ಆಂಟಿಗುವಾ: ಟೀಂ ಇಂಡಿಯಾ ಹಾಗೂ ವೆಸ್ಟ್ ಇಂಡೀಸ್ ನಡುವೆ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ವಿಂಡೀಸ್ ಆಟಗಾರ ಮಿಗುಯೆಲ್ ಕಮ್ಮಿನ್ಸ್ ಕಳಪೆ ದಾಖಲೆಗೆ ಕಾರಣರಾಗಿದ್ದು, ತಂಡದ ಮೊದಲ ಇನ್ನಿಂಗ್ಸ್ ನಲ್ಲಿ ಶೂನ್ಯಕ್ಕೆ ಔಟಾಗುವ ಮೂಲಕ ನಿರಾಸೆ ಅನುಭವಿಸಿದ್ದಾರೆ.
ಪಂದ್ಯದಲ್ಲಿ ಬರೋಬ್ಬರಿ 95 ನಿಮಿಷ ಕ್ರಿಸ್‍ನಲ್ಲಿದ್ದ ಕಮ್ಮಿನ್ಸ್ 45 ಎಸೆತಗಳನ್ನು ಎದುರಿಸಿದ್ದರು. ಆದರೆ ರನ್ ಖಾತೆ ತೆರೆಯುವಲ್ಲಿ ಮಾತ್ರ ವಿಫಲರಾಗಿದ್ದರು. ಈ ಮೂಲಕ ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ಸಮಯ ಕ್ರಿಸ್‍ನಲ್ಲಿದ್ದು ರನ್ ಗಳಿಸದೆ ಔಟಾದ 2ನೇ ಆಟಗಾರ ಎಂಬ ಕಳಪೆ ಸಾಧನೆಯನ್ನು ಮಾಡಿದರು. ಈ ಪಟ್ಟಿಯಲ್ಲಿ ನ್ಯೂಜಿಲೆಂಡ್ ತಂಡದ ಜಾಫ್ ಅಲೋಟ್ ಮೊದಲ ಸ್ಥಾನ ಪಡೆದಿದ್ದು, 1999 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಪಂದ್ಯದಲ್ಲಿ 101 ನಿಮಿಷ ಬ್ಯಾಟಿಂಗ್ ನಡೆಸಿ ಡಕೌಟ್ ಆಗಿದ್ದರು. 2000ರ ಬಳಿಕ ನಡೆದ ಟೆಸ್ಟ್ ಕ್ರಿಕೆಟ್ ಪಂದ್ಯಗಳಲ್ಲಿ ಜೇಮ್ಸ್ ಆಂಡರ್ಸನ್ ಶ್ರೀಲಂಕಾ ವಿರುದ್ಧ 2014 ರಲ್ಲಿ ನಡೆದ ಪಂದ್ಯಲ್ಲಿ 55 ಎಸೆತ ಎದುರಿಸಿ ರನ್ ಗಳಿಸದೆ ಔಟಾಗಿದ್ದರು.
Advertisement
That's the end of the West Indies innings.
Miguel Cummins falls for a 45-ball duck and the hosts finish on 222, trailing India by 75 runs. No wickets for him today but Ishant Sharma led the way for the visitors, taking 5/43.#WIvIND LIVE ????https://t.co/egvDo7fncD pic.twitter.com/44kWVooyJZ
— ICC (@ICC) August 24, 2019
Advertisement
260 ರನ್ ಮುನ್ನಡೆ: ವಿಂಡೀಸ್ ವಿರುದ್ಧದ ಟೆಸ್ಟ್ ಪಂದ್ಯದ 3ನೇ ದಿನದಾಟದ ಅಂತ್ಯಕ್ಕೆ ಟೀಂ ಇಂಡಿಯಾ 260 ರನ್ ಮುನ್ನಡೆಯನ್ನು ಪಡೆದಿದ್ದು, 2ನೇ ಇನ್ನಿಂಗ್ಸ್ ನಲ್ಲಿ 3 ವಿಕೆಟ್ ಕಳೆದುಕೊಂಡು 185 ಗಳಿಸಿದೆ.
Advertisement
ಮೊದಲ ಇನ್ನಿಂಗ್ಸ್ ನಲ್ಲಿ ಟೀಂ ಇಂಡಿಯಾದ 297 ರನ್ ಗಳಿಗೆ ಉತ್ತರವಾಗಿ ವೆಸ್ಟ್ ಇಂಡೀಸ್ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ 222 ರನ್ ಗಳಿಗೆ ಅಲೌಟಯ್ತು. 189 ರನ್ ಗಳಿಗೆ 8 ವಿಕೆಟ್ ಕಳೆದುಕೊಂಡು 3 ದಿನದಾಟ ಆರಂಭಿಸಿದ ವಿಂಡೀಸ್ 33 ರನ್ ಪೇರಿಸಿ ಅಲೌಟ್ ಆಯ್ತು. ಟೀಂ ಇಂಡಿಯಾ ಪರ ಇಶಾಂತ್ 5 ವಿಕೆಟ್, ಶಮಿ ಹಾಗೂ ಜಡೇಜಾ ತಲಾ 2, ಬುಮ್ರಾ 1 ವಿಕೆಟ್ ಪಡೆದರು. 2ನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ಪರ ಕ್ರಮವಾಗಿ 51, 53 ರನ್ ಗಳಿಸಿರುವ ಕೊಹ್ಲಿ ಹಾಗೂ ರಹಾನೆ 4ನೇ ದಿನದಾಟಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
Advertisement