DistrictsKarnatakaKodaguLatestMain Post

ಕೊಡಗು, ದಕ್ಷಿಣ ಕನ್ನಡ ಗಡಿ ಭಾಗದಲ್ಲಿ ಮತ್ತೆ ಕಂಪಿಸಿದ ಭೂಮಿ

ಮಡಿಕೇರಿ: ಕೆಲ ತಿಂಗಳ ಹಿಂದೆ ಸರಣಿ ಭೂಕಂಪನದ ಅನುಭವಾಗಿದ್ದ ಕೊಡಗು ಹಾಗೂ ದಕ್ಷಿಣ ಕನ್ನಡದ ಗಡಿಭಾಗದಲ್ಲಿ ಇಂದು ಮತ್ತೆ ಭೂಮಿ ಕಂಪಿಸಿದೆ.

ಭಾರಿ ಶಬ್ದದೊಂದಿಗೆ ಭೂಕಂಪನದ ಅನುಭವ ಗಡಿಭಾಗದ ಜನರಿಗೆ ಇಂದು ಸಂಜೆ 6:20ರ ಸಮಯಕ್ಕೆ ಆಗಿದೆ. ಕೊಯನಾಡಿನ ಮಂಗಳಪಾರೆ ಬಳಿ ಮತ್ತು ಸುಳ್ಯ ಭಾಗದ ಹಲವು ಗ್ರಾಮಗಳಿಗೆ ಭೂಕಂಪನವಾಗಿದೆ. ಸ್ಥಳೀಯರು ತಮಗಾದ ಅನುಭವವನ್ನು ಹೇಳಿಕೊಂಡಿದ್ದಾರೆ. ಇದನ್ನೂ ಓದಿ: ಧ್ವಜ ಕಟ್ಟುವಾಗ ಶಾಲೆಯ ಎಡವಟ್ಟು – ಪೋಷಕರಿಂದ ಆಕ್ರೋಶ

ಸುಳ್ಯದ ಕಲ್ಮಕಾರಿನ ಮೆಂಟೆಕಜೆ, ಗುಳಿಕ್ಕಾನ ಪ್ರದೇಶದಲ್ಲಿ ಶಬ್ದ ಹಾಗೂ ಕಂಪನ ಹೆಚ್ಚಾಗಿ ಅನುಭವವಾಗಿದೆ. ಕೊಲ್ಲಮೊಗ್ರದವರೆಗೂ ಈ ಶಬ್ದ ಕೇಳಿಸಿದೆ ಎನ್ನಲಾಗಿದೆ. ಮಾತ್ರವಲ್ಲದೇ ಕಲ್ಲುಗುಂಡಿಯ ಚಟ್ಟೆಕಲ್ಲು, ಕೊಯನಾಡಿನ ಮಂಗಳಪಾರೆ ಎಂಬಲ್ಲಿ ಭೂಮಿ ಕಂಪಿಸಿದೆ ಎಂದು ಅಲ್ಲಿನ ಸ್ಥಳೀಯರು ಹೇಳುತ್ತಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ ಸುಳ್ಯ ತಾಲೂಕಿನಲ್ಲಿ ಸುಮಾರು 7 ರಿಂದ 8 ಬಾರಿ ಭೂಮಿ ಕಂಪಿಸಿತ್ತು. ಚೆಂಬು, ಅರಂತೋಡು ಪ್ರದೇಶಗಳು ಕಂಪನದ ಕೇಂದ್ರ ಬಿಂದುವಾಗಿತ್ತು. ಇದೀಗ ಮತ್ತೆ ದಕ್ಷಿಣ ಕನ್ನಡ, ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಭೂಮಿ ಕಂಪಿಸಿದ್ದು, ಗಡಿಭಾಗದ ಜನರನ್ನು ಆತಂಕಕ್ಕೆ ಒಳಗಾಗಿಸಿದೆ. ಇದನ್ನೂ ಓದಿ: ಅಯೋಧ್ಯೆಯಲ್ಲಿ ಕಸದ ಗಾಡಿಯಲ್ಲಿ ರಾಷ್ಟ್ರಧ್ವಜ ವಿತರಣೆ

Live Tv

Leave a Reply

Your email address will not be published.

Back to top button