ನವದೆಹಲಿ: ದೇಶೀಯ ಫೋನ್ ತಯಾರಿಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಹಿಂದುಗಡೆ ಎರಡು ಕ್ಯಾಮೆರಾ ಹೊಂದಿರುವ ಡ್ಯುಯಲ್ 5 ಫೋನ್ ರಿಲೀಸ್ ಮಾಡಿದೆ.
ಈ ಹೈಬ್ರಿಡ್ ಫೋನಿಗೆ 24,999 ರೂ. ನಿಗದಿ ಮಾಡಿದ್ದು, ಏಪ್ರಿಲ್ 10 ರಿಂದ ಫ್ಲಿಪ್‍ಕಾರ್ಟ್‍ನಲ್ಲಿ ಲಭ್ಯವಿರಲಿದೆ. ಅಷ್ಟೇ ಅಲ್ಲದೇ ಮೈಕ್ರೋಮ್ಯಾಕ್ಸ್ ಇ ಸ್ಟೋರ್ ಮತ್ತು ರಿಟೇಲ್ ಅಂಗಡಿಗಳಿಂದ ಖರೀದಿಸಬಹುದು.
Advertisement
ಮೈಕ್ರೋಮ್ಯಾಕ್ಸ್ ಇದೇ ಮೊದಲ ಬಾರಿಗೆ ಫೋನಿಗೆ ಎರಡು ಕ್ಯಾಮೆರಾ ನೀಡಿದೆ. ಸೋನಿ ಕಂಪೆನಿಯ ಎರಡು 13 ಮೆಗಾ ಪಿಕ್ಸೆಲ್ ಐಎಂಎಕ್ಸ್ 258 ಸೆನ್ಸರ್ ಮೈಕ್ರೋಮ್ಯಾಕ್ಸ್ ಕ್ಯಾಮೆರಾದಲ್ಲಿದೆ. ಒಂದು ಸೆನ್ಸರ್ ಫೋಕಸ್ ಸೆರೆ ಹಿಡಿದರೆ, ಇನ್ನೊಂದು ಸೆನ್ಸರ್ ಡೆಪ್ತ್ ಮತ್ತು ಫೀಲ್ಡ್ ಸೆರೆಹಿಡಿಯುತ್ತದೆ. ಈ ಫೋನಿನಲ್ಲಿ 4ಕೆ ಯುಎಚ್‍ಡಿ ರೆಸಲ್ಯೂಶನ್‍ನಲ್ಲಿ ವಿಡಿಯೋ ಸೆರೆ ಹಿಡಿಯಬಹುದು.
Advertisement
ಮುಂದುಗಡೆ 1.13 ಮೈಕ್ರಾನ್ ಪಿಕ್ಸೆಲ್ ಸೋನಿ ಐಎಂಎಕ್ಸ್258 ಸೆನ್ಸರ್ ಇರುವ 13 ಎಂಪಿ ಕ್ಯಾಮೆರಾ ನೀಡಿದೆ. ಮುಂದುಗಡೆ ಕ್ಯಾಮೆರಾದಲ್ಲಿ ಸ್ಮಾರ್ಟ್ ಬ್ಯೂಟಿ, ಮೋಡ್, ಗೆಸ್ಟರ್ ಕಂಟ್ರೋಲ್, ಮತ್ತು ಜಿಫ್ ವಿಡಿಯೋಗಳನ್ನು ಮಾಡಬಹುದು.
Advertisement
ಫಿಂಗರ್ ಪ್ರಿಂಟ್ ಸೆನ್ಸರ್ ಒಳಗೊಂಡಿರುವ ಈ ಫೋನ್ ನಲ್ಲಿ ಪ್ರೈವೆಟ್ ಮೂಡ್ ಮತ್ತು ಪಬ್ಲಿಕ್ ಮೂಡ್ ಆಯ್ಕೆ ಇದೆ.
Advertisement
ಈ ಫೋನಿಗೆ ಮೈಕ್ರೋಮ್ಯಾಕ್ಸ್ ‘ಸೇಫ್ ಸ್ವಿಚ್’ ವಿಶೇಷತೆ ಇದೆ. ಒಂದು ವೇಳೆ ಮೊಬೈಲ್ ಕಳೆದು ಹೋಗಿ 30 ನಿಮಿಷದ ಒಳಗಡೆ ಸರಿಯಾದ ಪಾಸ್ ವರ್ಡ್ ಹಾಕದಿದ್ದರೆ ಫೋನ್ ಆಟೋಮ್ಯಾಟಿಕ್ ಆಗಿ ಲಾಕ್ ಆಗುತ್ತದೆ. ಅಷ್ಟೇ ಅಲ್ಲದೇ ಒಂದು ವೇಳೆ ಸಿಮ್ ತೆಗೆದು 60 ನಿಮಿಷ ಬಳಿಕ ಸರಿಯಾದ ಪಾಸ್‍ವರ್ಡ್ ಹಾಕದೇ ಇದ್ದರೆ ಫೋನ್ ಫೋನ್ ಲಾಕ್ ಆಗುತ್ತದೆ.
