ವಾಷಿಂಗ್ಟನ್: ಮೈಕ್ರೋಸಾಫ್ಟ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ(ಸಿಇಒ) ಸತ್ಯ ನಾಡೆಲ್ಲಾ ಅವರ ಪುತ್ರ ಜೈನ್ ನಾಡೆಲ್ಲಾ ಸೋಮವಾರ ನಿಧನರಾಗಿದ್ದಾರೆ.
ಸತ್ಯ ನಾಡೆಲ್ಲಾ ಪುತ್ರ ಜೈನ್ ನಾಡೆಲ್ಲಾ ಕೇವಲ 26 ವಯಸ್ಸಿನಲ್ಲಿ ಕೊನೆಯುಸಿರೆಳೆದಿದ್ದಾರೆ. ಜೈನ್ ನಾಡೆಲ್ಲಾ ಹುಟ್ಟಿನಿಂದ ಝೈನ್ ಸೆರೆಬ್ರಲ್ ಪಾಲ್ಸಿ ಕಾಯಿಲೆ(ಸ್ನಾಯು ಸಂಬಂಧಿ ಅಸ್ವಸ್ಥತೆ) ಹೊಂದಿದ್ದರು ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಉಕ್ರೇನ್‍ನ ಶಾಲಾ- ಕಾಲೇಜುಗಳ ಮೇಲೆ ರಷ್ಯಾದಿಂದ ಫಿರಂಗಿ ದಾಳಿ
ಮೈಕ್ರೋಸಾಫ್ಟ್ ಸಿಇಒ ಸೋಮವಾರ ತನ್ನ ಸಿಬ್ಬಂದಿಗೆ ಇಮೇಲ್ ಮೂಲಕ ದುಃಖಕರ ವಿಚಾರವನ್ನು ತಿಳಿಸಿದ್ದಾರೆ. ಸಾಫ್ಟ್‍ವೇರ್ ಕಂಪನಿಯ ಇಮೇಲ್‍ನಲ್ಲಿ ಝೈನ್ ನಿಧನ ಹೊಂದಿದ್ದಾರೆ. ಕುಟುಂಬಕ್ಕೆ ಖಾಸಗಿಯಾಗಿ ದುಃಖಿಸಲು ಸಮಯ, ಅವಕಾಶ ನೀಡುವಂತೆ ಸಿಬ್ಬಂದಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಉಕ್ರೇನ್ ಬಂಕರ್‌ನ ಕರಾಳ ಪರಿಸ್ಥಿತಿ ಬಿಚ್ಚಿಟ್ಟ ರಾಯಚೂರು ವಿದ್ಯಾರ್ಥಿ