ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಇದೀಗ ಮತ್ತೆ ಕೊರೊನಾ ಸೋಂಕಿನ ಪ್ರಕರಣಗಳು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಜಿಲ್ಲೆಯಲ್ಲಿ ಪಾಸಿಟಿವ್ ರೇಟ್ ನಲ್ಲೂ ಏರಿಳಿತ ಅಗುತ್ತಿದೆ. ಅಷ್ಟೇ ಅಲ್ಲದೇ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಸೋಂಕಿನ ಪ್ರಕರಣಗಳು ಏರಿಕೆಯಾಗುತ್ತಿವೆ. ರಾತ್ರೋ ರಾತ್ರಿ ಬೇರೆ ಬೇರೆ ರಾಜ್ಯಗಳಿಂದ ಕೂಲಿ ಕಾರ್ಮಿಕರು ಕೊಡಗು ಜಿಲ್ಲೆಗೆ ಲಗ್ಗೆ ಇಡುತ್ತಿದ್ದಾರೆ. ಹೀಗಾಗಿ ಮತ್ತೆ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುವ ಲಕ್ಷಣಗಳು ಕಂಡುಬರುತ್ತಿದ್ದು. ಜನರಲ್ಲಿ ಅತಂಕ ಮನೆ ಮಾಡುತ್ತಿದೆ.
ಪಕ್ಕದ ರಾಜ್ಯ ಕೇರಳದಲ್ಲಿ ಸೋಂಕು ಅಬ್ಬರಿಸುತ್ತಿರುವಾಗಲೇ ಕರ್ನಾಟಕದ ಗಡಿಭಾಗದ ಜಿಲ್ಲೆ ಕೊಡಗಿನಲ್ಲೂ ಸೋಂಕಿನ ಪ್ರಕರಣಗಳು ದಿನ ಕಳೆದಂತೆ ಏರಿಳಿತ ಕಾಣುತ್ತಿದೆ. ಅಷ್ಟೇ ಅಲ್ಲದೆ ಕೇರಳ-ಅಸ್ಸಾಂ-ಬಾಗ್ಲಾದೇಶದಿಂದ ಬರುತ್ತಿರುವ ಕೂಲಿ ಕಾರ್ಮಿಕರಿಂದ ಸೋಂಕು ಹೆಚ್ಚಾಗುವ ಸಾಧ್ಯತೆ ಇದೆ. ಕೇರಳದಿಂದ ಕೊಡಗಿಗೆ ಎಂಟ್ರಿಯಾಗಬೇಕಾದರೆ 72 ಗಂಟೆಯೊಳಗೆ ಪಡೆದ ಕೋವಿಡ್ ನೆಗೆಟಿವ್ ವರದಿ ಕಡ್ಡಾಯ ಮಾಡಲಾಗಿದೆ. ಅದನ್ನು ಜಿಲ್ಲೆಯ ಎಲ್ಲಾ ಚೆಕ್‍ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ. ಆದರೆ ತಪಾಸಣೆ ನಡೆಯುವುದು ಮಾತ್ರ ಹಗಲಿನಲ್ಲಿ ರಾತ್ರಿ ವೇಳೆಯಲ್ಲಿ ತಪಾಸಣೆ ನಡೆಸದೇ ಇರುವುದರಿಂದ ಹೆಚ್ಚಾಗಿ ಕೂಲಿ ಕಾರ್ಮಿಕರು ಜಿಲ್ಲೆಗೆ ರಾತ್ರಿವೇಳೆಯಲ್ಲಿ ಲಗ್ಗೆ ಇಡುತ್ತಿದ್ದಾರೆ. ಗುಂಪು ಗುಂಪಾಗಿ ವಲಸೆ ಕಾರ್ಮಿಕರು ಕಾಫಿ ತೋಟಗಳಿಗೆ ಮುಖ ಮಾಡುತ್ತಿರುವುದರಿಂದ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸ್ಫೋಟಗಳುವ ಲಕ್ಷಣಗಳು ಕಂಡುಬರುತ್ತಿದೆ.
