ಬೆಂಗಳೂರು: ಭಾರತದ ಕ್ಷೀರಕ್ರಾಂತಿಯ ಪ್ರಮುಖ ಪಾತ್ರಧಾರಿ ವರ್ಗಿಸ್ ಕುರಿಯನ್ ಅವರ ಕಂಚಿನ ಪ್ರತಿಮೆ ಕನ್ನಡಿಗನಿಂದಾಗಿ ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ.
ಮಿಚಿಗನ್ ವಿವಿಯ ಹಳೆ ವಿದ್ಯಾರ್ಥಿ ವರ್ಗಿಸ್ ಕುರಿಯನ್ ಅವರ ಕಂಚಿನ ಪ್ರತಿಮೆಯನ್ನು ವಿವಿಯ ಕಾಲೇಜು ಆಫ್ ಎಂಜಿನಿಯರಿಂಗ್ ಆಂಡ್ ಆಗ್ರಿಕಲ್ಚರ್ ಆವರಣದ ಒಳಗಡೆ ಮೇ 25 ರಂದು ಸ್ಥಾಪನೆ ಮಾಡಲಾಗಿದೆ.
Advertisement
ಶಿವಮೊಗ್ಗ ಹಾಲು ಓಕ್ಕೂಟದದಲ್ಲಿ ಡೈರಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಡಿವಿ ಮಲ್ಲಿಕಾರ್ಜುನ ಅವರು ವರ್ಗಿಸ್ ಕುರಿಯನ್ ಅವರ ಕಂಚಿನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.
Advertisement
ಈ ಕಾರ್ಯಕ್ರಮದಲ್ಲಿ ಮಿಚಿಗನ್ ವಿವಿಯ ಇಂಟರ್‍ನ್ಯಾಷನಲ್ ಸ್ಟಡೀಸ್ ಆಂಡ್ ಪ್ರೋಗ್ರಾಂನ ಡೀನ್ ಸ್ವೀವ್ ಹ್ಯಾನ್ ಸನ್ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ. ಸತೀಶ್ ಉಡುಪ ಉಪಸ್ಥಿತರಿದ್ದರು.
Advertisement
ವರ್ಗಿಸ್ ಕುರಿಯನ್ ಅವರು 1948ರಲ್ಲಿ ಲೋಹಶಾಸ್ತ್ರ ಮತ್ತು ನ್ಯೂಕ್ಲಿಯರ್ ಫಿಸಿಕ್ಸ್ ನಲ್ಲಿ ಮಿಚಿಗನ್ ವಿವಿಯಲ್ಲಿ ಎಂಎಸ್ ಓದಿದ್ದರು. ಅವರಿಗೆ ಗೌರವ ನೀಡುವ ಉದ್ದೇಶದಿಂದ ಅವರು ಓದಿದ ವಿವಿಯಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ದೇಶದ ಹೊರಗಡೆ ಕುರಿಯನ್ ಅವರ ಪ್ರತಿಮೆ ಸ್ಥಾಪನೆ ಆಗಿರುವುದು ಇದೇ ಮೊದಲು ಎಂದು ಡಿವಿ ಮಲ್ಲಿಕಾರ್ಜುನ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.
Advertisement
ವರ್ಗಿಸ್ ಕುರಿಯನ್ ಯಾರು?
ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಸಂಸ್ಥಾಪಕ ಅಧ್ಯಕ್ಷರಾಗಿ, ಕುರಿಯನ್ ಅವರು ಅಮುಲ್ ಡೈರಿ ಉತ್ಪನ್ನಗಳ ಬ್ರಾಂಡ್ ನ ಸೃಷ್ಟಿ ಮತ್ತು ಯಶಸ್ಸಿಗೆ ಕಾರಣರಾದವರು ವರ್ಗಿಸ್ ಕುರಿಯನ್. ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದಲ್ಲಿ ಅವರ ಸಾಧನೆ ಕಂಡು ರಾಷ್ಟ್ರೀಯ ಮಟ್ಟದಲ್ಲಿ ನ ಅಮುಲ್ ಯಶಸ್ಸನ್ನು ಪುನರಾವರ್ತಿಸಲು, 1965 ರಲ್ಲಿ ಅವರನ್ನು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಸ್ಥಾಪಕ ಅಧ್ಯಕ್ಷರನ್ನಾಗಿ ನೇಮಿಸಿದರು.
ಕೆಲವು ವರ್ಷಗಳ ನಂತರ, ಕುರಿಯನ್ ರ ಮುಂದಾಳುತನದಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯು ಆಪರೇಷನ್ ಫ್ಲಡ್ ಅಥವಾ ವೈಟ್ ರೆವಲ್ಯೂಷನ್-ಕ್ಷೀರಕ್ರಾಂತಿ ಎಂಬ ಜಗತ್ತಿನ ಅತಿ ದೊಡ್ಡ ಡೈರಿ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿತು. ಆಪರೇಷನ್ ಫ್ಲಡ್ ಯೋಜನೆಯು ಭಾರತವನ್ನು ವಿಶ್ವದ ಅತ್ಯಂತ ದೊಡ್ಡ ಹಾಲು ಉತ್ಪಾದಕ ದೇಶವನ್ನಾಗಿ ಮಾಡಿತು; 2010-2011 ರಲ್ಲಿ, ಜಾಗತಿಕ ಉತ್ಪಾದನೆಯ ಸುಮಾರು ಪ್ರತಿ ನೂರಕ್ಕೆ 17 ರಷ್ಟು ಭಾಗವು ಭಾರತದ್ದಾಗಿತ್ತು .
ಭಾರತದ ಕ್ಷೀರ ಕ್ರಾಂತಿಯ ಪಿತಾಮಹ ಎಂದು ಬಣ್ಣಿಸಲ್ಪಟ್ಟ ಕುರಿಯನ್ ರವರು ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ವಿಭೂಷಣ ಪ್ರಶಸ್ತಿ, ವಿಶ್ವ ಆಹಾರ ಪ್ರಶಸ್ತಿ ಮತ್ತು ಮ್ಯಾಗ್ಸೇಸೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.
1921ರಲ್ಲಿ ಕೇರಳದಲ್ಲಿ ಜನಿಸಿದ ವರ್ಗಿಸ್ ಕುರಿಯನ್ 2012ರಲ್ಲಿ ನಿಧನರಾಗಿದ್ದರು.