ನವದೆಹಲಿ: ಭಾರತೀಯ ವಾಯುಸೇನೆಯ ಮಿಗ್-25 ವಿಮಾನ ಹಿಮಾಚಲ ಪ್ರದೇಶದ ಕಾಂಗ್ರಾ ಜಿಲ್ಲೆಯ ಜಟ್ಟಿಯಾನ್ ಪ್ರದೇಶದಲ್ಲಿ ಪತನವಾಗಿದೆ.
ಜಟ್ಟಿಯಾನ್ ಬಳಿಯ ದಟ್ಟ ಅರಣ್ಯ ಪ್ರದೇಶದಲ್ಲಿ ಪತನಗೊಂಡ ವಿಮಾನದ ಬಿಡಿಭಾಗಗಳು ಪತ್ತೆಯಾಗಿದ್ದು, ಘಟನೆ ಮಾಹಿತಿ ಪಡೆದ ಬಳಿಕ ವಿಪತ್ತು ನಿರ್ವಹಣಾ ದಳ ಸ್ಥಳಕ್ಕೆ ಧಾವಿಸಿ ರಕ್ಷಣಾ ಕಾರ್ಯ ಕೈಗೊಂಡಿದೆ. ಇಂದು ಮಧ್ಯಾಹ್ನ ಒಂದು ಗಂಟೆ ವೇಳೆಗೆ ಘಟನೆ ಸಂಭವಿಸಿದ್ದು, ವಿಮಾನ ಪತನಗೊಳ್ಳಲು ಕಾರಣ ತಿಳಿದುಬಂದಿಲ್ಲ. ಅಲ್ಲದೇ ವಿಮಾನದ ಪೈಲಟ್ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ವಿಮಾನ ಪತನವಾಗುವ ಮುನ್ನ ಬೆಂಕಿ ಕಾಣಿಸಿಕೊಂಡಿದ್ದಾಗಿ ಮಾಧ್ಯಮವೊಂದು ವರದಿ ಮಾಡಿದೆ.
Advertisement
MiG-21 Indian aircraft coming from Punjab's Pathankot crashes in Patta Jattiyan in Jawali subdivision of Himachal Pradesh's Kangra district. Pilot is missing. Rescue team on the way. More details awaited pic.twitter.com/093Psw4HEj
— ANI (@ANI) July 18, 2018
Advertisement
ಕಳೆದ ಎರಡು ತಿಂಗಳ ಅವಧಿಯಲ್ಲಿ ವಾಯುಪಡೆಯ ವಿಮಾನ ಪತನಗೊಳ್ಳುವ ಎರಡನೇ ಘಟನೆ ಇದಾಗಿದೆ. ಸದ್ಯ ಪತನಗೊಂಡಿರುವ ಮಿಗ್-21 ಈ ವಿಮಾನವನ್ನು ರಷ್ಯಾ ನಿರ್ಮಾಣ ಮಾಡಿದ್ದು, ಈ ಮಾದರಿಯ ವಿಮಾನಗಳು ಸದ್ಯ ಭಾರತೀಯ ವಾಯುಪಡೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹಳೆಯ ವಿಮಾನ ಎಂದು ವರದಿಯಾಗಿದೆ.
Advertisement
ಕಳೆದ 2 ತಿಂಗಳ ಹಿಂದೆ ಕುಚ್ ನಲ್ಲಿ ನಡೆದ ಜಗ್ವಾರ್ ವಿಮಾನ ಪತನದಲ್ಲಿ ವಾಯುಪಡೆಯ ಹಿರಿಯ ಅಧಿಕಾರಿ ಮರಣ ಹೊಂದಿದ್ದರು. 2017 ಮಾರ್ಚ್ ನಲ್ಲಿ ರಾಜಸ್ಥಾನ ಬಾರ್ಮರ್ ಪ್ರದೇಶದಲ್ಲಿ ವಾಯುಪಡೆಯ ವಿಮಾನ ಪತನವಾಗಿತ್ತು. ಈ ವೇಳೆ ವಿಮಾನದಲ್ಲಿದ್ದ ಇಬ್ಬರು ಪೈಲಟ್‍ಗಳು ಪ್ರಾಣಾಪಾಯದಿಂದ ಪಾರಾಗಿದ್ದರು.