– ಬೆಲ್ಟ್, ಕೇಬಲ್ ವಯರ್, ಲಾಠಿಯಿಂದ ಹೊಡೆತ
ಗದಗ: ಜಿಲ್ಲೆಯಲ್ಲಿ ಮೈಕ್ರೋ ಫೈನಾನ್ಸ್ (Micro Finance) ಹಾವಳಿ ಬೆನ್ನಲ್ಲೇ, ಮೀಟರ್ ಬಡ್ಡಿ ದಂಧೆಕೋರರ ಹಾವಳಿ ಹೆಚ್ಚಾಗಿದೆ. 1 ಲಕ್ಷ ರೂ ಸಾಲದ ಬಡ್ಡಿ ನೀಡದ್ದಕ್ಕೆ ಮನಬಂದಂತೆ ಹಲ್ಲೆ ಮಾಡಿರುವ ಅಮಾನವೀಯ ಘಟನೆ ನಗರದ ಬೆಟಗೇರಿಯಲ್ಲಿ (Gadag Betageri) ನಡೆದಿದೆ.
ದಶರಥ ಬಳ್ಳಾರಿ ಮೇಲೆ ನಾಲ್ಕು ಜನ ಸೇರಿ ಮಾರಣಾಂತಿಕ ಮನಬಂದಂತೆ ಹಲ್ಲೆಮಾಡಿದ್ದಾರೆ. ಬೆಟಗೇರಿ ನಿವಾಸಿ ದಶರಥ ಅವರು ಮಂಜುನಾಥ ಹಂಸನೂರ ಎಂಬಾತನ ಬಳಿ ಎರಡು ವರ್ಷದ ಹಿಂದೆ 1 ಲಕ್ಷ ರೂ.ಹಣ ಪಡೆದಿದ್ದರು. ಈ ಸಾಲಕ್ಕೆ ಅವರಿಗೆ ಬಡ್ಡಿ ಸಹ ನೀಡುತ್ತಾ ಬಂದಿದ್ದರು. ಇದನ್ನೂ ಓದಿ:ಮೀಟರ್ ಬಡ್ಡಿ ದಂಧೆಕೋರರ ಟಾರ್ಚರ್ – ಯುವಕ ನೇಣಿಗೆ ಶರಣು
ಇತ್ತೀಚೆಗೆ ಕೆಲಸ ಇಲ್ಲದಕ್ಕೆ ಬಡ್ಡಿ ಹಣ ತುಂಬಲು ವಿಳಂಬ ಮಾಡಿದ್ದಾರೆ. ವಿಳಂಬ ಮಾಡಿದ್ದಕ್ಕೆ ಜ.21 ರಂದು ರಾತ್ರಿ ದಶರಥ ಅವರನ್ನು ಸೆಟಲ್ಮೆಂಟ್ ನಗರದ ಮನೆಯೊಂದರಲ್ಲಿ ಕರೆದೊಯ್ದ ಚಿತ್ರ ಹಿಂಸೆ ನೀಡಿದ್ದಾರೆ.
ಮಂಜುನಾಥ ಹಂಸನೂರ, ಮಹೇಶ್ ಹಂಸನೂರ, ಡಿಸ್ಕವರಿ ಮಂಜು ಹಾಗೂ ಹನುಮಂತ ಕ್ರೌರ್ಯ ಮೆರೆದಿದ್ದಾರೆ. ದಶರಥ ಅವರನ್ನು ಕೂಡಿಹಾಕಿ ಬಟ್ಟೆ ಬಿಚ್ಚಿ, ಬಾಯಿ ಬಟ್ಟೆ ತುಂಬಿ ಕುಡಿಯುತ್ತಾ ರಾತ್ರಿ 10 ಗಂಟೆಗೆ ಹೊಡೆಯಲು ಆರಂಭಿಸಿದವರು ತಡರಾತ್ರಿ 3 ಗಂಟೆಯವರೆಗೆ ಹಲ್ಲೆ ಮಾಡಿದ್ದಾರೆ. ಬೆಲ್ಟ್, ಕೇಬಲ್ ವಯರ್, ಲಾಠಿಯಿಂದ ಮೈ, ಕೈ, ಕಾಲು, ಬೆನ್ನು, ಮುಖ, ತಲೆ ಎಲ್ಲಾ ಬಾಸುಂಡೆ ಬರುವಂತೆ ಚಿತ್ರ ಹಿಂಸೆ ಕೊಟ್ಟಿದ್ದಾರೆ.
ನಸುಕಿನ ಜಾವ 3 ಗಂಟೆ ನಂತರ ಅವರನ್ನು ತಳ್ಳಿ ಬಾಗಿಲು ಹಾಕಿಕೊಂಡು ದಶರಥ ಮನೆಗೆ ಬಂದಿದ್ದಾರೆ. ಈಗ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಸಂಬಂಧ ಜ.23 ರಂದು ಬೆಟಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.