#Dual5 is theft – proof. A complete anti-theft mobile, with one of the best security feature a mobile can have! @rahulsharma pic.twitter.com/otiNeFbCav
— Micromax India (@Micromax_Mobile) March 29, 2017
ಫೋನಿಗೆ 3,200 ಎಂಎಎಚ್ ಬ್ಯಾಟರಿ ನೀಡಿದ್ದು, ಕ್ವಿಕ್ ಚಾರ್ಜ್ ವಿಶೇಷತೆ ನೀಡಿದೆ. ಇದರಿಂದಾಗಿ ಕೇವಲ 45 ನಿಮಿಷದಲ್ಲಿ ಶೇ.95 ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಅಲ್ಲದೇ 10 ನಿಮಿಷ ಚಾರ್ಜ್ ಮಾಡಿದರೆ 4 ಗಂಟೆ ಫೋನ್ ಬಳಕೆ ಮಾಡಬಹುದು ಎಂದು ಮೈಕ್ರೋ ಮ್ಯಾಕ್ಸ್ ತಿಳಿಸಿದೆ.
ಮೈಕ್ರೋಮ್ಯಾಕ್ಸ್ ಡ್ಯುಯಲ್5 ಗುಣವೈಶಿಷ್ಟ್ಯಗಳು:
ಬಾಡಿ ಮತ್ತು ಡಿಸ್ಪ್ಲೇ:
ಡ್ಯುಯಲ್ ಹೈಬ್ರಿಡ್ ಸಿಮ್ ಸ್ಲಾಟ್( 2 ಸಿಮ್ ಅಥವಾ 1 ಸಿಮ್ + ಒಂದು ಮೆಮೊರಿ ಕಾರ್ಡ್), 164 ಗ್ರಾಂ ತೂಕ, 4ಜಿ ವೋಲ್ಟ್, 5.5 ಇಂಚಿನ ಅಮೋಲೆಡ್ ಫುಲ್ ಎಚ್‍ಡಿ ಸ್ಕ್ರೀನ್(1920*1980 ಪಿಕ್ಸೆಲ್), 401 ಪಿಪಿಐ, ಕಾರ್ನಿಂಗ್ ಗೊರಿಲ್ಲ ಗ್ಲಾಸ್
ಪ್ಲಾಟ್‍ಫಾರಂ ಮತ್ತು ಮೆಮೊರಿ:
ಆಂಡ್ರಾಯ್ಡ್ ಮಾರ್ಶ್ ಮೆಲೊ ಓಎಸ್, 128 ಜಿಬಿ ಆಂತರಿಕ ಮೆಮೊರಿ, 4 ಜಿಬಿ ರಾಮ್, ಎಸ್‍ಡಿ ಕಾರ್ಡ್ ಮೂಲಕ 128 ಜಿಬಿವರೆಗೆ ಮೆಮೊರಿ ವಿಸ್ತರಣೆ, ಕ್ವಾಲಕಂ ಸ್ನಾಪ್‍ಡ್ರಾಗನ್ 652 1.8 GHz ಅಕ್ಟಾಕೋರ್ ಪ್ರೊಸೆಸರ್
ಕ್ಯಾಮೆರಾ
ಹಿಂದುಗಡೆ 13 ಎಂಪಿ ಡ್ಯುಯಲ್ ಕ್ಯಾಮೆರಾ, F / 1.8 ಅಪಾರ್ಚರ್, 1.12um ಪಿಕ್ಸೆಲ್ ಸೈಜ್, 6 ಲೆನ್ಸ್ ಟೈಪ್ ಸ್ಟ್ರಕ್ಚರ್, ಕಲರ್ ಟೆಂಪರೇಚರ್ ಸೆನ್ಸರ್, ಡ್ಯುಯಲ್ ಎಲ್‍ಇಡಿ ಫ್ಯಾಶ್, ಮುಂದುಗಡೆ 13 ಎಂಪಿ ಕ್ಯಾಮೆರಾ ವನ್ನು ಹೊಂದಿದೆ.
ಇತರೇ:
3200 ಎಂಎಎಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ, 4ಜಿ ಎಲ್‍ಟಿಇ,3ಜಿ, 2ಜಿ ನೆಟ್‍ವರ್ಕ್, ಗ್ರಾವಿಟಿ, ಫಿಂಗರ್ ಪ್ರಿಂಟ್, ಡಿಜಿಟಲ್ ಕಂಪಾಸ್, ಲೈಟ್ ಸೆನ್ಸರ್.
Some stunning shots and details captured by well known photographers on #Dual5 camera. @rahulsharma showing what #epic pictures are made of! pic.twitter.com/j2E5JRDHFr
— Micromax India (@Micromax_Mobile) March 29, 2017
You asked, we delivered. Snapdragon 652 powers the #Dual5. pic.twitter.com/PpK5abTtDG
— Micromax India (@Micromax_Mobile) March 29, 2017