– ಅತಿದೊಡ್ಡ ಬಾಕ್ಸಿಂಗ್ ಫೈಟ್‌ಗೆ ಟೈಸನ್‌ಗೆ ಸಿಕ್ತು 169 ಕೋಟಿ
ವಾಷಿಂಗ್ಟನ್: 20 ವರ್ಷಗಳ ಬಳಿಕ ಬಾಕ್ಸಿಂಗ್ ರಿಂಗ್‌ಗೆ ಇಳಿದು ಘರ್ಜಿಸಿದ 58 ವರ್ಷದ ದಿಗ್ಗಜ ಬಾಕ್ಸರ್ ಮೈಕ್ ಟೈಸನ್ (Mike Tyson), ಎನ್‌ಎಫ್‌ಎಲ್ ಡಲಾಸ್ ಕೌಬಾಯ್ಸ್ ಬಾಕ್ಸಿಂಗ್‌ನಲ್ಲಿ 27 ವರ್ಷದ ಯೂಟ್ಯೂಬರ್ ಜೇಕ್ ಪಾಲ್ (Jake Paul) ವಿರುದ್ಧ ಸೋಲು ಕಂಡಿದ್ದಾರೆ. ಟೆಕ್ಸಾಸ್‌ನ ಆರ್ಲಿಂಗ್ಟನ್‌ನಲ್ಲಿರುವ ಎಟಿ ಅಂಡ್ ಟಿ ಕ್ರೀಡಾಂಗಣ ಈ ಐತಿಹಾಸಿಕ ಪಂದ್ಯಕ್ಕೆ ಸಾಕ್ಷಿಯಾಯಿತು.
27 ವರ್ಷ ವಯಸ್ಸಿನ ಪಾಲ್ ಅವರು 79-73 ಅಂಕಗಳಿಂದ ಹೆವಿವೇಯ್ಡ್ ಐಕಾನ್ ಟೈಸನ್ ವಿರುದ್ಧ ಗೆಲುವು ಸಾಧಿಸಿದ್ದಾರೆ. 2024ರ ಅತಿದೊಡ್ಡ ಬಾಕ್ಸಿಂಗ್ ಫೈಟ್ ಎಂದು ಬಿಂಬಿಸಲಾಗಿದ್ದ ಈ ಹಣಾಹಣಿಯನ್ನು ಕಣ್ಣುಂಬಿಕೊಳ್ಳಲು ಟೈಸನ್ ಅಭಿಮಾನಿಗಳು (Tyson Fans) ತುದಿಗಾಲಿನಲ್ಲಿ ನಿಂತಿದ್ದರು. ಸ್ಪರ್ಧೆಗೆ ಇಳಿಯಲು ಟೈಸನ್ ಅವರಿಗೆ 169 ಕೋಟಿ ರೂ. ($20 ಮಿಲಿಯನ್) ಪಾವತಿಸಲಾಗಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ಟೀಂ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ ದಂಪತಿಗೆ ಗಂಡು ಮಗು ಜನನ
Advertisement
Advertisement
2005ರ ನಂತರ ಅಖಾಡಕ್ಕೆ ಇಳಿದ 58 ವರ್ಷ ವಯಸ್ಸಿನ ಟೈಸನ್ ಅವರ ಪಂಚ್‌ಗಳು ಲಯ ಕಳೆದುಕೊಂಡ ಕಾರಣ ಪಾಲ್ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾದರು. ಹೆವಿವೇಯ್ಡ್ ಮಾಜಿ ಚಾಂಪಿಯನ್ ಟೈಸನ್ 8 ಸುತ್ತಿನ ಬೌಟ್‌ನ ಮೊದಲೆರಡು ಸುತ್ತುಗಳಲ್ಲಿ ತೀವ್ರ ಪೈಪೋಟಿ ನೀಡಿದ್ದರು. ಆದರೆ, ಪಾಲ್ ಅವರು ಚುರುಕಿನ ಪಾದಚಲನೆಯ ಮೂಲಕ ಮೂರನೇ ಸುತ್ತಿನಲ್ಲೇ ಪಾಬಲ್ಯ ಮೆರೆದರು.
Advertisement
ಎಲ್ಲಾ ಮೂರು ಕಾರ್ಡ್‌ಗಳಲ್ಲಿ ಪಾಲ್ ದೊಡ್ಡ ಅಂತರದಿಂದ ಜಯ ಸಾಧಿಸಿದರು. ಪಂದ್ಯದ ಮುಕ್ತಾಯದ ಬಳಿಕ ಪಾಲ್ ಅವರು ಬಾಕಿಂಗ್ಸ್ ದಂತಕತೆ ಟೈಸನ್ ಅವರಿಗೆ ನಮಸ್ಕರಿಸಿದರು. ಇದನ್ನೂ ಓದಿ: ಆಫ್ರಿಕಾ ವಿರುದ್ಧ ದಾಖಲೆಯ ಜಯದೊಂದಿಗೆ ಸರಣಿ ಗೆದ್ದ ಟೀಂ ಇಂಡಿಯಾ
Advertisement
20 ವರ್ಷಗಳ ಬಳಿಕ ಸ್ಪರ್ಧೆಗೆ ಮರಳಿದ್ದ ಟೈಸನ್ ಅವರು ಗುರುವಾರ ತೂಕ ಪರೀಕ್ಷೆ ವೇಳೆ ಪಾಲ್ ಅವರಿಗೆ ಕಪಾಳಮೋಕ್ಷ ಮಾಡಿದ್ದು ಚರ್ಚೆಗೆ ಗ್ರಾಸವಾಗಿತ್ತು. ಇದನ್ನೂ ಓದಿ: ರನ್ ಹೊಳೆಯಲ್ಲಿ ತೇಲಾಡಿದ ಭಾರತ – ಸಂಜು, ತಿಲಕ್ ಶತಕಗಳ ಅಬ್ಬರಕ್ಕೆ ದಾಖಲೆಗಳು ಧೂಳಿಪಟ