ಬಮಾಕೊ: ಉತ್ತರ ಮಾಲಿಯ (Mali) ನೈಜರ್ ನದಿಯಲ್ಲಿ (Niger River) ಗುರುವಾರ ಸೇನಾ ನೆಲೆ (Army Base) ಮತ್ತು ಪ್ರಯಾಣಿಕರ ಬೋಟ್ (Passenger Boat) ಮೇಲೆ ಉಗ್ರರು ದಾಳಿ (Attack) ನಡೆಸಿದ್ದು, ಘಟನೆಯಲ್ಲಿ 64 ಮಂದಿ ಸಾವನ್ನಪ್ಪಿದ್ದಾರೆ ಎಂದು ಮಾಲಿಯನ್‌ನ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸರ್ಕಾರಿ ಹೇಳಿಕೆಯ ಪ್ರಕಾರ, ನೈಜರ್ ನದಿಯಲ್ಲಿನ ಟಿಂಬಕ್ಟು ಬೋಟ್ ಮತ್ತು ಉತ್ತರ ಗಾವೊ ಪ್ರದೇಶದ ಬಾಂಬಾದಲ್ಲಿ ಸೇನಾ ಸ್ಥಾನವನ್ನು ಗುರಿಯಾಗಿರಿಸಿಕೊಂಡು ಎರಡು ಪ್ರತ್ಯೇಕ ದಾಳಿಗಳನ್ನು ನಡೆಸಿದ್ದು, 49 ನಾಗರಿಕರು ಮತ್ತು 15 ಸೈನಿಕರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದೆ. ಇದನ್ನೂ ಓದಿ: ಮಹಿಳೆಗೆ ಮುತ್ತಿಟ್ಟು, ಪೊಲೀಸ್ ಕಾರಿನಲ್ಲೇ ರೊಮ್ಯಾನ್ಸ್ – US ಅಧಿಕಾರಿ ಅಮಾನತು
ಪ್ರತ್ಯೇಕ ದಾಳಿಯಲ್ಲಿ ಎಷ್ಟು ಮಂದಿ ಮೃತಪಟ್ಟರು ಎಂಬುದನ್ನು ನಿರ್ದಿಷ್ಟವಾಗಿ ಹೇಳಿಲ್ಲ. ಆದರೆ ಈ ದುಷ್ಕೃತ್ಯ ಅಲ್-ಖೈದಾಗೆ ಸಂಯೋಜಿತವಾದ ಗುಂಪಿನಿಂದ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: 45 ಮಹಿಳೆಯರ ಮೇಲೆ ರೇಪ್ – ಪ್ರಿನ್ಸಿಪಾಲ್ ಅರೆಸ್ಟ್
ನದಿಯಲ್ಲಿ ಚಲಿಸುತ್ತಿದ್ದ ಬೋಟ್ ಮತ್ತು ಅದರ ಎಂಜಿನ್ ಅನ್ನು ಗುರಿಯಾಗಿರಿಸಿಕೊಂಡು ಕನಿಷ್ಟ ಮೂರು ರಾಕೆಟ್‌ಗಳಿಂದ ದಾಳಿ ನಡೆಸಲಾಗಿದೆ ಎಂದು ಬೋಟ್ ನಿರ್ವಾಹಕ ತಿಳಿಸಿದ್ದಾರೆ. ಹಡಗನ್ನು ನಿಶ್ಚಲಗೊಳಿಸಿದ್ದು, ಸೈನ್ಯವು ಪ್ರಯಾಣಿಕರನ್ನು ಸ್ಥಳಾಂತರಗೊಳಿಸುತ್ತಿದೆ ಎಂದು ಕೋಮನಾವ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ಯುದ್ಧಕಾಲದ ರಕ್ಷಣಾ ಸಚಿವರನ್ನ ವಜಾಗೊಳಿಸಿದ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ
ಅಲ್ -ಖೈದಾ ( Al-Qaeda) ಸಂಯೋಜಿತ ಮೈತ್ರಿಕೂಟ, ಇಸ್ಲಾಂ ಮತ್ತು ಮುಸ್ಲಿಮರ ಬೆಂಬಲ ಗುಂಪು (GSIM) ಕಳೆದ ತಿಂಗಳು ಉತ್ತರ ಮಾಲಿಯ ಐತಿಹಾಸಿಕ ಕ್ರಾಸ್‌ರೋಡ್ ನಗರವಾದ ಟಿಂಬಕ್ಟುವನ್ನು ನಿರ್ಬಂಧಿಸುವುದಾಗಿ ಘೋಷಿಸಿದ ಬಳಿಕ ಈ ದಾಳಿ ನಡೆದಿದೆ. ಇದನ್ನೂ ಓದಿ: 68ನೇ ವಯಸ್ಸಿನಲ್ಲಿ ಮೂರನೇ ಮದ್ವೆಯಾದ ಖ್ಯಾತ ವಕೀಲ ಹರೀಶ್ ಸಾಳ್ವೆ
Web Stories
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]