ಕ್ಷೀರ ಎಂಬುದು ಸಂಸ್ಕೃತ ಪದವಾಗಿದ್ದು, ಇದರ ಅರ್ಥ ಹಾಲು. ಹಾಲು ಮತ್ತು ಅನ್ನದಿಂದ ಕ್ಷೀರಾನ್ನವನ್ನು ಮಾಡುವುದು ಹೇಗೆ ಎಂಬುದನ್ನು ಹೇಳಿಕೊಡುತ್ತೇವೆ. ಇದು ತುಂಬಾ ಸುಲಭವಾಗಿದ್ದು, ದೇವಸ್ಥಾನಗಳಲ್ಲಿ ವಿಶೇಷ ಸಂದರ್ಭದಲ್ಲಿ ಇದನ್ನು ಮಾಡುತ್ತಾರೆ. ದೇವಸ್ಥಾನದಲ್ಲಿ ಮಾಡುವಂತೆಯೇ ರುಚಿಯಾಗಿ ಮನೆಯಲ್ಲೇ ಕ್ಷೀರಾನ್ನ ಮಾಡುವುದನ್ನು ಟ್ರೈ ಮಾಡಿ.
Advertisement
ಬೇಕಾಗಿರುವ ಪದಾರ್ಥಗಳು:
* ಹಾಲು – 1 ಲೀಟರ್
* ಕಲ್ಲು ಸಕ್ಕರೆ – 1 ಕಪ್
* ಏಲಕ್ಕಿ – 4 (ಪುಡಿಮಾಡಿ)
* ತುಪ್ಪ – 1/2 ಕಪ್
* ಗೋಡಂಬಿ – 20 ರಿಂದ 25
* ಒಣದ್ರಾಕ್ಷಿ – 2 ಟೀಸ್ಪೂನ್
Advertisement
Advertisement
ಮಾಡುವ ವಿಧಾನ:
* ಅಕ್ಕಿಯನ್ನು ತೊಳೆದು ನೀರನ್ನು ತೆಗೆಯಿರಿ. ಅನ್ನವನ್ನು ಬಿಸಿ ಮಾಡಿಕೊಳ್ಳಿ.
* ಒಂದು ಬಾಣಲೆಗೆ ಹಾಲು ಹಾಕಿ ಚೆನ್ನಾಗಿ ಕುದಿಸಿ.
* ಕುದಿಯುತ್ತಿದ್ದ ಹಾಲಿಗೆ ಕಲ್ಲುಸಕ್ಕರೆ ಸೇರಿಸಿ ಸಂಪೂರ್ಣವಾಗಿ ಕರಗುವವರೆಗೂ ಬೇಯಿಸಿ.
* ಸಕ್ಕರೆ ಸಂಪೂರ್ಣವಾಗಿ ಹಾಲಿನಲ್ಲಿ ಕರಗಿದೆಯೇ ಎಂದು ಖಚಿತಪಡಿಸಿಕೊಳ್ಳಿ. ನಂತರ ಅದಕ್ಕೆ ಬೇಯಿಸಿದ ಅನ್ನವನ್ನು ಸೇರಿಸಿ ಮತ್ತು ಮಿಶ್ರಣ ಮಾಡಿ. ಅಗತ್ಯವಿದ್ದರೆ ಹೆಚ್ಚು ಹಾಲು ಸೇರಿಸಿ ಕುದಿಸಿ.
Advertisement
* 3 ಚಮಚ ತುಪ್ಪವನ್ನು ಸೇರಿಸಿ ಮತ್ತು ಏಲಕ್ಕಿ ಪುಡಿಯನ್ನು ಹಾಕಿ, ಒಟ್ಟಿಗೆ ಮಿಶ್ರಣ ಮಾಡಿ 5 ರಿಂದ 6 ನಿಮಿಷ ಬೇಯಿಸಿ.
* ಇನ್ನೊಂದು ಪ್ಯಾನ್‍ಗೆ ಉಳಿದ ತುಪ್ಪವನ್ನು ಸೇರಿಸುವ ಮೂಲಕ ಬಿಸಿ ಮಾಡಿ, ಅದಕ್ಕೆ ಗೋಡಂಬಿ ಮತ್ತು ಒಣದ್ರಾಕ್ಷಿಯನ್ನು ಹಾಕಿ ಗೋಲ್ಡನ್ ಬ್ರೌನ್ ಬರುವವರೆಗೂ ಹುರಿಯಿರಿ.
* ಮಿಶ್ರಣವನ್ನು ಕ್ಷೀರಾನ್ನದ ಮೇಲೆ ಹಾಕಿ ನಂತರ ಸವಿಯಿರಿ.