ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಶೃಂಗಸಭೆಯಲ್ಲಿ (AI Impact Summit) ಮೈಕ್ರೋಸಾಫ್ಟ್ ಮಹತ್ವದ ಘೋಷಣೆ ಮಾಡಿದೆ. 2030 ರ ವೇಳೆಗೆ AI ಸಂಬಂಧಿತ ಮೂಲ ಸೌಕರ್ಯಗಳ ಮತ್ತು ಕೌಶಲ್ಯ ಅಭಿವೃದ್ಧಿಗಾಗಿ ಸುಮಾರು 50 ಶತಕೋಟಿ ಡಾಲರ್ (ಸುಮಾರು 4 ಲಕ್ಷ ಕೋಟಿ ರೂ.) ಹೂಡಿಕೆ ಮಾಡುವುದಾಗಿ ಕಂಪನಿ ಹೇಳಿದೆ.
ಈ ಕುರಿತು ಮೈಕ್ರೋಸಾಫ್ಟ್ (Microsoft) ಅಧ್ಯಕ್ಷ ಬ್ರಾಡ್ ಸ್ಮಿತ್ (Brad Smith), ದೆಹಲಿಯಲ್ಲಿ ನಡೆಯುತ್ತಿರುವ AI ಶೃಂಗಸಭೆಯಲ್ಲಿ ಮಾತನಾಡಿದ್ದಾರೆ. AI ಪ್ರಯೋಜನಗಳು ಈವರೆಗೂ ಜಾಗತಿಕವಾಗಿ ಸಮಾನವಾಗಿ ವಿತರಿಸಲ್ಪಟ್ಟಿಲ್ಲ. ಕೆಲವು ದೇಶಗಳಲ್ಲಿ ಎಐ ವೇಗವಾಗಿ ಬೆಳೆಯುತ್ತಿದ್ದರೆ, ಇನ್ನೂ ಕೆಲ ದೇಶಗಳಲ್ಲಿ ಅದರ ವ್ಯಾಪ್ತಿ ಸೀಮಿತವಾಗಿದೆ. ಈ ವ್ಯತ್ಯಾಸವನ್ನು ತಪ್ಪಿಸಿ, ದೊಡ್ಡ ದೊಡ್ಡ ದೇಶಗಳು ಮತ್ತು ದೊಡ್ಡ ಕಂಪನಿಗಳು ಮಾತ್ರವಲ್ಲದೇ ಸಾಮಾನ್ಯ ಜನರನ್ನೂ ಎಐ (ಕೃತಕ ಬುದ್ಧಿಮತ್ತೆ) ತಲುಪಬೇಕೆಂದು ಕಂಪನಿ ಬಯಸುತ್ತದೆ ಎಂದು ತಿಳಿಸಿದರು.
ಭಾರತ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕದಂತಹ ದೊಡ್ಡ ದೇಶಗಳಲ್ಲಿ AI ಗೆ ದೊಡ್ಡ ಅವಕಾಶವಿದೆ. ಈ ದೇಶಗಳಲ್ಲಿ ಪ್ರತಿಭೆಗಳು ಮತ್ತು ಬಳಕೆದಾರರು ಇಬ್ಬರೂ ಇದ್ದಾರೆ. ಆದ್ರೆ ಸರಿಯಾದ ಮೂಲಸೌಕರ್ಯ ಮತ್ತು ತರಬೇತಿ ಇಲ್ಲದೇ, ಎಐ ನ ಪೂರ್ಣ ಪ್ರಯೋಜನವನ್ನು ಅರಿತುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ ಮೈಕ್ರೋಸಾಫ್ಟ್ ಎಐ ಮೂಲ ಸೌಕರ್ಯಗಳ ವೃದ್ಧಿಗೆ ಮುಂದಾಗಿದೆ. ಇದನ್ನೂ ಓದಿ: ಅಮೆರಿಕ ನೇತೃತ್ವದ ʻಪ್ಯಾಕ್ಸ್ ಸಿಲಿಕಾʼ ಮೈತ್ರಿಕೂಟಕ್ಕೆ ಭಾರತ ಸೇರ್ಪಡೆ

ಡೇಟಾ ಸೆಂಟರ್, ಕ್ಲೌಡ್ ನತ್ತ ಚಿತ್ತ
ಮೈಕ್ರೋಸಾಫ್ಟ್ ಸಂಸ್ಥೆಯು AI ಡೇಟಾ ಸೆಂಟರ್‌ಗಳು, ಕ್ಲೌಡ್ ಮೂಲಸೌಕರ್ಯ ಮತ್ತು ಸ್ಥಳೀಯ ಮಟ್ಟದಲ್ಲಿ AI ಕೌಶಲ್ಯಗಳನ್ನ ಹೆಚ್ಚಿಸುವತ್ತ ಗಮನಹರಿಸುತ್ತದೆ. ಭವಿಷ್ಯದಲ್ಲಿ ಹೆಚ್ಚಿನ ಜನರು AI ಪರಿಕರಗಳನ್ನ ಪರಿಣಾಮಕಾರಿಯಾಗಿ ಬಳಸಲು ಸಾಧ್ಯವಾಗುವಂತೆ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನ AI ಯೊಂದಿಗೆ ಸಂಪರ್ಕಿಸಲು ಸಹ ಪ್ಲ್ಯಾನ್ ಮಾಡಿಕೊಂಡಿದೆ. ಇದನ್ನೂ ಓದಿ: AI Impact ಶೃಂಗಸಭೆಯಲ್ಲಿ ರಾಜ್ಯದ ಸಾಧನೆ ಪ್ರದರ್ಶನ – ಎಐ ಕ್ಷೇತ್ರ, ನವೋದ್ಯಮಗಳ ಮುಖ್ಯಸ್ಥರ ಜೊತೆ ಪ್ರಿಯಾಂಕ್ ಖರ್ಗೆ ಸಮಾಲೋಚನೆ
ಮೈಕ್ರೋಸಾಫ್ಟ್‌ಗೆ ಭಾರತ ಮಾತ್ರವೇ ಪ್ರಮುಖ ಮಾರುಕಟ್ಟೆಯಲ್ಲ. ಏಕೆಂದ್ರೆ ಸಂಸ್ಥೆಯು ಭಾರತದಲ್ಲಿ ಕ್ಲೌಡ್ ಮತ್ತು AI ಮೂಲಸೌಕರ್ಯಗಳಲ್ಲಿ ಹೂಡಿಕೆ ಮಾಡುತ್ತಲೇ ಇದೆ. ಆದ್ರೆ ತರಬೇತಿ ಮತ್ತು ಎಐ ಡೇಟಾ ಸೆಂಟರ್‌ನಂತಹ ಕಾರ್ಯಕ್ರಮಗಳಿಂದ AI-ಸಂಬಂಧಿತ ಸ್ಟಾರ್ಟ್‌ಅಪ್‌ಗಳೂ ಪ್ರಯೋಜನ ಪಡೆಯುತ್ತವೆ ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ದೆಹಲಿಯಲ್ಲಿ ಎಐ ದಿಗ್ಗಜರು – ಏನಿದು ಮೋದಿಯ MANAV ವಿಷನ್?

