ಬಾಗಲಕೋಟೆ: ಅವಕಾಶ ಸಿಕ್ಕರೆ ಸರ್ಕಾರ ಮಾಡ್ತೇವೆ. ಸರ್ಕಾರದ ಸಾವಿಗೆ ಹಾಲು ಸಾಕು, ನಾವು ವಿಷ ಹಾಕುವ ಅಗತ್ಯವಿಲ್ಲ. ಅವರೇ ಹಾಲು ಕುಡಿದು ಸಾಯುತ್ತಿದ್ದಾರೆ ಎಂದು ಮಾಜಿ ಸಚಿವ ಹಾಗೂ ಬಿಜೆಪಿ ರಾಜ್ಯ ಉಪಾಧ್ಯಕ್ಷ ಗೋವಿಂದ ಕಾರಜೋಳ ಹೊಸ ಬಾಂಬ್ ಸಿಡಿಸಿದ್ದಾರೆ.
ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅವರು, ಜನ ನಮ್ಮನ್ನು 104 ರಲ್ಲಿ ನಿಲ್ಲಿಸಿದ್ದಾರೆ. ಅದರಂತೆ ರಚನಾತ್ಮಕ ವಿರೋಧ ಪಕ್ಷವಾಗಿ ಕೆಲಸ ಮಾಡುತ್ತಿದ್ದೇವೆ. ಸುಖಾಸುಮ್ಮನೆ ಕಾಂಗ್ರೆಸ್‍ನವರು ಬೊಬ್ಬೆ ಹಾಕುತ್ತಿದ್ದಾರೆ. ಜೆಡಿಎಸ್ ಅವರಿಗೂ ಕಾಂಗ್ರೆಸ್ ನವರಿಗೂ ಹೊಂದಾಣಿಕೆ ಇಲ್ಲ. ಮೈತ್ರಿ ಸರ್ಕಾರದಲ್ಲಿ ಮೂರು ಗುಂಪುಗಳಾಗಿದ್ದು, ಬೆಳಗಾವಿಯದ್ದು ಒಂದು ಗುಂಪು, ದಾವಣೆಗೆರೆಯಲ್ಲಿ ಒಂದು ಗುಂಪು, ಬೆಂಗಳೂರಿನಲ್ಲಿ ಒಂದು ಗುಂಪು ಇದೆ. ಇನ್ನೂ ಬಹಳ ಮಂದಿ ಮುಖ್ಯಮಂತ್ರಿ ಆಗಬೇಕೆಂದು ಎಂದು ಬಹಳ ವರ್ಷಗಳಿಂದ ಕಾಯ್ತಾ ಇದ್ದಾರೆ. ಹೀಗೆ ಅವರು ತಮ್ಮ ಸಮಸ್ಯೆಗಳಿಗೆ ತಾವು ಒದ್ದಾಡುತ್ತಿದ್ದಾರೆ ಹೊರತು ಬಿಜೆಪಿ ಅವರಿಂದ ಅವರಿಗೆ ಯಾವುದೇ ತೊಂದರೆ ಇಲ್ಲ ಸರ್ಕಾರ ವಿರುದ್ಧ ವ್ಯಂಗ್ಯವಾಡಿದರು.
ರಾಜನಾಥ್ ಸಿಂಗ್ ಅವರು ಈ ದೇಶದ ಗೃಹ ಸಚಿವರಾಗಿದ್ದು, ಬುಧವಾರ ನಮ್ಮ ಪಕ್ಷದ ಕಾರ್ಯಕರಣಿ ಸಭೆ ಮಾಡಲಾಗುತ್ತದೆ. ಲೋಕಸಭಾ ಚುನಾವಣೆ ತಯಾರಿ ಯಾವ ರೀತಿ ಇರಬೇಕು ಎಂಬುದನ್ನು ಕುರಿತು ಮಾರ್ಗದರ್ಶನ ಮಾಡುವುದಕ್ಕೆ ಸಭೆ ಕರೆಯಲಾಗಿದೆ ಹೊರತು ಬೇರೆ ಏನು ಉದ್ದೇಶವಿಲ್ಲ. ಆಡಳಿತಾತ್ಮಕ ವಿಚಾರವಾಗಿ ಬರುತ್ತಿದ್ದಾರೆಯೇ ಹೊರತು ರಾಜಕೀಯ ವಿಚಾರವಾಗಿ ಬರುತ್ತಿಲ್ಲ ಎಂದು ಹೇಳಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv