– ದಾರಿ ಮಧ್ಯೆಯೇ ಸುಸ್ತಾಗಿ ಸಾವನ್ನಪ್ಪಿದ
– ಕಾರ್ಮಿಕನ ಜೊತೆಗಿದ್ದವರು ಈಗ ಕ್ವಾರಂಟೈನ್
ಲಕ್ನೋ: ಕೊರೊನಾ ವೈರಸ್ ಹಾವಳಿ ಹೆಚ್ಚಾಗುತ್ತಿರುವ ಹಿನ್ನೆಲೆ ದೇಶಾದ್ಯಂತ ಜಾರಿಮಾಡಿದ್ದ ಲಾಕ್‍ಡೌನ್ ವಿಸ್ತರಿಸಲಾಗಿದೆ. ಲಾಕ್‍ಡೌನ್‍ನಿಂದ ಕೆಲಸ ಅರಸಿ ನಗರಗಳಿಗೆ ಬಂದಿದ್ದ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲಾಗದೆ ಪರದಾಡುತ್ತಿದ್ದಾರೆ. ಈ ನಡುವೆ ಸೈಕಲ್ ಏರಿ ಮನೆ ಸೇರುವ ಖುಷಿಯಲ್ಲಿದ್ದ ಬಿಹಾರ್ ಮೂಲದ ವಲಸೆ ಕಾರ್ಮಿಕನೋರ್ವ ಮಸಣ ಸೇರಿದ್ದಾನೆ.
Advertisement
ಬೀಹಾರ್ ಮೂಲದ ಧರಮ್‍ವೀರ್(32) ದೆಹಲಿಗೆ ಕೆಲಸ ಅರಸಿ ಬಂದಿದ್ದನು. ಆದರೆ ಲಾಕ್‍ಡೌನ್‍ನಿಂದ ತನ್ನ ಊರಿಗೆ ವಾಪಸ್ ಹೋಗಲು ಆಗದೇ ಪರದಾಡುತ್ತಿದ್ದನು. ಈ ವೇಳೆ ಏಪ್ರಿಲ್ 28ರಂದು ತನ್ನ ಜೊತೆಗಿದ್ದ ಇತರೆ ಕಾರ್ಮಿಕರ ಜೊತೆಗೂಡಿ ದೆಹಲಿಯಿಂದ ಸೈಕಲ್‍ನಲ್ಲಿಯೇ ಬಿಹಾರ್ ಸೇರಲು ನಿರ್ಧರಿಸಿ, ದೆಹಲಿಯಿಂದ ಬಿಹಾರ್ ರಾಜ್ಯದತ್ತ ಪ್ರಯಣ ಆರಂಭಿಸಿದನು. ಆದರೆ ಮನೆ ಸೇರುವ ಖುಷಿಯಲ್ಲಿದ್ದ ಕಾರ್ಮಿಕ ಮಾರ್ಗ ಮಧ್ಯೆ ದೆಹಲಿ-ಉತ್ತರಪ್ರದೇಶ ಹೆದ್ದಾರಿಯಲ್ಲಿ ಜಹಜಾನ್‍ಪುರದ ಬಳಿ ಸಾವನ್ನಪ್ಪಿದ್ದಾನೆ. ಇದನ್ನೂ ಓದಿ: 100 ಕಿ.ಮೀ ಏಕಾಂಗಿಯಾಗಿ ಸೈಕಲ್ ಸವಾರಿ- ವಾಪಸ್ ಪತ್ನಿಯ ಜೊತೆ ಬಂದ
Advertisement
Advertisement
ಶುಕ್ರವಾರ ರಾತ್ರಿ ಜಹಜಾನ್‍ಪುರದ ಬಳಿ ಬರುತ್ತಿದ್ದಂತೆ ಧರಮ್‍ವೀರ್ ಬಹಳ ಸುಸ್ತಾಗಿದ್ದನು. ಹೀಗಾಗಿ ಆತನ ಜೊತೆಗಿದ್ದ ಇತರೆ ಕಾರ್ಮಿಕರು ಹಾಗೂ ಆತ ಸ್ವಲ್ಪಹೊತ್ತು ವಿಶ್ರಾಂತಿ ಪಡೆಯಲು ರಸ್ತೆ ಬದಿಯಲ್ಲಿ ನಿಂತಿದ್ದರು. ಈ ವೇಳೆ ಇದ್ದಕ್ಕಿದ್ದಂತೆ ಧರಮ್‍ವೀರ್ ಸುಸ್ತಾಗಿ ಕೆಳಗೆ ಬಿದ್ದಿದ್ದು, ಆತನನ್ನು ಜೊತೆಗಿದ್ದವರು ಹತ್ತಿರದ ಆಸ್ಪತ್ರಗೆ ಕರೆದೊಯ್ದರು. ಆದರೆ ಅಷ್ಟರಲ್ಲಿ ಕಾರ್ಮಿಕ ಸಾವನ್ನಪ್ಪಿದ್ದನು.
Advertisement
ದೆಹಲಿಯಿಂದ ಬಂದಿದ್ದ ಹಿನ್ನೆಲೆ ಆಸ್ಪತ್ರೆ ಸಿಬ್ಬಂದಿ ಧರಮ್‍ವೀರ್ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದು, ಕೊರೊನಾ ಪರೀಕ್ಷೆ ಕೂಡ ಮಾಡಿದ್ದಾರೆ. ಅಲ್ಲದೆ ಆತನ ಜೊತೆಗಿದ್ದ ಕಾರ್ಮಿಕರನ್ನು ಆಸ್ಪತ್ರೆಯಲ್ಲಿಯೇ ಕ್ವಾರಂಟೈನ್ ಮಾಡಲಾಗಿದ್ದು, ಎಲ್ಲರನ್ನೂ ಕೊರೊನಾ ಪರೀಕ್ಷೆಗೆ ಒಳಪಡಿಸಲಾಗಿದೆ. ಕಾರ್ಮಿಕರಿಗೆ ಸೋಂಕು ತಗುಲಿದೆಯಾ? ಇಲ್ಲವಾ ಎಂಬುದು ಪರೀಕ್ಷಾ ವರದಿ ಬಂದಮೇಲೆ ತಿಳಿಯಲಿದೆ ಎಂದು ವೈದ್ಯರು ತಿಳಿಸಿದ್ದಾರೆ.