ಬೆಂಗಳೂರು: ಬಸ್, ಮೆಟ್ರೋ ದರ ಏರಿಕೆ ಬಳಿಕ ಇದೀಗ ರಾಜ್ಯದಲ್ಲಿ ಹಾಲಿನ ದರ ಏರಿಕೆಗೆ (Milk Rate Hike) ಪ್ರಸ್ತಾಪಿಸಿದ್ದು, ಇಂದು ಕ್ಯಾಬಿನೆಟ್‌ನಲ್ಲಿ (Cabinet) ನಿರ್ಧಾರವಾಗಲಿದೆ.ಇದನ್ನೂ ಓದಿ:ಹಾಲಿನ ದರ ಏರಿಕೆ – ಇಂದು ಸಿಎಂ ಸಭೆಯಲ್ಲಿ ನಿರ್ಧಾರ ಸಾಧ್ಯತೆ!
ನಡೆದ ಸಭೆಯಲ್ಲಿ ಸಿಎಂ (CM Siddaramaiah) ಈ ದರಕ್ಕೆ ಒಪ್ಪಿಗೆ ಸೂಚಿಸಿರಲಿಲ್ಲ. ಹಾಲಿನ ದರ ಹೆಚ್ಚಳ ಹಣ ಕೇವಲ ರೈತರಿಗಷ್ಟೇ ಇರಲಿ ಎಂದಿದ್ದರು. ಆದರೆ ಸಭೆಯ ಬಳಿಕ 5 ರೂ.ಯಾದರೂ ಹೆಚ್ಚಳ ಮಾಡಿ, ಅದರಲ್ಲಿ 3 ರೂ. ರೈತರಿಗೆ, 2 ರೂ. ಒಕ್ಕೂಟಗಳಿಗೆ ಇರಲಿ ಎಂದು ಪ್ರಸ್ತಾಪಿಸಿದ್ದರು.
ಒಕ್ಕೂಟಗಳ ಪ್ರಸ್ತಾಪವನ್ನು ಒಪ್ಪದೇ ಕ್ಯಾಬಿನೆಟ್‌ನಲ್ಲಿ ತೀರ್ಮಾನಿಸುವಾಗಿ ಸಿಎಂ ತಿಳಿಸಿದ್ದರು. ಈ ಹಿನ್ನೆಲೆ ಇವತ್ತು ಕ್ಯಾಬಿನೆಟ್ ಸಭೆಯಲ್ಲಿ ಹಾಲಿನ ದರ ಏರಿಕೆ ಪ್ರಸ್ತಾಪಿಸುವ ಸಾಧ್ಯತೆಯಿದ್ದು, 2 ಅಥವಾ 3 ರೂ. ಹೆಚ್ಚಳಕ್ಕೆ ಗ್ರೀನ್ ಸಿಗ್ನಲ್ ಕೊಡುತ್ತಾ ಎಂದು ಕಾದುನೋಡಬೇಕಿದೆ.ಇದನ್ನೂ ಓದಿ: ಬಿಎಂಟಿಸಿ ಬಸ್ ಹರಿದು ಇಬ್ಬರು ವ್ಯಕ್ತಿಗಳ ಸಾವು – ಚಾಲಕ, ನಿರ್ವಾಹಕ ಎಸ್ಕೇಪ್