ಬೆಂಗಳೂರು: ಚುನಾವಣೆ ಕಾವು ಏರುತ್ತಿದ್ದಂತೆ ಎಣ್ಣೆ ನಶೆಯೂ ಜೋರಾಗಿದೆ. ನಡು ರಾತ್ರಿಯಲ್ಲಿ ಜನರು ಗಾಢ ನಿದ್ದೆಯಲ್ಲಿರುವ ಸಂದರ್ಭದಲ್ಲಿ ಯುವಕರು ಮದ್ಯ ಸಾಗಾಟ ಮಾಡುವ ಪ್ರಯತ್ನ ಮಾಡಿದ್ದಾರೆ.
ಬೆಂಗಳೂರಿನ ಜಯನಗರದಲ್ಲಿ ಶನಿವಾರ ನಡುರಾತ್ರಿ ಈ ಘಟನೆ ನಡೆದಿದೆ. ಮಧ್ಯರಾತ್ರಿ ಸಮಯ 2 ಗಂಟೆಯಲ್ಲಿ ಕಾರ್ ಮತ್ತು ಬೈಕ್‍ನಲ್ಲಿ ಬಂದ ಯುವಕರ ಗುಂಪು ನಿಧಾನವಾಗಿ ಬಾರ್ ಬಾಗಿಲು ತೆರೆಯುತ್ತಾರೆ. ಇನ್ನೇನು ಒಳಹೋಗಿ ಎಣ್ಣೆ ಬಾಟಲ್ ಸಾಗಿಸಬೇಕು ಅನ್ನುವಷ್ಟರಲ್ಲಿ ಹೊಯ್ಸಳ ವಾಹನ ಶಬ್ದ ಮಾಡಿಕೊಂಡು ಎಂಟ್ರಿಕೊಡುತ್ತದೆ. ಆಗ ಯುವಕರ ಅಕ್ರಮ ಮದ್ಯ ಸಾಗಾಟದ ಗೇಮ್ ಪ್ಲಾನ್ ಫೇಲ್ ಆಗಿದ್ದು, ಅಲ್ಲಿಂದ ಪರಾರಿಯಾಗಿದ್ದಾರೆ.
Advertisement
Advertisement
ಚುನಾವಣೆ ಸಮಯದಲ್ಲಿ ಅಕ್ರಮ ಮದ್ಯಮಾರಾಟ ತಡೆಗೆ ಸಾಕಷ್ಟು ವಿಂಗ್ಸ್ ನ್ನು ಅಬಕಾರಿ ಇಲಾಖೆ ತೆರೆದಿದೆ. ಒಬ್ಬ ವ್ಯಕ್ತಿಗೆ ಎರಡು ಲೀಟರ್ ಮದ್ಯ ನೀಡಬಹುದು ಎಂದು ಕಾನೂನು ರೂಪಿಸಿದೆ. ಇದಕ್ಕಾಗಿ ಕಾನೂನು ಕಣ್ತಪ್ಪಿಸಲು ರಾತ್ರಿ ಹೊತ್ತು ಬಾರ್ ತೆರೆಯಲಾಗುತ್ತಿದೆ.
Advertisement
ಈ ಬಗ್ಗೆ ಬಾರ್ ಮ್ಯಾನೇಜರ್, ರಾತ್ರಿ ಬಾರ್ ತೆರೆದಿದ್ದು, ಕ್ಯಾಶ್ ತೆಗೆದುಕೊಂಡು ಹೋಗಲು, ಅಕ್ರಮ ಮದ್ಯ ಮಾರಾಟದ ಉದ್ದೇಶ ನಮಗಿಲ್ಲ ಎಂದು ಹೇಳಿದ್ದಾರೆ.
Advertisement