ಮಾಸ್ಕೋ: ಶೀತಲ ಸಮರವನ್ನು ಶಾಂತವಾಗಿಯೇ ಕೊನೆಗೊಳಿಸಿದ್ದ ಸೋವಿಯತ್ ನಾಯಕ ಮಿಖಾಯಿಲ್ ಗೋರ್ಬಚೇವ್ ಅವರು ಮಂಗಳವಾರ ತಮ್ಮ 91ನೇ ವಯಸ್ಸಿಗೆ ನಿಧನರಾಗಿದ್ದಾರೆ.
ಗೋರ್ಬಚೇವ್ ಅವರು ಗಂಭೀರವಾದ ಹಾಗೂ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದು, ಮಂಗಳವಾರ ಸಂಜೆ ನಿಧನರಾದರು ಎಂದು ಸೆಂಟ್ರಲ್ ಕ್ಲಿನಿಕಲ್ ಆಸ್ಪತ್ರೆ ತಿಳಿಸಿದೆ. ಇದನ್ನೂ ಓದಿ: ಮಧ್ಯರಾತ್ರಿ ತುರ್ತು ವಿಚಾರಣೆ – ಹುಬ್ಬಳ್ಳಿ ಈದ್ಗಾ ಮೈದಾನದಲ್ಲಿ ಗಣೇಶೋತ್ಸವಕ್ಕೆ ಅನುಮತಿ
Advertisement
Advertisement
ಕೊನೆಯ ಸೋವಿಯತ್ ಅಧ್ಯಕ್ಷರಾದ ಗೋರ್ಬಚೇವ್ ಅವರು ಅಮೆರಿಕ ಹಾಗೂ ಪಾಶ್ಚಿಮಾತ್ಯ ದೇಶಗಳೊಂದಿಗೆ ಶಸ್ತ್ರಾಸ್ತ್ರವನ್ನು ಕಡಿತಗೊಳಿಸುವ ಒಪ್ಪಂದಗಳನ್ನು ಮಾಡಿಕೊಂಡು ಶೀತಲ ಸಮರಕ್ಕೆ ಅಂತ್ಯ ಹಾಡಿದ್ದರು. ಆದರೆ ಸೋವಿಯತ್ ಒಕ್ಕೂಟದ ಪತನವನ್ನು ತಮ್ಮಿಂದ ತಡೆಯಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ಮಣಿಪುರದಲ್ಲೂ ಜೆಡಿಯು ಬಿಜೆಪಿಯೊಂದಿಗಿನ ಮೈತ್ರಿ ವಾಪಸ್?
Advertisement
ಗೋರ್ಬಚೇವ್ ಅವರು ತಮ್ಮ 54ನೇ ವಯಸ್ಸಿನಲ್ಲಿ 1985ರಲ್ಲಿ ಸೋವಿಯತ್ ಕಮ್ಯುನಿಸ್ಟ್ ಪಕ್ಷದ ಪ್ರಧಾನ ಕಾರ್ಯದರ್ಶಿಯಾಗಿದ್ದರು. ಬಳಿಕ ಅವರು ಸೀಮಿತ ರಾಜಕೀಯ ಮತ್ತು ಆರ್ಥಿಕ ಸ್ವಾತಂತ್ರ‍್ಯಗಳನ್ನು ಪರಿಚಯಿಸುವ ಮೂಲಕ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಮುಂದಾದರು. ಆದರೆ ಅವರ ಸುಧಾರಣೆಗಳು ನಿಯಂತ್ರಣದಿಂದ ಹೊರಬಂದವು.