ಬೆಂಗಳೂರು: ಕಡೆಗೂ ಮೈಕ್ರೋ ಫೈನಾನ್ಸ್ ಸುಗ್ರೀವಾಜ್ಞೆಗೆ (Microfinance Bill Ordinance) ರಾಜ್ಯ ಸರ್ಕಾರ ಒಪ್ಪಿಗೆ ನೀಡಿದ್ದು, ರಾಜ್ಯಭವನಕ್ಕೆ ಕಳುಹಿಸಿದೆ. `ಕರ್ನಾಟಕ ಮೈಕ್ರೋ ಫೈನಾನ್ಸ್ (ಬಲವಂತದ ಕ್ರಮಗಳ ತಡೆ) ಸುಗ್ರೀವಾಜ್ಞೆ-2025′ ಅನ್ನು ರಾಜ್ಯಪಾಲರ ಅಂಕಿತಕ್ಕೆ ಕಳುಹಿಸಲಾಗಿದೆ. ಸುಗ್ರೀವಾಜ್ಞೆಯಲ್ಲಿ ಮೈಕ್ರೋ ಫೈನಾನ್ಸ್‌ಗಳ ಕಿರುಕುಳಕ್ಕೆ 10 ವರ್ಷ ಜೈಲು, 5 ಲಕ್ಷದ ತನಕ ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.
Advertisement
ಇದೇ ವೇಳೆ ನೋಂದಣಿ ರಹಿತ ಮತ್ತು ಪರವಾನಗಿ ರಹಿತ ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರರು ನೀಡಿರುವ ಸಾಲ ಹಾಗೂ ಬಡ್ಡಿ ವಸೂಲಿಗೂ ಕೊಕ್ಕೆ ಹಾಕಿದ್ದು, ಸಾಲ, ಬಡ್ಡಿ ನೀಡುವಂತಿಲ್ಲ ಎಂಬ ಅಂಶ ಸೇರ್ಪಡೆ ಮಾಡಲಾಗಿದ್ದು, ಸಾಲಗಾರರ ಮೇಲೆ ಯಾವುದೇ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಅವಕಾಶವಿರುವುದಿಲ್ಲ. ಸುಗ್ರೀವಾಜ್ಞೆ ಜಾರಿಯಾದ ಕ್ಷಣದಿಂದ ಸಾಲ, ಬಡ್ಡಿ ಮನ್ನಾ ವಿಷಯಕ್ಕೆ ಸಂಬಂಧಪಟ್ಟ ಅರ್ಜಿಗಳು ರದ್ದುಗೊಳ್ಳಲಿವೆ ಎಂಬುದನ್ನ ಸೇರಿಸಲಾಗಿದೆ. ಹಾಗಾದ್ರೆ ಮೈಕ್ರೋ ಫೈನಾನ್ಸ್ ಕಿರುಕುಳ ತಡೆಗಟ್ಟುವ ಸುಗ್ರೀವಾಜ್ಞೆಯಲ್ಲಿ ಏನೇನ್ ಇದೆ ಅನ್ನೋದನ್ನ ನೋಡಬೇಕಾದ್ರೆ ಮುಂದೆ ಓದಿ…
Advertisement
Advertisement
* ಸುಗ್ರೀವಾಜ್ಞೆಯಲ್ಲಿ ಏನಿದೆ..?
