– ಎಲ್ಲಾ ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳ ಸಂಗಾತಿ ಮೈಲ್ ಸ್ಟೋನ್ ಅಕಾಡಮಿ
– ಬಡವರ ಮಕ್ಕಳಿಗೂ ಕೈಗೆಟುಕುತ್ತೆ ಐಎಎಸ್ ಕನಸು
ಬೆಂಗಳೂರು: ಐಎಎಸ್, ಕೆಎಎಸ್ ಪರೀಕ್ಷೆಗಳು ಮಧ್ಯಮವರ್ಗದ ವಿದ್ಯಾರ್ಥಿಗಳ ಕೈಗೆಟುಕದ ಕನಸು ಎಂಬಂಥಾ ವಾತಾವರಣವಿದೆ. ಇದಕ್ಕೆ ಕೋಚಿಂಗ್ ಕೂಡಾ ದುಬಾರಿ. ಅದನ್ನು ಭರಿಸಲಾಗುವುದಿಲ್ಲ ಎಂಬ ಸಂಕಟದಿಂದಲೇ ಮಕ್ಕಳ ಕನಸನ್ನು ಚಿವುಟಿದ ಸಂಕಟದಲ್ಲಿರೋ ಪೋಷಕರು, ಈ ಕಾರಣದಿಂದಲೇ ತಮ್ಮೊಳಗಿನ ಆಕಾಂಕ್ಷೆಗಳನ್ನು ಅದುಮಿಟ್ಟುಕೊಂಡು ಬೇರ್ಯಾವುದೋ ವೃತ್ತಿಯಲ್ಲಿ ಕಳೆದು ಹೋದವರು ಸಹಸ್ರ ಸಂಖ್ಯೆಯಲ್ಲಿ ಸಿಗಬಹುದು. ಈ ಕಾರಣದಿಂದಲೇ ಐಎಎಸ್ ಗೆ ಕರ್ನಾಟಕದ ಕೊಡುಗೆ ಶೇ.4 ರಷ್ಟಿದೆ. ಆದರೆ ಐಎಎಸ್ ಸೇರಿದಂತೆ ಸಖಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಅತ್ಯಂತ ಕಡಿಮೆ ವೆಚ್ಚದಲ್ಲಿ ಗುಣಮಟ್ಟದ ತರಬೇತಿ ಕೊಡೋ ಕೋಚಿಂಗ್ ಸೆಂಟರ್ ಒಂದು ಬೆಂಗಳೂರಿನಲ್ಲಿಯೇ ಕಾರ್ಯ ನಿರ್ವಹಿಸುತ್ತಿದೆ.
ಬಹುಶಃ ಇಡೀ ದೇಶದಲ್ಲಿ ಯಾವ ಮೂಲೆಯನ್ನ ಜಾಲಾಡಿದರೂ ಇದರಷ್ಟು ಕಡಿಮೆ ಮೊತ್ತಕ್ಕೆ ಇಷ್ಟೊಂದು ಗುಣಮಟ್ಟದ ತರಬೇತಿ ಕೊಡೋ ಮತ್ತೊಂದು ಸಂಸ್ಥೆ ಸಿಗಲು ಸಾಧ್ಯವಿಲ್ಲ. ಹೀಗೆ ಯಾವ ವ್ಯಾವಹಾರಿಕ ಅಬ್ಬರವೂ ಇಲ್ಲದೇ ಕರ್ನಾಟಕವನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಉನ್ನತ ಮಟ್ಟಕ್ಕೇರಿಸಬೇಕೆಂಬ ಧ್ಯೇಯವನ್ನೇ ಧ್ಯಾನವಾಗಿಸಿಕೊಂಡಿರುವ ಸಂಸ್ಥೆ ಮೈಲ್ ಸ್ಟೋನ್ ಅಕಾಡಮಿ. ಈ ಸಂಸ್ಥೆ ಬೆಂಗಳೂರಿನ ಯಶವಂತಪುರದಲ್ಲಿ ತನ್ನ ಪಾಡಿಗೆ ತಾನು ಕಾರ್ಯ ನಿರ್ವಹಿಸುತ್ತಿದೆ.
