಿದೆ.
ಇಂಧನ ಇಲಾಖೆ ನೌಕರರ ಪಿಂಚಣಿ ಗ್ರಾಚ್ಯೂಟಿಗಾಗಿ ಯೂನಿಟ್‌ಗೆ 36 ಪೈಸೆ ಹೆಚ್ಚಿಸಿದ್ದ ಸರ್ಕಾರ ಈಗ ಅದೇ ಮಾದರಿಯಲ್ಲಿ ಹಾಲಿನ ದರ (Milk Price) ಹೆಚ್ಚಿಸಿ ರೈತರಿಗೆ ಪ್ರೋತ್ಸಾಹ ಧನ ಕೊಡಲು ಹೊರಟಿದೆ. ಏಪ್ರಿಲ್ 1ರಿಂದ ಅನ್ವಯವಾಗುವಂತೆ ನಂದಿನಿ ಹಾಲು-ಮೊಸರಿನ ಬೆಲೆಯನ್ನು ನಾಲ್ಕು ರೂಪಾಯಿ ಹೆಚ್ಚಿಸಿದೆ.
ಇಂದು ನಡೆದ ಸಂಪುಟ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಂಡಿದೆ. ಪ್ರತಿ ಪಾಕೆಟ್‌ನಲ್ಲಿ ಹೆಚ್ಚುವರಿಯಾಗಿ ನೀಡುತ್ತಿದ್ದ 50 ಎಂಎಲ್ ಹಾಲನ್ನು ಕಡಿತ ಮಾಡಿದೆ. ಇದಕ್ಕೆ 2 ರೂಪಾಯಿ ಇಳಿಕೆ ಮಾಡಿದ್ದೇವೆ. ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ನಮ್ಮ ರಾಜ್ಯದಲ್ಲಿ ಹಾಲಿನ ಬೆಲೆ ಕಡಿಮೆ ಇದೆ. ಈಗ ಹೆಚ್ಚಿಸ್ತಿರುವ 4 ರೂಪಾಯಿಯನ್ನು ನೇರವಾಗಿ ರೈತರಿಗೆ ಕೊಡುತ್ತೇವೆ ಎಂದು ಸಮರ್ಥನೆ ನೀಡಿದೆ. ಇದನ್ನೂ ಓದಿ: ಮದ್ಯಪ್ರಿಯರಿಗೆ ಸರ್ಕಾರದಿಂದ ಶಾಕ್ | ಯಾವುದು ಎಷ್ಟು ಏರಿಕೆ?
ಕಾಂಗ್ರೆಸ್ (Congress) ಸರ್ಕಾರ ಅಧಿಕಾರಕ್ಕೆ ಬಂದ ನಂತರ ಯಾವುದರ ಬೆಲೆ ಏರಿಕೆಯಾಗಿದೆ ಜೊತೆಗೆ ಮುಂದೆ ಏನೇನು ಏರಿಕೆಯಾಗಲಿದೆ ಈ ಎಲ್ಲಾ ವಿಚಾರಗಳನ್ನು ಈ ಕೆಳಗೆ ನೀಡಲಾಗಿದೆ.
ಹಾಲು:
2 ವರ್ಷದಲ್ಲಿ ಹಾಲಿನ ದರ 3 ಬಾರಿ ಹೆಚ್ಚಳ ಮಾಡಲಾಗಿದೆ. 20 ತಿಂಗಳಲ್ಲಿ ಲೀಟರ್ ಹಾಲಿನ ದರ 9 ರೂ. ಏರಿಕೆಯಾಗಿದೆ. ಆ.23 ರಂದು 3 ರೂ., ಜೂ. 24 ರಂದು 2 ರೂ. ಈಗ 4 ರೂ.ಏರಿಕೆ ಮಾಡಲಾಗಿದೆ.
