10 ಸಾವಿರ ಉದ್ಯೋಗಿಗಳನ್ನು ತೆಗೆಯಲು ಮುಂದಾದ ಮೈಕ್ರೋಸಾಫ್ಟ್

ವಾಷಿಂಗ್ಟನ್: ಫೇಸ್‌ಬುಕ್, ಅಮೆಜಾನ್ ಬಳಿಕ ಸಾಫ್ಟ್‌ವೇರ್ ದಿಗ್ಗಜ ಕಂಪನಿ ಮೈಕ್ರೋಸಾಫ್ಟ್ ಉದ್ಯೋಗಿಗಳನ್ನು ತೆಗೆಯುವ ಪ್ರಕ್ರಿಯೆಗೆ(Lay Off) ಮುಂದಾಗಿದೆ.
ಮೈಕ್ರೋಸಾಫ್ಟ್ (Microsoft) ಶೀಘ್ರವೇ ಸಾವಿರರು ಉದ್ಯೋಗಿಗಳನ್ನು ತೆಗೆಯಲು ಮುಂದಾಗಿದೆ ಎಂದು ವರದಿಯಾಗಿದೆ. ಮಾನವ ಸಂಪನ್ಮೂಲ ಮತ್ತು ಎಂಜಿನಿಯರಿಂಗ್ ವಿಭಾಗ ಸೇರಿ ಸಾವಿರಾರು ಉದ್ಯೋಗಗಳನ್ನು ಕಡಿತಗೊಳಿಸಲು ಮೈಕ್ರೋಸಾಫ್ಟ್ ಯೋಜಿಸಿದೆ. ಇದನ್ನೂ ಓದಿ: ಅಮೆಜಾನ್‌ನಲ್ಲಿ ಉದ್ಯೋಗ ಕಡಿತ – ಕ್ಯಾಬಿನ್‌ನಲ್ಲೇ ಕಣ್ಣೀರಿಟ್ಟ ಉದ್ಯೋಗಿಗಳು
ಆರ್ಥಿಕ ಹಿಂಜರಿತದ (Economic Recession) ಕಾರಣ ನೀಡಿ ತನ್ನ ಉದ್ಯೋಗಿಗಳ ಶೇ.5 ರಷ್ಟು ಅಥವಾ ಸುಮಾರು 11 ಸಾವಿರ ಉದ್ಯೋಗಿಗಳನ್ನು ತೆಗೆಯಲು ಮೈಕ್ರೋಸಾಫ್ಟ್ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ನನ್ನ ಸಂಬಳ ಭಾರೀ ಹೆಚ್ಚಾಯ್ತು: ಟಿಮ್ ಕುಕ್ ಸಂಬಳ ಅರ್ಧಕ್ಕರ್ಧ ಇಳಿಕೆ
2022ರ ಜೂನ್‌ನಲ್ಲಿ ಸಲ್ಲಿಸಿದ ಫೈಲಿಂಗ್‌ನಲ್ಲಿ ಮೈಕ್ರೋಸಾಫ್ಟ್‌ನಲ್ಲಿ ಒಟ್ಟು 2.21 ಲಕ್ಷ ಉದ್ಯೋಗಿಗಳಿದ್ದರು. ಅಮೆರಿಕದಲ್ಲೇ 1.22 ಲಕ್ಷ ಉದ್ಯೋಗಿಗಳಿದ್ದರೆ ವಿವಿಧ ದೇಶಗಳಲ್ಲಿ ಒಟ್ಟು 99 ಸಾವಿರ ಉದ್ಯೋಗಿಗಳಿದ್ದರು.
Live Tv
Join our Whatsapp group by clicking the below link
https://chat.whatsapp.com/E6YVEDajTzH06LOh77r25k