ಕೊಡಗು ಜಿಲ್ಲೆಯಲ್ಲಿ ಕೊರೊನಾ ಹರಡುವ ಆತಂಕ ಎದುರಾಗಿದೆ. ಕಾರಣ ಕೊಡಗು ಗಡಿ ಭಾಗಗಳಿಂದ ಚೆಕ್ ಪೋಸ್ಟ್ ದಾಟಿ ಬರುವ ಟಿಟಿ, ಬಸ್, ಟೆಂಪೋ, ಟ್ರಾವೆಲ್ ಗಳಿಂದ ನೂರಾರು ಸಂಖ್ಯೆಯಲ್ಲಿ ಕಾರ್ಮಿಕರು ಅಗಮಿಸುತ್ತಿದ್ದಾರೆ. ಅದು ಕೊರೊನಾ ಟೆಸ್ಟ್ ವರದಿ ಇಲ್ಲದೆ ಕೇರಳ, ಅಸ್ಸಾಂ, ತಮಿಳುನಾಡಿನಿಂದ ಕೂಲಿ ಅರಸಿ ಬರುತ್ತಿರುವುದೇ ಜಿಲ್ಲೆಗೆ ಕಂಟಕವಾಗಿದೆ.
ಈಗಾಗಲೇ ಕೊಡಗಿನ ನೆಲ್ಯಹುದಿಕೇರಿ, ಸಿದ್ದಾಪುರ, ಕರಡಿಗೋಡು, ನರಿಯದಂಡ ಗ್ರಾಮಗಳಲ್ಲಿ ಸೋಂಕಿನ ಪ್ರಕರಣಗಳು ಹೆಚ್ಚಾಗುತ್ತಿದೆ. ಕಾಫಿ ತೋಟಗಳಲ್ಲಿ ಲೈನ್ ಮನೆ ಇರುವುದರಿಂದ ಎಲ್ಲಾ ಕೂಲಿ ಕಾರ್ಮಿಕರು ಗುಂಪು ಗುಂಪಾಗಿ ಒಟ್ಟಿಗೆ ಇರುವುದರಿಂದ ಸೋಂಕು ಮತಷ್ಟು ಹರಡುವ ಸಾದ್ಯತೆ ಇದೆ. ಇದನ್ನೂ ಓದಿ: ಕೊಡಗಿನ ಬೆಟ್ಟ ಪ್ರದೇಶದಲ್ಲಿ ಮತ್ತೆ ಬಾಯ್ದೆರೆದ ಭೂಮಿ- ಗ್ರಾಮಸ್ಥರಲ್ಲಿ ಅತಂಕ
ಈ ಬಗ್ಗೆ ಜಿಲ್ಲಾಧಿಕಾರಿ ಅವರನ್ನು ಕೇಳಿದ್ರೆ, ಈಗಾಗಲೇ ಚಕ್ ಪೋಸ್ಟ್ ಗಳಲ್ಲಿ ಸಾಕಷ್ಟು ಬೀಗಿ ಮಾಡಲಾಗಿದೆ. ಕೂಲಿ ಕಾರ್ಮಿಕರನ್ನು ತೋಟದ ಮಾಲೀಕರು ಕರೆಸಿಕೊಳ್ಳುತ್ತಿದ್ದಾರೆ ಅವರೇ ಜವಾಬ್ದಾರಿ ತೆಗೆದುಕೊಂಡು ವರದಿ ನೀಡಬೇಕು ಎಂದು ಸೂಚನೆ ನೀಡಲಾಗಿದೆ ಎಂದು ತಿಳಿಸುತ್ತಾರೆ. ಇದನ್ನೂ ಓದಿ: ಮರ ಕಡಿದು ಪರಿಸರ ಶಾಲೆ ಮಾಡುತ್ತಿದೆ ಖಾಸಗಿ ಸಂಸ್ಥೆ- ಗ್ರಾಮಸ್ಥರ ಅಕ್ರೋಶ
ಒಟ್ಟಿನಲ್ಲಿ ಕೊಡಗು ಜಿಲ್ಲೆಗೆ ಹೋರ ರಾಜ್ಯದ ಕೂಲಿ ಕಾರ್ಮಿಕರು ಕೋವಿಡ್ ಟೆಸ್ಟ್ ಮಾಡಿಸದೇ ರಾತ್ರೋ ರಾತ್ರಿ ಜಿಲ್ಲೆಗೆ ಅಗಮಿಸುತ್ತಿದ್ದಾರೆ. ಇದರಿಂದ ಮತ್ತಷ್ಟು ಕಂಟಕ ಜಿಲ್ಲೆಗೆ ಎದುರಾಗುವ ಲಕ್ಷಣಗಳು ಕಂಡುಬರುತ್ತಿದೆ. ಇದನ್ನೂ ಓದಿ: ಸೋಮವಾರಪೇಟೆಯಲ್ಲಿ ‘ಸೂರಿಗಾಗಿ ಸಮರ’ ಪ್ರತಿಭಟನೆ