Advertisement
Advertisement
ಜೀವಿತಾ ಎನ್ ಅವರು ಈಗ್ಗೆ ಏಳು ವರ್ಷದ ಹಿಂದೆ ಅಪ್ಪಟ ಶಿಕ್ಷಣದ ಪಾವಿತ್ರ್ಯದ ಭೂಮಿಕೆಯಲ್ಲಿ ಹುಟ್ಟು ಹಾಕಿರುವ ಸಂಸ್ಥೆ ಮೈಲ್ ಸ್ಟೋನ್ ಅಕಾಡಮಿ. ಇಲ್ಲಿ ಐಎಎಸ್, ಕೆಎಎಸ್ ಸೇರಿದಂತೆ ಎಲ್ಲಾ ವಿಧದ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಗುಣಮಟ್ಟದ ಕೋಚಿಂಗ್ ನೀಡಲಾಗುತ್ತಿದೆ. ಇದುವರೆಗೂ ಕೇಂದ್ರ ಮತ್ತು ರಾಜ್ಯ ಸರ್ಕಾರ ಮಟ್ಟದ ಐಎಎಸ್, ಕೆಎಎಸ್ ಸೇರಿದಂತೆ ನಾನಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ 280ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇಲ್ಲಿ ಕೋಚಿಂಗ್ ಪಡೆದು ಭವಿಷ್ಯ ರೂಪಿಸಿಕೊಂಡಿದ್ದಾರೆ.
Advertisement
ಇಲ್ಲಿ ಕೋಚಿಂಗ್‍ಗಾಗಿ ನಿಗದಿ ಪಡಿಸಿರುವ ಮೊತ್ತವನ್ನು ನೋಡಿದರೆ ಎಂಥವರೂ ಇದು ಸಾಧ್ಯಾನಾ, ಇದು ನಿಜವಾ ಅಂತ ಬೆರಗಾಗುವಂತಿದೆ. ಯಾಕಂದ್ರೆ ಹೊರ ಜಗತ್ತಲ್ಲಿ ಐಎಎಸ್ ಮತ್ತು ಕೆಎಎಸ್ ನಂಥಾ ಪರೀಕ್ಷೆಗಳ ಕೋಚಿಂಗ್ ಗಾಗಿ ವಾರ್ಷಿಕ ಒಂದರಿಂದ ನಾಲ್ಕು ಲಕ್ಷದಷ್ಟು ಶುಲ್ಕ ಚಾಲ್ತಿಯಲ್ಲಿದೆ. ಆದ್ದರಿಂದ ಬಡವರ ಮಕ್ಕಳು ಇಂಥಾ ಪರೀಕ್ಷೆಯಲ್ಲಿ ಪಾಸ್ ಆಗೋ ಟ್ಯಾಲೆಂಟ್ ಇದ್ದರೂ ದೂರವೇ ಉಳಿದು ಬಿಡುವ ದುರಂತ ಸ್ಥಿತಿ ರಾಜ್ಯ ಮಾತ್ರವಲ್ಲದೇ ಇಡೀ ದೇಶದಲ್ಲಿದೆ. ಆದರೆ ಮೈಲ್ ಸ್ಟೋನ್ ಅಕ್ಯಾಡೆಮಿ ಇದಕ್ಕಾಗಿ ನಿಗಧಿ ಪಡಿಸಿರೋ ವಾರ್ಷಿಕ ಮೊತ್ತ ಕೇವಲ 12,800 ರೂಪಾಯಿ ಮಾತ್ರ. ವಿದ್ಯಾರ್ಥಿಗಳಿಗೆ ಬೇಕಾಗುವ ಪೂರಕ ಸಾಮಾಗ್ರಿಗಳಿಗೆ ಮಾತ್ರವೇ ಇಲ್ಲಿ ಮೊತ್ತ ನಿಗದಿಯಾಗಿದೆ ಅಂದರೆ ಅಚ್ಚರಿಯಾಗುತ್ತೆ. ಆದರೆ ಇದು ಏಳು ವರ್ಷಗಳಿಂದ ತಪಸ್ಸಿನಂತೆ ನಡೆಯುತ್ತಲೇ ಇರುವುದು ವಾಸ್ತವ.
