ವಾಷಿಂಗ್ಟನ್: ದೈತ್ಯ ಟೆಕ್ ಕಂಪನಿ ಮೈಕ್ರೋಸಾಫ್ಟ್ (Microsoft) ಪೋಷಕರ ಒಪ್ಪಿಗೆಯಿಲ್ಲದೆ ಮಕ್ಕಳ ವೈಯಕ್ತಿಕ ಮಾಹಿತಿಯನ್ನು (Children’s Personal Data) ಅಕ್ರಮವಾಗಿ ಸಂಗ್ರಹಿಸಿದೆ ಎಂದು ಅಮೆರಿಕದ ಫೆಡರಲ್ ಟ್ರೇಡ್ ಕಮಿಷನ್ (FTC) ಆರೋಪಿಸಿದೆ. ಇದನ್ನು ಇತ್ಯರ್ಥಗೊಳಿಸಲು ಇದೀಗ ಮೈಕ್ರೋಸಾಫ್ಟ್ ಬರೋಬ್ಬರಿ 20 ಮಿಲಿಯನ್ ಡಾಲರ್ (ಸುಮಾರು 165 ಕೋಟಿ ರೂ.) ಪಾವತಿಸಲು ಮುಂದಾಗಿದೆ ಎಂದು ವರದಿಗಳು ತಿಳಿಸಿವೆ.
ಮೈಕ್ರೋಸಾಫ್ಟ್‌ನ ಎಕ್ಸ್‌ಬಾಕ್ಸ್ (Xbox) ಗೇಮಿಂಗ್ ಸಿಸ್ಟಂಗೆ ಸೈನ್‌ಅಪ್ ಆಗಿರುವ ಮಕ್ಕಳು ತಮ್ಮ ಪೋಷಕರಿಗೆ ತಿಳಿಸದೇ ಅಥವಾ ಪೋಷಕರ ಒಪ್ಪಿಗೆ ಪಡೆಯದೇ ವೈಯಕ್ತಿಕ ಮಾಹಿತಿಗಳನ್ನು ಸಂಗ್ರಹಿಸಿದೆ. ಇದು ಅಮೆರಿಕದ ಮಕ್ಕಳ ಆನ್‌ಲೈನ್ ಗೌಪ್ಯತೆ ಸಂರಕ್ಷಣಾ ಕಾಯಿದೆಯನ್ನು (COPPA) ಉಲ್ಲಂಘಿಸಿದೆ ಎಂದು ಎಫ್‌ಟಿಸಿ ಆರೋಪಿಸಿದೆ.
Advertisement
Advertisement
ಮೈಕ್ರೋಸಾಫ್ಟ್ ತನ್ನ ಎಕ್ಸ್‌ಬಾಕ್ಸ್ ಸಿಸ್ಟಮ್‌ನ ಮಕ್ಕಳ ಬಳಕೆದಾರರಿಗೆ ಗೌಪ್ಯತೆಯ ರಕ್ಷಣೆಯನ್ನು ಸುಧಾರಿಸಲು ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ. ಮೈಕ್ರೋಸಾಫ್ಟ್ ಮಕ್ಕಳ ಡೇಟಾವನ್ನು ಹಂಚಿಕೊಳ್ಳುವ ಮೂರನೇ ವ್ಯಕ್ತಿಯ ಗೇಮಿಂಗ್ ಪಬ್ಲಿಷರ್‌ಗಳಿಗೆ ಇದು ಸಿಒಪಿಪಿಎ ರಕ್ಷಣೆಯನ್ನು ಒದಗಿಸುತ್ತದೆ ಎಂದು ಎಫ್‌ಟಿಸಿ ಹೇಳಿದೆ. ಇದನ್ನೂ ಓದಿ: 100 ಭೂಕಂಪಗಳಾದ್ರೂ ಜಗ್ಗದೇ ನಿಂತಿದೆ 10 ಅಂತಸ್ತಿನ ಮರದ ಕಟ್ಟಡ – ಎಲ್ಲಿದೆ ಕಟ್ಟಡ, ಏನಿದರ ವಿಶೇಷತೆ!?
Advertisement
13 ವರ್ಷದೊಳಗಿನ ಮಕ್ಕಳಿಗೆ ನಿರ್ದೇಶಿಸಲಾದ ಆನ್‌ಲೈನ್ ಸೇವೆಗಳು ಹಾಗೂ ವೆಬ್‌ಸೈಟ್‌ಗಳು ಸಂಗ್ರಹಿಸುವ ಮಾಹಿತಿಗಳ ಕುರಿತು ಪೋಷಕರಿಗೆ ತಿಳಿಸಲು ಹಾಗೂ ಮಕ್ಕಳ ವೈಯಕ್ತಿಕ ಮಾತಿಗಳನ್ನು ಸಂಗ್ರಹಿಸುವುದಕ್ಕೂ ಮೊದಲು ಪರಿಶೀಲಿಸಿ ಒಪ್ಪಿಗೆಯನ್ನು ಪಡೆಯುವ ಕಾನೂನಿನ ಅಗತ್ಯವಿದೆ.
Advertisement
2015 ರಿಂದ 2020 ರವರೆಗೆ ಪೋಷಕರು ಒಪ್ಪಿಗೆ ನೀಡಲು ವಿಫಲರಾಗಿದ್ದರೂ ಸಹ ಖಾತೆ ರಚನೆ ಪ್ರಕ್ರಿಯೆಯಲ್ಲಿ ಮಕ್ಕಳಿಂದ ಸಂಗ್ರಹಿಸಲಾದ ಡೇಟಾವನ್ನು ಮೈಕ್ರೋಸಾಫ್ಟ್ ಇನ್ನೂ ಉಳಿಸಿಕೊಂಡಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದನ್ನೂ ಓದಿ: ಒಡಿಶಾ ರೈಲು ದುರಂತವಾಗಿ 4 ದಿನ ಕಳೆದರೂ 101 ಮೃತದೇಹಗಳ ಗುರುತು ಇನ್ನೂ ಪತ್ತೆಯಾಗಿಲ್ಲ