ಮಡಿಕೇರಿ: ದಾರಿ ಹೋಕನೊಬ್ಬ ದೇವರಿಗೆ ಕೈ ಮುಗಿದು ಕಾಣಿಕೆ ಹಾಕಿ ಕಾಣಿಕೆ ಹುಂಡಿ ಮುಂದಿದ್ದ ಹಾಲಿನ ಬಾಟಲ್ ಒಂದನ್ನು ಎಗರಿಸಿರುವ ಘಟನೆ ಕೊಡಗಿನ ಸುಂಟಿಕೋಪ್ಪದಲ್ಲಿ ನಡೆದಿದೆ.
Advertisement
ಮಡಿಕೇರಿ ಹಾಗೂ ಮೈಸೂರಿನ ರಾಷ್ಟ್ರೀಯ ಹೆದ್ದಾರಿ ಬದಿಯಲ್ಲಿರುವ ಸುಂಟಿಕೋಪ್ಪ ಸಮೀಪದ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಅರ್ಚಕರು ಪ್ರತಿನಿತ್ಯ ಬೆಳಗ್ಗೆ ಸ್ಥಳೀಯ ನಿವಾಸಿಯೊಬ್ಬರಿಗೆ ತಮ್ಮ ಮನೆಯ ಹಸುವಿನ ಹಾಲನ್ನು ತಂದುಕೊಡುತ್ತಾರೆ. ಹಾಲು ತುಂಬಿದ ಬಾಟಲ್‍ನ್ನು ರಸ್ತೆ ಬದಿಯ ಕಾಣಿಕೆ ಹುಂಡಿಯ ಕಟ್ಟೆ ಮೇಲಿಡುತ್ತಾರೆ. ನಂತರ ಹಾಲು ಕೊಂಡುಕೊಳ್ಳುವ ವ್ಯಕ್ತಿ ಬಂದು ತೆಗೆದುಕೊಂಡು ಹೋಗುತ್ತಾರೆ. ಎಂದಿನಂತೆ ಇಂದು ಬೆಳಗ್ಗೆ ಅರ್ಚಕರು ಹಾಲನ್ನು ಹುಂಡಿಯ ಕಟ್ಟೆ ಮೇಲೆ ಇಟ್ಟು ಪೂಜಾ ಕಾರ್ಯ ನೆರವೇರಿಸಿ ಹಿಂತಿರುಗಿದ್ದಾರೆ. ಇದನ್ನೂ ಓದಿ: ಲೈಂಗಿಕ ದೌರ್ಜನ್ಯದಿಂದ ತಪ್ಪಿಸಿಕೊಳ್ಳಲು ತಂದೆಯನ್ನೇ ಹತ್ಯೆಗೈದ ಬಾಲಕಿ
Advertisement
Advertisement
ಸ್ವಲ್ಪ ಹೊತ್ತಿನಲ್ಲಿ ಹಾಲನ್ನು ತೆಗೆದುಕೊಂಡು ಹೋಗಲೆಂದು ಬಂದ ವ್ಯಕ್ತಿಗೆ ಹಾಲಿನ ಬಾಟಲ್ ಕಾಣಲಿಲ್ಲ. ಅರ್ಚಕರಿಗೆ ಕರೆ ಮಾಡಿ ಕೇಳಿದಾಗ ಹಾಲಿನ ಬಾಟಲ್ ಇಟ್ಟಿದ್ದನ್ನು ಖಾತರಿಪಡಿಸಿದ್ದಾರೆ. ಹೀಗಾಗಿ ಸಿಸಿಟಿವಿ ಪರಿಶೀಲಿಸಿದಾಗ ಅಚ್ಚರಿಯ ದೃಶ್ಯಾವಳಿ ಸೆರೆಯಾಗಿದೆ. ದಾರಿ ಹೋಕನೊಬ್ಬ ನೇರವಾಗಿ ಹುಂಡಿಯ ಬಳಿ ಬರುತ್ತಾನೆ. ದೇವರಿಗೆ ಕೈ ಮುಗಿಯುತ್ತಾನೆ. ಕಾಣಿಕೆ ಹಾಕುತ್ತಾನೆ ನಂತರ ಮುಲಾಜಿಲ್ಲದೇ ಹಾಲಿನ ಬಾಟಲ್ ಕದ್ದೊಯ್ಯುತ್ತಾನೆ. ವಿಷಯವರಿತ ಸ್ಥಳೀಯರು ಹೀಗೂ ಉಂಟೆ? ಎಂದು ಮೂಗಿನ ಮೇಲೆ ಬೆರಳಿಟ್ಟುಕೊಂಡಿದ್ದಾರೆ. ಇದನ್ನೂ ಓದಿ: ಸೆ.28 ರವರೆಗೆ ರಾಜ್ಯದಲ್ಲಿ ಮಳೆ – ಕರಾವಳಿ ಭಾಗದಲ್ಲಿ ಆರೆಂಜ್ ಅಲರ್ಟ್ ಘೋಷಣೆ
Advertisement