ಮಡಿಕೇರಿ: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ನಾಪೋಕ್ಲು ಬಲ್ಲಮಾವಟಿ ಸೇರಿದಂತೆ ಗ್ರಾಮದ ಸುತ್ತಮುತ್ತ ಇಂದು ಬೆಳಿಗ್ಗೆ 7:30 ರ ಸುಮಾರಿಗೆ ಭೂಮಿ ಕಂಪಿಸಿದ ಅನುಭವವಾಗಿದೆ.
1.5ರಷ್ಟು ತೀವ್ರತೆಯ ಭೂಕಂಪನವಾಗಿದೆ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಗ್ರಾಮದ ಸುತ್ತಮುತ್ತಲಿನ ಜನರು ಭೂಕಂಪನದಿಂದ ಮನೆಯೊಳಗೆ ಇದ್ದವರು ಭಯಭೀತರಾಗಿ ಹೊರಗೆ ಓಡಿದ್ದಾರೆ.
ಮಂಚ, ಟಿ.ವಿ. ಸ್ಟ್ಯಾಂಡ್, ಟೇಬಲ್, ಪಾತ್ರೆಗಳು ಹೀಗೆ ಮನೆಯೊಳಗಿದ್ದ ವಸ್ತುಗಳು ಗಡ ಗಡನೆ ಅಲ್ಲಾಡಿದವು. ಇದನ್ನು ಕಂಡು ಮನೆ ಮಂದಿಯೆಲ್ಲರೂ ಗಾಬರಿಯಾಗಿ ಕಕ್ಕಾಬಿಕ್ಕಿಯಾಗಿ ಓಡಿದರು ಎಂದು ಹೇಳುತ್ತಿದ್ದಾರೆ.
ಈ ಹಿಂದೆ ಕೆಲವು ಬಾರಿ ಭೂಕಂಪನ ನಡೆದಿದ್ದರೂ ಇಷ್ಟು ಪ್ರಮಾಣದ ಹಾಗೂ ತೀವ್ರತೆಯ ಕಂಪನದ ಅನುಭವ ಆಗಿರಲಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ.