ವಿಜಯಪುರ: ಬಡ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ಬಿಸಿ ಊಟದ ವ್ಯವಸ್ಥೆ ಮಾಡಿದೆ. ಬಿಸಿ ಊಟದ ಕೆಲಸಕ್ಕಾಗಿಯೇ ಅಡುಗೆಯವರನ್ನೂ ನೇಮಿಸಿದೆ. ವಿಜಯಪುರದಲ್ಲಿ ಬಿಸಿ ಊಟದ ಕೆಲಸದವರು ಕೈ ತುಂಬಾ ಸಂಬಳ ತೆಗೆದುಕೊಳ್ತಾರೆ. ಆದ್ರೆ ಅವರ ಕೆಲಸವನ್ನೆಲ್ಲಾ ವಿದ್ಯಾರ್ಥಿಗಳೇ ಮಾಡುತ್ತಾರೆ.
Advertisement
ಇದು ನಗರದ ಶಾಲೆ ನಂ 38 ಉರ್ದು ಶಾಲೆಯ ಕಥೆ. ಇಲ್ಲಿ ಕನ್ನಡ ಮತ್ತು ಉರ್ದು ಶಾಲೆಗಳು ಒಟ್ಟಾಗಿವೆ. ಉರ್ದು ಶಾಲೆಯಲ್ಲಿ 22 ವಿದ್ಯಾರ್ಥಿಗಳಿದ್ದಾರೆ. ಶನಿವಾರದಂದು ಕನ್ನಡ ಶಾಲೆಗೆ ಮಧ್ಯಾಹ್ನ ತರಗತಿಗಳು ಮುಗಿಯುತ್ತದೆ. ಆದ್ದರಿಂದ ಉರ್ದು ಶಾಲೆಯ ವಿದ್ಯಾರ್ಥಿಗಳಿಗೆ ಅಡುಗೆ ಮಾಡಿ ಅಡುಗೆ ಸಹಾಯಕರು ಬೇಗನೆ ಮನೆಗೆ ಹೋಗುತ್ತಾರೆ.
Advertisement
Advertisement
ಮಧ್ಯಾಹ್ನ ಊಟ ಮಾಡಿದ ಉರ್ದು ಶಾಲೆಯ ವಿದ್ಯಾರ್ಥಿಗಳು ತಟ್ಟೆಯಿಂದ ಹಿಡಿದು ಅಡುಗೆಯ ಪಾತ್ರೆಗಳನ್ನೆಲ್ಲಾ ತಾವೇ ತೊಳೆಯಬೇಕು. ಈ ಬಗ್ಗೆ ಶಾಲೆಯ ಮುಖ್ಯೋಪಾಧ್ಯಾಯಿನಿ ಅವರನ್ನು ಪ್ರಶ್ನಿಸಿದರೆ ಈ ವಿಷಯನೇ ಗೊತ್ತಿಲ್ಲ. ನಾನು ಶಿಕ್ಷಕರ ಕಾರ್ಯಾಗಾರಕ್ಕೆ ಬಂದಿದ್ದೇನೆ ಅಂತಾ ಹೇಳಿದ್ದಾರೆ.
Advertisement
ಆದರೆ ಇನ್ನೊಬ್ಬ ಶಿಕ್ಷಕಿ ಈ ಬಗ್ಗೆ ಮೇಲಾಧಿಕಾರಿಗಳ ಗಮನಕ್ಕೆ ತರಲಾಗಿದ್ದು, ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.