‘ಬಿಗ್ ಬಾಸ್ ಕನ್ನಡ 11’ರ (Bigg Boss Kannada 11) ಆಟ ಇನ್ನೇನು 10 ದಿನಗಳಲ್ಲಿ ಅಂತ್ಯವಾಗಲಿದೆ. ದೊಡ್ಮನೆ ಆಟ ಸಾಕಷ್ಟು ಟ್ವಿಸ್ಟ್ ಪಡೆದು ಮುನ್ನುಗ್ಗುತ್ತಿದೆ. ಹೀಗಿರುವಾಗ ಧನರಾಜ್ (Dhanraj Achar) ಮಾಡಿರುವ ಚೀಟಿಂಗ್‌ನಿಂದ ಸ್ಪರ್ಧಿಗಳು ಕಷ್ಟಪಟ್ಟಿದ್ದೆಲ್ಲ ನೀರಲ್ಲಿ ಹೋಮ ಮಾಡಿದಂತೆ ಆಗಿದೆ. ಹಾಗಾಗಿ ಬಿಗ್ ಬಾಸ್ ದಿಟ್ಟ ನಿರ್ಧಾರವೊಂದನ್ನು ಕೈಗೊಂಡಿದ್ದಾರೆ.
ಸಂಕ್ರಾಂತಿ ಹಬ್ಬ ಎಂಬ ಕಾರಣಕ್ಕೆ ಮಿಡ್ ವೀಕ್ ಎಲಿಮಿನೇಷನ್ ಅನ್ನು ಒಂದು ದಿನಕ್ಕೆ ಮುಂದೂಡಲಾಗಿತ್ತು. ಆದರೆ ಈಗ ಏಕಾಏಕಿ ಎಲಿಮಿನೇಷನ್ ಕ್ಯಾನ್ಸಲ್ ಮಾಡಲಾಗಿದೆ. ಅದಕ್ಕೆ ಕಾರಣ ಆಗಿರುವುದು ಧನರಾಜ್ ಮಾಡಿದ ಒಂದು ತಪ್ಪು. ಟಾಸ್ಕ್ ವೇಳೆ ಧನರಾಜ್ ಅವರು ಮೋಸ ಮಾಡಿದ್ದಾರೆ ಎಂಬ ಕಾರಣದಿಂದ ಮಿಡ್ ವೀಕ್ ಎಲಿಮಿನೇಷನ್ ಪ್ರಕ್ರಿಯೆನೇ ರದ್ದಾಗಿದೆ. ಟಾಸ್ಕ್ ವೇಳೆ ಕನ್ನಡಿ ನೋಡಿಕೊಂಡು ಧನರಾಜ್ ಮೋಸ ಮಾಡಿದ್ದಾರೆ ಎಂಬ ಆರೋಪ ಎದುರಾಗಿದೆ. ಒಟ್ಟಿನಲ್ಲಿ ಆ ಕಾರಣವನ್ನು ನೀಡಿ ಮಿಡ್ ವೀಕ್ ಎಲಿಮಿನೇಷನ್ ಕ್ಯಾನ್ಸಲ್ ಮಾಡಲಾಗಿದೆ.
ಟಾಸ್ಕ್ ವೇಳೆ ತಪ್ಪಾಗಿದೆ ಎಂಬ ಕಾರಣವನ್ನು ಧನರಾಜ್ ಅವರು ಇಮ್ಯುನಿಟಿಯನ್ನು ಹಿಂಪಡೆಯಲಾಗಿದೆ. ಹಾಗಾಗಿ ಈ ವಾರ ನಾಮಿನೇಟ್ ಆಗಿದ್ದಾರೆ. ಒಟ್ಟು 7 ಮಂದಿ ಮೇಲೆ ಎಲಿಮಿನೇಷನ್ ಕತ್ತಿ ತೂಗುತ್ತಿದೆ. ಅವರಲ್ಲಿ ಇಬ್ಬರು ಈ ವಾರ ನಾಮಿನೇಟ್ ಆಗುವುದು ಖಚಿತ. ಆದರೆ ಯಾವಾಗ ಎಲಿಮಿನೇಷನ್ ನಡೆಯಲಿದೆ ಯಾವ ರೀತಿ ನಡೆಯಲಿದೆ ಎಂಬುದಕ್ಕೆ ಕಾಲವೇ ಉತ್ತರಿಸಲಿದೆ ಎಂದು ಬಿಗ್ ಬಾಸ್ ಹೇಳಿದ್ದಾರೆ.
ಇನ್ನೂ ಟಾಸ್ಕ್‌ನಲ್ಲಿ ಮೋಸ ಆಗಿದೆ ಎಂಬ ಆರೋಪ ಬಂದಿದ್ದರಿಂದ ಅವರು ಅಳಲು ಆರಂಭಿಸಿದರು. ತಮ್ಮನ್ನು ಕೂಡ ನಾಮಿನೇಟ್ ಮಾಡಿ ಎಂದು ‘ಬಿಗ್ ಬಾಸ್’ ಬಳಿ ಮನವಿ ಮಾಡಿಕೊಂಡರು. ಮತ್ತೆ ಹೊಸದಾಗಿ ನಾಮಿನೇಷನ್ ಪ್ರತಿಕ್ರಿಯೆ ಮಾಡಲಾಗಿದೆ. ಸದ್ಯ ಕ್ಯಾಪ್ಟನ್ ಆಗಿರುವ ಹನುಮಂತ ಮಾತ್ರ ಸೇಫ್ ಆಗಿದ್ದಾರೆ. ಮಿಡ್ ಎಲಿಮಿನೇಷನ್ ಕ್ಯಾನ್ಸಲ್ ಆಗಿರುವ ಹಿನ್ನೆಲೆ ಈ ವಾರಾಂತ್ಯದಲ್ಲಿ ಡಬಲ್ ಎಲಿಮಿನೇಷನ್ ನಡೆಯಲಿದೆ. ಯಾವ ಇಬ್ಬರೂ ಸ್ಪರ್ಧಿಗಳಿಗೆ ಗೇಟ್ ಪಾಸ್ ಸಿಗಲಿದೆ ಎಂದು ಕಾಯಬೇಕಿದೆ.