ವಾಷಿಂಗ್ಟನ್: ಮೈಕ್ರೋಸಾಫ್ಟ್(Microsoft ) ಮುಖ್ಯಸ್ಥ ಮತ್ತು ಸಿಇಒ ಆಗಿರುವ ಸತ್ಯ ನಾಡೆಲ್ಲಾ(Satya Nadella) ಅವರಿಗೆ ಪದ್ಮಭೂಷಣ(Padma Bhushan) ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.
ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಭಾರತದ ಕಾನ್ಸುಲ್ ಜನರಲ್ ಡಾ.ಟಿ.ವಿ ನಾಗೇಂದ್ರ ಪ್ರಸಾದ್ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಇದನ್ನೂ ಓದಿ: ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಬಂಪರ್: ಒಂದೇ ಬಾರಿಗೆ ಸಂಬಳ ಡಬಲ್
ಭಾರತದ ಮೂರನೇ ದೊಡ್ಡ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸುವುದು ದೊಡ್ಡ ಗೌರವವಾಗಿದೆ. ಹಲವಾರು ಅಸಾಧಾರಣ ವ್ಯಕ್ತಿಗಳೊಂದಿಗೆ ಗುರುತಿಸಿದ್ದಕ್ಕೆ ನಾನು ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಭಾರತದ ಜನರಿಗೆ ಕೃತಜ್ಞನಾಗಿದ್ದೇನೆ ಎಂದು ನಾಡೆಲ್ಲಾ ಹೇಳಿದ್ದಾರೆ.
ನಾಡೆಲ್ಲಾ ಜನವರಿ 2023 ರಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಮೂರು ವರ್ಷಗಳ ನಂತರ ದೇಶಕ್ಕೆ ಅವರು ಮೊದಲ ಭೇಟಿ ನೀಡಲಿದ್ದಾರೆ.