– ಆಸ್ಪತ್ರೆಯಲ್ಲಿದ್ದರೂ ಸ್ಪಂದಿಸಿದ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್‌ಗೆ ಧನ್ಯವಾದ ತಿಳಿಸಿದ ಸಂತ್ರಸ್ತರು
ಬೆಳಗಾವಿ: ಸಾಲ ಕಟ್ಟದ್ದಕ್ಕೆ ಖಾಸಗಿ ಫೈನಾನ್ಸ್ ಸಿಬ್ಬಂದಿಯಿಂದ ಒಂದು ತಿಂಗಳು ಮಗು ಸಮೇತ ಬಾಣಂತಿ ಹಾಗೂ ಕುಟಂಬಸ್ಥರನ್ನ ಮನೆಯಿಂದ ಹೊರಕ್ಕೆ ಹಾಕಿ ಮನೆ ಸೀಜ್ ಮಾಡಿರುವ ಅಮಾನವೀಯ ಘಟನೆ ಬೆಳಗಾವಿ ತಾಲೂಕಿನ ತಾರಿಹಾರ ಗ್ರಾಮದಲ್ಲಿ ನಡೆದಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಮತಕ್ಷೇತ್ರದ ತಾರೀಹಾಳ ಗ್ರಾಮದ ಗಣಪತಿ ಲೋಹಾರ ಕುಟುಂಬ ಬೀದಿಗೆ ಬಂದಿತ್ತು. ಇದೀಗ ಎಲ್ಲರೂ ಮತ್ತೆ ಮನೆ ಸೇರಿದ್ದಾರೆ.
Advertisement
ಹೆರಿಗೆಗೆ ಬಂದಿದ್ದ ಗಣಪತಿ ಪುತ್ರಿ ಮಾಧುರಿ ತಂದೆ, ತಾಯಿ, ಮಗಳು ಮೊಮ್ಮಕ್ಕಳನ್ನ ಮನೆಯಿಂದ ನಿರ್ಧಯಿಯಾಗಿ ಫೈನಾನ್ಸ್ ಸಿಬ್ಬಂದಿ ಹೊರಹಾಕಿದ್ದರು. ಮನೆ ಕಟ್ಟಲು ಬೆಳಗಾವಿಯ ಅಪ್ಟುಸ್ ಫೈನಾನ್ಸ್‌ನಲ್ಲಿ 5 ಲಕ್ಷ ಸಾಲ ಪಡೆದಿದ್ದ ಗಣಪತಿ ಲೋಹಾರ 3.50 ಲಕ್ಷ ರೂ. ಸಾಲ ಮರುಪಾವತಿ ಮಾಡಿದ್ದರು. ಅನಾರೋಗ್ಯ, ಮಗಳ ಹೆರಿಗೆ ಕಾರಣದಿಂದ ಕಂತು ಕಟ್ಟಿರಲಿಲ್ಲ. 7 ಲಕ್ಷಕ್ಕೂ ಅಧಿಕ ಹಣ ಕಟ್ಟು ಅಂತಾ ಹೇಳಿ ಕೋರ್ಟ್‌ನಿಂದ ಆದೇಶ ತಂದು ಮನೆಗೆ ಬೀಗ ಜಡಿದು ಗೋಡೆ ಮೇಲೆ ಜಪ್ತಿ ನೋಟಿಸ್ ಬರೆದು ಹೋಗಲಾಗಿತ್ತು. ಇದನ್ನೂ ಓದಿ: ಮೈಕ್ರೋ ಫೈನಾನ್ಸ್ ಕಿರುಕುಳ| ಸರ್ಕಾರ ಬದುಕಿದ್ಯಾ.. ಸತ್ತಿದ್ಯಾ?: ಛಲವಾದಿ ನಾರಾಯಣಸ್ವಾಮಿ ಆಕ್ರೋಶ
Advertisement
Advertisement
ಈ ಕುರಿತು ‘ಪಬ್ಲಿಕ್ ಟಿವಿ’ ಬೆಳಗ್ಗಿನಿಂದ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೇ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಸಂಬಂಧಿಸಿದವರ ವಿರುದ್ಧ ಕ್ರಮಕ್ಕೆ ಸೂಚಿಸಿದ್ದರು. ಪಬ್ಲಿಕ್ ಟಿವಿ ವರದಿಗೆ ಸ್ಪಂದಿಸಿದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತನ್ನ ಖಾಸಗಿ ಆಪ್ತ ಸಹಾಯಕರನ್ನ ಕರೆಸಿ ಲೋಹಾರ ಕುಟುಂಬಕ್ಕೆ ಧನ ಸಹಾಯದ ಜೊತೆಗೆ ದಿನಸಿ ಸಹಾಯ ಮಾಡಿದ್ದರು.
Advertisement
ಅಲ್ಲದೇ, ಫೈನಾನ್ಸ್ ಕಂಪನಿಯ ಜೊತೆಗೆ ಸಂಪರ್ಕ ಸಾಧಿಸಿ ಕೇವಲ ಅಸಲು ಮಾತ್ರ ತುಂಬುವುದು ಹಾಗೂ ಕಂತು ತುಂಬಲು ಕಾಲಾವಕಾಶ ನೀಡುವಂತೆ ಕಂಪನಿಗೆ ಒತ್ತಾಯಿಸಿ, ಸೀಜ್ ಆದ ಬಾಣಂತಿ ಮನೆಯ ಬಾಗಿಲು ಓಪನ್ ಮಾಡಿಸಿದ್ದಾರೆ. ಇದನ್ನೂ ಓದಿ: ಎರಡು ಲಕ್ಷಕ್ಕೆ 25 ಲಕ್ಷ.. ಮೀಟರ್ ಬಡ್ಡಿ ದಂಧೆಯಲ್ಲಿ ಯಕ್ಷಗಾನ ಕಲಾವಿದನ ಮೇಲೆ ಮಾರಣಾಂತಿಕ ಹಲ್ಲೆ
ಸಂಬಂಧಿಕರ ಮನೆಗೆ ತೆರಳಿದ್ದ ಕುಟುಂಬಸ್ಥರನ್ನ ಮರಳಿ ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ನಿವಾಸಕ್ಕೆ ಹೆಬ್ಬಾಳ್ಕರ್ ಆಪ್ತರು ಕರೆ ತಂದರು. ‘ಪಬ್ಲಿಕ್ ಟಿವಿ’ ವರದಿ ಬೆನ್ನಲ್ಲೇ ಗಂಭೀರವಾಗಿ ಪರಿಗಣಿಸಿದ್ದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಸ್ಪತ್ರೆಯಲ್ಲಿದ್ದರೂ ಘಟನೆ ಕುರಿತು ಮಾಹಿತಿ ಪಡೆದು ಲೋಹಾರ ಕುಟುಂಬಕ್ಕೆ ಸಹಾಯ ಮಾಡಿದ್ದಾರೆ. ಬೀದಿಗೆ ಬಂದ ಕುಟುಂಬಕ್ಕೆ ಸಹಾಯಹಸ್ತ ಚಾಚಿದ ಎಲ್ಲರಿಗೂ ಲೋಹಾರ ಕುಟುಂಬ ಧನ್ಯವಾದ ತಿಳಿಸಿದೆ.