> 10 ವರ್ಷ ಜೈಲು, 5 ಲಕ್ಷದ ತನಕ ದಂಡ
> ನೋಂದಣಿರಹಿತ ಮತ್ತು ಪರವಾನಗಿರಹಿತ ಸಂಸ್ಥೆ, ಲೇವಾದೇವಿದಾರರ ಸಾಲ, ಬಡ್ಡಿ ಮನ್ನಾ
> ಸಾಲಗಾರರ ಮೇಲೆ ಯಾವುದೇ ಸಿವಿಲ್ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಲು ಅವಕಾಶವಿಲ್ಲ
> ಎಲ್ಲ ಮೈಕ್ರೋ ಫೈನಾನ್ಸ್ ಕಂಪನಿಗಳು, ಲೇವಾದೇವಿದಾರ ಸಂಸ್ಥೆಗಳು ನೋಂದಣಿ ಕಡ್ಡಾಯ
> ಸುಗ್ರೀವಾಜ್ಞೆ ಹೊರಡಿಸಿದ 30 ದಿನಗಳ ನೋಂದಣಿ ಪ್ರಾಧಿಕಾರದಲ್ಲಿ ನೋಂದಣಿ ಕಡ್ಡಾಯ
> ಸಾಲಗಾರರ ಸಂಪೂರ್ಣ ಮಾಹಿತಿ, ಸಾಲದ ಮೊತ್ತ, ಬಡ್ಡಿ ದರ ಪ್ರಕಟಿಸಬೇಕು
> ವಸೂಲಿಗೆ ಬಾಕಿ, ಸಾಲ ಪಡೆಯುವಾಗ ಲಿಖಿತ ಮುಚ್ಚಳಿಕೆ ನೀಡಬೇಕು
> ನೋಂದಣಿ ಅವಧಿ ಒಂದು ವರ್ಷ ಮಾತ್ರ, ಅವಧಿ ಮುಗಿಯುವ 60 ದಿನಗಳ ನವೀಕರಣಕ್ಕೆ ಅರ್ಜಿ
> ದೂರು ಬಂದರೆ ಅಥವಾ ಸ್ವಯಂಪ್ರೇರಿತವಾಗಿ ನೋಂದಣಿ ರದ್ದು ಮಾಡುವ ಅಧಿಕಾರ
> ಸಾಲಗಾರರಿಂದ ಭದ್ರತೆಯಾಗಿ ಯಾವುದೇ ವಸ್ತು ಅಥವಾ ಆಸ್ತಿ ಅಡಮಾನ ಇಟ್ಟುಕೊಳ್ಳುವಂತಿಲ್ಲ
Advertisement
* ದೂರು ಸಲ್ಲಿಸುವುದು ಹೇಗೆ?
> ಸಾಲಗಾರರು ಕಿರುಕುಳಕ್ಕೆ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ನೀಡಬಹುದು
> ಪೊಲೀಸರು ಪ್ರಕರಣ ದಾಖಲಿಸಲು ಯಾವುದೇ ಕಾರಣಕ್ಕೂ ನಿರಾಕರಿಸಬಾರದು
> ಡಿವೈಎಸ್‌ಪಿ ರ‍್ಯಾಂಕ್‌ಗಿಂತ ಮೇಲಿನ ಅಧಿಕಾರಿಗಳಿಗೆ ಸ್ವಯಂಪ್ರೇರಿತ ದೂರು ದಾಖಲಿಸಲು ಅವಕಾಶ
> ವಿವಾದಗಳನ್ನು ಇತ್ಯರ್ಥಪಡಿಸಲು ಮಧ್ಯವರ್ತಿಯಾಗಿ ಒಂಬುಡುಮನ್ ನೇಮಕಕ್ಕೂ ಅವಕಾಶ
* ಸಾಲ ವಸೂಲಿ ಹೇಗಿರಬೇಕು?
> ಸಾಲಗಾರರು, ಕುಟುಂಬದವರ ಮೇಲೆ ಒತ್ತಡ ಹೇರಬಾರದು, ಅವಮಾನ, ಹಿಂಸೆ ಮಾಡಬಾರದು
> ಸಾಲಗಾರರು, ಕುಟುಂಬದವರನ್ನ ನಿರಂತರವಾಗಿ ಹಿಂಬಾಲಿಸಬಾರದು, ಸ್ವತ್ತು ಅಡಮಾನ ಇಟ್ಟುಕೊಳ್ಳುವಂತಿಲ್ಲ
> ಬಲವಂತದಿಂದ ಸಾಲ ವಸೂಲಿ ಮಾಡುವಂತಿಲ್ಲ, ಹೊರಗುತ್ತಿಗೆ ಸಿಬ್ಬಂದಿ, ರೌಡಿಗಳ ಬಳಕೆ ಇಲ್ಲ
> ಸರ್ಕಾರದಿಂದ ಯಾವುದೇ ಸೌಲಭ್ಯ ಪಡೆಯಲು ಅಗತ್ಯವಿರುವ ದಾಖಲೆಗಳನ್ನು ಕಿತ್ತುಕೊಳ್ಳುವಂತಿಲ್ಲ.