ಲಕ್ನೋ: ಇತ್ತೀಚೆಗಷ್ಟೇ ಉತ್ತರಪ್ರದೇಶದ ಶಾಲೆಯೊಂದರಲ್ಲಿ 1 ಲೀಟರ್ ಹಾಲಿಗೆ 1 ಬಕೆಟ್ ನೀರು ಹಾಕಿ ಮಕ್ಕಳಿಗೆ ನೀಡಿದ ಬೆನ್ನಲ್ಲೇ ಇದೀಗ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ.
ಶಾಲೆಯಲ್ಲಿ ನೀಡಲಾಗುತ್ತಿರುವ ಮಧ್ಯಾಹ್ನದ ಬಿಸಿಯೂಟದಲ್ಲಿ ಸತ್ತ ಇಲಿಯೊಂದು ಸಿಕ್ಕಿರುವುದು ಉತ್ತರಪ್ರದೇಶದ ಮುಜಾಫರ್ ನಗರದಲ್ಲಿ ಬೆಳಕಿಗೆ ಬಂದಿದೆ.
Advertisement
6 ಮತ್ತು 8 ನೇ ತರಗತಿ ವಿದ್ಯಾರ್ಥಿಗಳಿಗೆ ಮುಜಾಫರ್ ನಗರದಿಂದ 90 ಕೀ.ಮಿ ದೂರದಲ್ಲಿರುವ ಹಾಪುರ್ ನ ಜನ್ ಕಲ್ಯಾಣ್ ವಿಕಾಸ್ ಕಮಿಟಿ ಎಂಬ ಎನ್‍ಜಿಓ ಒಂದು ಊಟ ತಯಾರು ಮಾಡುತ್ತಿದೆ. ಇಂದು ಮಧ್ಯಾಹ್ನ ಆಹಾರ ಸೇವಿಸಿದವರಲ್ಲಿ 9 ಮಂದಿ ವಿದ್ಯಾರ್ಥಿಗಳು ಹಾಗೂ ಶಿಕ್ಷಕರೊಬ್ಬರು ಅಸ್ವಸ್ಥರಾಗಿದ್ದಾರೆ. ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು.
Advertisement
Advertisement
ಬಳಿಕ ಸುದ್ದಿ ಸಂಸ್ಥೆಯೊಂದು ಅಸ್ವಸ್ಥರನ್ನು ಮಾತನಾಡಿಸಿದಾಗ, ನಾವು ಸ್ಪೂನ್ ನಲ್ಲಿ ದಾಲ್ ತೆಗೆದುಕೊಂಡಾಗ ಇಲಿಯನ್ನು ನೋಡಿದೆವು. ಇದು ದಾಲ್ ಪಾತ್ರೆಯ ತಳಭಾಗದಲ್ಲಿತ್ತು. ಅದಾಗಲೇ ಸುಮಾರು 15 ಮಂದಿ ಮಕ್ಕಳಿಗೆ ಊಟ ಸರ್ವ್ ಮಾಡಲಾಗಿತ್ತು ಎಂದು 6ನೇ ತರಗತಿ ವಿದ್ಯಾರ್ಥಿ ಶಿವಾಂಗ್ ತಿಳಿಸಿದ್ದಾನೆ. ಇದನ್ನೂ ಓದಿ: ಶಾಲೆಯಲ್ಲಿ 1 ಲೀಟರ್ ಹಾಲನ್ನು 81 ವಿದ್ಯಾರ್ಥಿಗಳಿಗೆ ಹಂಚಿದ್ರು!
Advertisement
ಈ ವಿಚಾರ ಸಂಬಂಧ ಸ್ಥಳೀಯ ಶಿಕ್ಷಣಾಧಿಕಾರಿ ರಾಮ್ ಸಾಗರ್ ತೃಪಾತಿ ಮಾತನಾಡಿ, ಊಟದಲ್ಲಿ ಇಲಿ ಸಿಕ್ಕ ವಿಚಾರ ತಿಳಿದು ಶಾಕ್ ಆಯಿತು. ನಿರ್ಲಕ್ಷ್ಯತನದಿಂದ ಇಂತಹ ಕೆಲಸವಾಗಿದೆ ಎಂದು ಹೇಳಿದ್ದಾರೆ.
ಜನ್ ಕಲ್ಯಾಣ್ ವಿಕಾಸ್ ಕಮಿಟಿ ಇಂದು ತಯಾರಿಸಿದ ಮಧ್ಯಾಹ್ನದ ಬಿಸಿಯೂಟದ ದಾಲ್ ನಲ್ಲಿ ಇಲಿ ಸಿಕ್ಕಿದೆ. ಆ ಕೂಡಲೇ ನಾವು ಮಕ್ಕಳಿಗೆ ನೀಡುವುದನ್ನು ನಿಲ್ಲಿಸಿದ್ದೇವೆ. ಘಟನೆಯಿಂದ 9 ಮಂದಿ ಮಕ್ಕಳು ಅಸ್ವಸ್ಥರಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ. ಎಲ್ಲರೂ ಆರಾಮಾಗಿದ್ದಾರೆ. ಯಾವುದೇ ತೊಂದರೆ ಇಲ್ಲ. ಇದು ನಿರ್ಲಕ್ಷ್ಯತನದಿಂದಾಗಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತೃಪಾತಿ ವಿವರಿಸಿದ್ದಾರೆ.