ವಿದ್ಯುತ್ ದರ:
ಪಿಂಚಣಿ, ಗ್ರಾಚ್ಯುಟಿಗಾಗಿ ಯೂನಿಟ್‌ಗೆ 36 ಪೈಸೆ ಹೆಚ್ಚಳ. ಈಗ ಮಾಸಿಕ ನಿಗದಿತ ಶುಲ್ಕ 25 ರೂ. ಏರಿಕೆ. ಇದನ್ನೂ ಓದಿ: ಸರ್ಕಾರವೇ ಹಣ ಕೊಡೋಕೆ ಪ್ರಿಂಟಿಂಗ್ ಮಿಷನ್ ಇಟ್ಟಿಲ್ಲ: ಸಚಿವ ರಾಜಣ್ಣ
ತೈಲ:
ಪೆಟ್ರೋಲ್ ದರ ಪ್ರತಿ ಲೀಟರ್‌ಗೆ 3 ರೂ., ಡೀಸೆಲ್ ದರ 3.50 ರೂ. ಹೆಚ್ಚಳ
ಬಸ್
ಬಸ್ ಪ್ರಯಾಣದರ 3 ರಿಂದ 10 ರೂ. ಹೆಚ್ಚಳ ಇದನ್ನೂ ಓದಿ: ರಾಜ್ಯದ ಜನತೆಗೆ ಕರೆಂಟ್ ಶಾಕ್ – ಫಿಕ್ಸೆಡ್ ಚಾರ್ಜ್ ದರ 25 ರೂ. ಏರಿಕೆ
ಮೆಟ್ರೋ:
ಶೇ.40ರಿಂದ 70%ವರೆಗೆ ಪ್ರಯಾಣ ದರ ಹೆಚ್ಚಳ. ಸದ್ಯ ದೇಶದಲ್ಲೇ ಬೆಂಗಳೂರಿನ ಮೆಟ್ರೋ ದರ ದುಬಾರಿ.
ಆಸ್ತಿ ನೋಂದಣಿ ಶುಲ್ಕ ಹೆಚ್ಚಳ
ಶೇ.200ವರೆಗೆ ನೋಂದಣಿ ಶುಲ್ಕವನ್ನು ಸರ್ಕಾರ ಹೆಚ್ಚಿಸಿದೆ. ಈ ಮೊದಲು 6,000 ರೂ. ನಿಂದ 7,000 ರೂ. ಇತ್ತು. ಈಗ 25,000 ರೂ. ನಿಂದ 30,000 ರೂ.ಗೆ ಹೆಚ್ಚಳವಾಗಿದೆ.
ಮುದ್ರಾಂಕ ಶುಲ್ಕ:
50ರೂ.ನಿಂದ 500ರೂ.ಗೆ ಹೆಚ್ಚಳ
ಅಫಿಡವಿಟ್ ಶುಲ್ಕ:
20 ರೂ.ನಿಂದ 100 ರೂ. ಏರಿಕೆ
ಮುಂದೆ ಏನೇನು ಏರಿಕೆ?
ಶೀಘ್ರ ನೀರಿನ ದರ ಏರಿಕೆ:
ಲೀಟರ್‌ಗೆ ಒಂದು ಪೈಸೆ ಏರಿಕೆ. ಏ.1ರಿಂದ ಜಾರಿ ಆಗುವ ಸಾಧ್ಯತೆಯಿದೆ.
ಕಸ ಸಂಗ್ರಹ ಸೆಸ್ (ಮಾಸಿಕ)
ವಸತಿ ಕಟ್ಟಡ
600 ಚದರಡಿವರೆಗೆ – 10 ರೂ., 601-1000 ಚದರಡಿ – 50 ರೂ., 1001-2000 ಚದರಡಿ – 100 ರೂ., 2001-3000 ಚದರಡಿ – 150 ರೂ., 3001-4000 ಚದರಡಿ – 200 ರೂ., 4000 ಚದರಡಿ ಮೇಲ್ಪಟ್ಟು – 400 ರೂ.
ವಾಣಿಜ್ಯ ಕಟ್ಟಡ:
ನಿತ್ಯ 5ಕೆಜಿವರೆಗೆ – 500 ರೂ. ನಿತ್ಯ 10 ಕೆಜಿವರೆಗೆ – 1400 ರೂ. ನಿತ್ಯ 25 ಕೆಜಿವರೆಗೆ – 3500 ರೂ. ನಿತ್ಯ 50 ಕೆಜಿವರೆಗೆ – 7000 ರೂ., ನಿತ್ಯ 100 ಕೆಜಿವರೆಗೆ – 14000 ರೂ.