ವಿದ್ಯಾರ್ಥಿನಿಯೊಂದಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಜಿಮ್ನಾಸ್ಟಿಕ್ಸ್ ಕೋಚ್ ಬಂಧನ

Public TV
1 Min Read
scott vetere michigan coach

ಮಿಚಿಗನ್: ವಿದ್ಯಾರ್ಥಿನಿಯೊಂದಿಗೆ ಸಾರ್ವಜನಿಕವಾಗಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ಆರೋಪದ ಅಡಿ ಮಿಚಿಗನ್ ವಿಶ್ವವಿದ್ಯಾನಿಲಯದ ಜಿಮ್ನಾಸ್ಟಿಕ್ ತರಬೇತುದಾರ ಹಾಗೂ ವಿದ್ಯಾರ್ಥಿನಿಯನ್ನು ಪೊಲೀಸರು ಬಂಧಿಸಿದ್ದಾರೆ.

39 ವರ್ಷದ ಸ್ಕೋಟ್ ವೆಟ್ಟರೆ ಬಂಧಿತ ಆರೋಪಿ. ಕಟ್ಟಡವೊಂದರ ಮುಂದೆ ಕಾರ್ ಪಾರ್ಕ್ ಮಾಡಿದ್ದ ಸ್ಕೋಟ್, 18 ವರ್ಷದ ವಿದ್ಯಾರ್ಥಿನಿಯೊಂದಿಗೆ ಕಾರಿನಲ್ಲಿಯೇ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಸದ್ಯ ಇಬ್ಬರ ವಿರುದ್ಧ ಸಾರ್ವಜನಿಕವಾಗಿ ಅಸಭ್ಯ ಮತ್ತು ಅಶ್ಲೀಲ ಕ್ರಿಯೆಯಲ್ಲಿ ತೊಡಗಿದ್ದ ಆರೋಪದ ಅಡಿಯಲ್ಲಿ ಪೊಲೀಸರು ದೂರು ದಾಖಲಿಸಿದ್ದಾರೆ.

CRIME 01 copy 2

ಮಿಂಚಿಗನ್ ವಿಶ್ವವಿದ್ಯಾಲಯದ ಕ್ರೀಡಾಪಟು ನಿಯಮದ ಅನುಸಾರ ತರಬೇತುದಾರ ವಿದ್ಯಾರ್ಥಿನಿಯರ ಜೊತೆ ಯಾವುದೇ ಲೈಂಗಿಕ ಹಾಗು ಪ್ರೇಮ ಸಂಬಂಧವನ್ನು ಹೊಂದುವಂತಿಲ್ಲ. ಈ ಕಾರಣದಿಂದ ಆತನನ್ನು ಹುದ್ದೆಯಿಂದ ಅಮಾನತು ಮಾಡಿದ್ದಾರೆ. ಮಾಧ್ಯಮ ವರದಿ ಅನ್ವಯ ಸ್ಕೋಟ್ ವೆಟ್ಟೆರೆ ಮಿಚಿಗನ್ ಅತ್ಯುತ್ತಮ ಕ್ರೀಡಾಪಟು ಎನ್ನಲಾಗಿದ್ದು, 2017 ರಲ್ಲಿ ಮಹಿಳೆಯರ ಜಿಮ್ನಾಸ್ಟಿಕ್ ತಂಡಕ್ಕೆ ಸಹಾಯಕ ತರಬೇತುದಾರನಾಗಿ ನೇಮಕ ಮಾಡಲಾಗಿತ್ತು. ಅಲ್ಲದೇ 1999 ರಲ್ಲಿ ವಿಶ್ವವಿದ್ಯಾಲಯ ಬೆಸ್ಟ್ ಆಥ್ಲಿಟ್ ಆಗಿ ಹೊರಹೊಮ್ಮಿದ್ದ. ಸ್ಕೋಟ್‍ಗೆ ಈಗಾಗಲೇ ಮದುವೆಯಾಗಿದ್ದು, ಮೂರು ಮಕ್ಕಳಿದ್ದಾರೆ. ವಿದ್ಯಾರ್ಥಿನಿಯ ಬಗ್ಗೆ ಮಾಹಿತಿ ನೀಡಲು ಪೊಲೀಸರು ನಿರಾಕರಿಸಿದ್ದಾರೆ.

ಇಬ್ಬರು ಆರೋಪಿಗಳನ್ನು ನ್ಯಾಯಾಲಯದ ಮುಂದೆ ಹಾಜರು ಪಡಿಸಲಾಗಿದ್ದು, ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗಿದೆ. ಈ ಘಟನೆಯಿಂದ ನಮ್ಮ ಸಿಬ್ಬಂದಿಗಳಿಗೆ ತೀವ್ರ ನೋವಾಗಿದೆ ಎಂದು ಮಿಚಿಗನ್ ವಿಶ್ವವಿದ್ಯಾಲಯದ ಮುಖ್ಯ ತರಬೇತುದಾರರಾದ ಬೆಲ್ ಪ್ಲೊಕಿ ಹೇಳಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article