Advertisement
ಇಷ್ಟು ಕಡಿಮೆ ಮೊತ್ತಕ್ಕೆ ಇಲ್ಲಿ ವರ್ಷ ಪೂರ್ತಿ ಗುಣಮಟ್ಟದ ಕೋಚಿಂಗ್ ಸಿಗುತ್ತದೆ. ಇಲ್ಲಿ ಕೋಚಿಂಗ್ ಕೊಡುವವರೂ ಕೂಡಾ ಶಿಕ್ಷಣವನ್ನು ದೇವತಾ ಸ್ಥಾನದಲ್ಲಿಟ್ಟು ಪೂಜಿಸುವವರೇ. ಇಲ್ಲಿ ಕಾಸು ಮಾಡೋ ಧಾವಂತವಿಲ್ಲ. ಮಾರುಕಟ್ಟೆಯ ಗಿಮಿಕ್ಕುಗಳಂತೂ ಇಲ್ಲವೇ ಇಲ್ಲ. ಈ ಸಂಸ್ಥೆ ಜೀವಿತಾ ಅವರ ಸಾರಥ್ಯದಲ್ಲಿ ಯಾವ ಆದರ್ಶಗಳನ್ನಿಟ್ಟುಕೊಂಡು ಜೀವ ಪಡೆದಿತ್ತು ಅದನ್ನು ಇಲ್ಲಿನ ಬೋಧಕರೆಲ್ಲರೂ ಶಿರಸಾವಹಿಸಿ ಪಾಲಿಸುತ್ತಿದ್ದಾರೆ. ಒಂದು ವೇಳೆ ವರ್ಷ ಮುಗಿದ ಮೇಲೂ ವಿದ್ಯಾರ್ಥಿಗಳು ರಿವಿಜನ್ ಬಯಸಿದರೆ ಯಾವ ತಕರಾರೂ ಇಲ್ಲದೇ ಮತ್ತೊಂದು ವರ್ಷವಿಡೀ ಕೋಚಿಂಗ್ ನೀಡಲೂ ಈ ಸಂಸ್ಥೆ ಸದಾ ತಯಾರಾಗಿದೆ. ಇದಕ್ಕಾಗಿ ಹೆಚ್ಚಿನ ಯಾವ ಶುಲ್ಕವನ್ನೂ ಪಡೆಯುವುದಿಲ್ಲ.
ವ್ಯಾಪಾರಿ ದೃಷ್ಟಿಯೇ ಮಹತ್ವ ಪಡೆದಿರುವ ಈ ಕಾಲಮಾನದಲ್ಲಿ ಮೈಲ್ ಸ್ಟೋನ್ ಆದರ್ಶಗಳನ್ನು ಕಂಡರೆ ಯಾರಿಗಾದರೂ ಅಚ್ಚರಿ ಕಾಡುವುದು ಸಹಜವೇ. ಆದರೆ ಸೇವಾ ಮನೋಭಾವ, ಅಂದುಕೊಂಡ ಗುರಿಯತ್ತ ಸಮರ್ಪಣಾ ಭಾವ ಮಾತ್ರವೇ ಇರುವಲ್ಲಿ ಮೈಲ್ ಸ್ಟೋನ್ ನಂಥಾ ಮಿರಾಕಲ್ ಗಳು ಖಂಡಿತಾ ಸಂಭವಿಸುತ್ತವೆ. ಈ ಸಂಸ್ಥೆ ಹುಟ್ಟು ಪಡೆದಿರೋದೇ ಅಂಥಾ ಆದರ್ಶಗಳ ನೆಲೆಗಟ್ಟಿನಲ್ಲಿ. ಆದ್ದರಿಂದಲೇ ಐಎಎಸ್‍ನಂತಹ ದುಬಾರಿ ಕೋಚಿಂಗ್ ಅನ್ನು ವಿದ್ಯಾರ್ಥಿಗಳಿಗೆ ಕಡಿಮೆ ವೆಚ್ಚದಲ್ಲಿ ಕೊಟ್ಟು ಇಲ್ಲಿನ ಬೋಧಕರು ಸದಾ ಜೊತೆಯಲ್ಲಿಯೇ ಇರುತ್ತಾರೆ. ತಮ್ಮದೇ ಮಕ್ಕಳು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಾಗುತ್ತಿದ್ದಾರೆ ಎನ್ನುವ ಆತ್ಮೀಯ ಭಾವದಿಂದಲೇ ಸದಾ ದಾರಿದೀಪವಾಗಿ ಮುಂದುವರಿಸುತ್ತಿದ್ದಾರೆ.
