ಹಾವೇರಿ: ರಾಜ್ಯದಲ್ಲಿ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದು ಎನ್ನುವ ಉದ್ದೇಶಕ್ಕೆ ಮಕ್ಕಳಿಗೆ ಬಿಸಿಯೂಟ ಯೋಜನೆ ಜಾರಿಗೆ ತರಲಾಗಿದೆ. ಆದರೆ ಹಾವೇರಿ (Haveri) ಜಿಲ್ಲೆಯ ಕೆಲವು ಶಾಲೆಗಳಿಗೆ ಬಿಸಿಯೂಟದ ಯೋಜನೆ ರೇಷನ್ ವ್ಯತ್ಯಯ ಆಗಿದೆ. ಕೆಲವು ಶಾಲೆಯಲ್ಲಿ ಶಾಲೆಯಲ್ಲಿ ಶಿಕ್ಷಕರೇ ಸ್ವಂತ ಹಣದಿಂದ ಖರೀದಿಸಿ ಬಿಸಿಯೂಟ ಮಾಡಿಸುತ್ತಾರೆ. ಪ್ರತಿದಿನ ಬಿಸಿಯೂಟ (Mid Day Meal) ಮಾಡಲು ಶಿಕ್ಷಕರು ಪರದಾಡುವ ಪರಿಸ್ಥಿತಿ ಉಂಟಾಗಿದೆ.
ರಾಜ್ಯದ ಶಾಲಾ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದರ ಜೊತೆಗೆ ಬಿಸಿಯೂಟ ನೀಡಬೇಕೆಂಬುವುದು ಸರ್ಕಾರದ ಆಶಯ. ಆದರೆ ಹಾವೇರಿ ಜಿಲ್ಲೆಯ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಜಿಲ್ಲೆಯ ಅನೇಕ ಶಾಲೆಗಳಿಗೆ ಈ ತಿಂಗಳ ರೇಷನ್ ಪೂರೈಕೆ ಆಗಿಲ್ಲ. ಪ್ರಮುಖವಾಗಿ ಅಕ್ಕಿ ಹಾಗೂ ಗೋಧಿ ಜಿಲ್ಲೆಯ ಎಲ್ಲಾ ತಾಲೂಕು ಕೇಂದ್ರಗಳಿಗೆ ತಲುಪಿದೆ. ಆದರೆ ಅದನ್ನು ಶಾಲೆಗಳಿಗೆ ಪೂರೈಕೆ ಮಾಡದೆ ಇರುವುದರಿಂದ ಪಾಠ ಮಾಡುವುದನ್ನ ಬಿಟ್ಟು ಪ್ರತಿದಿನ ಸಮೀಪದ ಅಂಗಡಿಯಿಂದ ಪಡಿತರ ತಂದು ಬಿಸಿಯೂಟ ಮಾಡುವ ಪರಿಸ್ಥಿತಿ ಶಿಕ್ಷಕರದ್ದಾಗಿದೆ. ಇದನ್ನೂ ಓದಿ: ಇಂದಿರಾ ಕ್ಯಾಂಟೀನ್ ಊಟದ ದರದಲ್ಲಿ ಯಾವುದೇ ವ್ಯತ್ಯಾಸವಿಲ್ಲ: ಹೆಚ್.ಕೆ ಪಾಟೀಲ್ ಸ್ಪಷ್ಟನೆ
Advertisement
Advertisement
ಇನ್ನು ಕೆಲವು ಶಾಲೆಯ ಹಳೆಯ ಸ್ಟಾಕ್ ಬಳಸಿ ಬಿಸಿಯೂಟ ತಯಾರಿಸಲಾಗುತ್ತಿದೆ. ಬೇಳೆ ಹಾಗೂ ಅಡುಗೆ ಎಣ್ಣೆ ಸಹ ಬಂದಿಲ್ಲ. ಇನ್ನು ಈ ಬಗ್ಗೆ ಜಿಲ್ಲಾ ಪಂಚಾಯಿತಿ ಸಿಇಓ ಬಳಿ ಕೇಳಿದರೆ ತಾಲೂಕು ಮಟ್ಟದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿ ಆಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.
Advertisement
Advertisement
ರಾಜ್ಯ ಸರ್ಕಾರದ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಗೆ ತಲುಪಿಸುವ ಜವಾಬ್ದಾರಿ ಅಧಿಕಾರಿಗಳು ಮಾಡಬೇಕು. ಅದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಮಕ್ಕಳ ಊಟಕ್ಕೆ ಸಮಸ್ಯೆ ಆಗಿದೆ. ಇನ್ನಾದರು ಅಧಿಕಾರಿಗಳು ಎಚ್ಚೆತ್ತು ಮಕ್ಕಳ ಊಟಕ್ಕೆ ತೊಂದರೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ. ಇದನ್ನೂ ಓದಿ: ಮಂಡ್ಯದಲ್ಲಿ ಮಾಜಿ ಸಚಿವ ಪುಟ್ಟರಾಜುಗೆ ಕಾಂಗ್ರೆಸ್ ಗಾಳ!
Web Stories