ಆರಂಭ ಕಾಲದಲ್ಲಿ ಮೈಲ್ ಸ್ಟೋನ್ ಅಕಾಡಮಿ ಇಷ್ಟೊಂದು ಕಡಿಮೆ ಮೊತ್ತಕ್ಕೆ ಕೋಚಿಂಗ್ ಕೊಡಲು ಮುಂದೆ ಬಂದಾಗ ಅನುಮಾನದಿಂದ ನೋಡಿದವರೇ ಹೆಚ್ಚು. ಇದು ಸಾಧ್ಯಾನ ಎಂಬ ಪ್ರಶ್ನೆಯೇ ಎಲ್ಲರದ್ದಾಗಿತ್ತು. ಆದರೆ ಒಂದಷ್ಟು ವಿದ್ಯಾರ್ಥಿಗಳು ಬಂದು ಸಮರ್ಥವಾಗಿ ಪರೀಕ್ಷೆ ಎದುರಿಸಿದರು. ಹಾಗೆ ವಿದ್ಯಾರ್ಥಿಗಳು ಮತ್ತು ಪೋಷಕರ ಬಾಯಿಂದ ಬಾಯಿಗೆ ಹರಡಿದ ಒಳ್ಳೆ ಮಾತುಗಳಿಂದಲೇ ಇಂದು ಈ ಸಂಸ್ಥೆಯ ಆವರಣ ವಿದ್ಯಾರ್ಥಿಗಳಿಂದ ತುಂಬಿದೆ. ಕೇವಲ ನಾಲ್ಕು ಪರ್ಸೆಂಟ್ ಇರೋ ಕರ್ನಾಟಕದ ಐಎಎಸ್ ಮಾಪಕವನ್ನು ಹೆಚ್ಚುಗೊಳಿಸಬೇಕು, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿಯೂ ಆರ್ಥಿಕವಾಗಿ ಹಿಂದುಳಿದವರ ಮಕ್ಕಳೂ ಜಯಶೀಲರಾಗಬೇಕೆಂಬುದು ಈ ಸಂಸ್ಥೆಯ ಉದ್ದೇಶ.
ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳತ್ತಲೇ ಜೀವಿತಾ ಅವರು ಹೆಚ್ಚು ಪೋಕಸ್ ಮಾಡುತ್ತಿದ್ದಾರೆ. ಆದ್ದರಿಂದಲೇ ಮಂಡ್ಯ, ನಂಜನಗೂಡು ಮುಂತಾದ ಪ್ರದೇಶಗಳ ಹಳ್ಳಿಗಳಿಂದ ಬಂದ ವಿದ್ಯಾರ್ಥಿಗಳೂ ಇಲ್ಲಿ ಕೋಚಿಂಗ್ ಪಡೆಯುತ್ತಿದ್ದಾರೆ. ಶಿಕ್ಷಣವೂ ವ್ಯಾಪಾರೀಕರಣದ ತೆಕ್ಕೆಗೆ ಸಿಕ್ಕಿರೋ ಈ ಸಂದರ್ಭದಲ್ಲಿ ಇಂಥಾ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರೋದೇ ಒಂದು ಅಚ್ಚರಿ.
ಪೋಷಕರೇ, ಇನ್ನು ಮುಂದೆ ಐಎಎಸ್, ಕೆಎಎಸ್ ಸೇರಿದಂತೆ ನಿಮ್ಮ ಮಕ್ಕಳಿಗೆ ಯಾವ ಕನಸಿದ್ದರೂ ಅದನ್ನು ನೀವು ನನಸು ಮಾಡಿಕೊಳ್ಳಬಹುದು. ಕೆಳಕಂಡ ವಿಳಾಸದಲ್ಲಿ ಮೈಲ್ ಸ್ಟೋನ್ ಕೋಚಿಂಗ್ ಸೆಂಟರ್ ಇದೆ. ನೀವೇ ಖುದ್ದಾಗಿ ಭೇಟಿ ನೀಡಿದರೆ ಇದರ ಸಂಸ್ಥಾಪಕಿ ಜೀವಿತಾ ಅವರೇ ಮಾತಿಗೆ ಸಿಗುತ್ತಾರೆ. ಕಣ್ಣೆದುರೇ ಗುಣಮಟ್ಟದ ಕೋಚಿಂಗ್ ಅನ್ನೂ ಕಣ್ತುಂಬಿಕೊಳ್ಳಬಹುದು. ಬಡ ಮಕ್ಕಳನ್ನೂ ಕಡಿಮೆ ವೆಚ್ಚದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುತ್ತಿರೋ ಮೈಲ್ ಸ್ಟೋನ್ ಅಕಾಡೆಮಿಯ ಕೆಲಸ ನಿಜಕ್ಕೂ ಮೆಚ್ಚಿಕೊಳ್ಳುವಂಥಾದ್ದು.
ವಿಳಾಸ: ಮೈಲ್ ಸ್ಟೋನ್ ಐಎಎಸ್
#787, ಮೊದಲ ಮಹಡಿ, 8ನೇ ಕ್ರಾಸ್
ತ್ರೀವೇಣಿ ರಸ್ತೆ, ಯಶವಂತಪುರ, ಬೆಂಗಳೂರು 560022
ಸಂಪರ್ಕಿಸಬೇಕಾದ ನಂಬರ್ : 91484 – 51309
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv