Connect with us

International

ವಿಮಾನದ ಮೇಲೆ ಚಿಗುರಿದ ಪ್ರೀತಿ- ದೈಹಿಕವಾಗಿಯೂ ಸಂಪರ್ಕ ಹೊಂದಿದ್ದೇನೆಂದ ಮಹಿಳೆ

Published

on

-ವಿಮಾನದ ಮೇಲೆ ಅರಳಿದ ಪ್ರೇಮ್ ಕಹಾನಿ

ಬರ್ಲಿನ್: ಸುಮಾರು ಐದು ವರ್ಷಗಳಿಂದ ಇತರ ದಂಪತಿಗಳ ರೀತಿ ತಾನು ವಿಮಾನದೊಂದಿಗೆ ಪ್ರಣಯ ಸಂಪರ್ಕ ಹೊಂದಿದ್ದೇನೆ ಎಂದು ಜರ್ಮನಿಯ ಬರ್ಲಿನ್‍ನ 30 ವರ್ಷದ ಮಿಷೆಲ್ ಕೋಬ್ಕೆ ಅಚ್ಚರಿಯ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಇನ್ನೂ ವಿಲಕ್ಷಣವೆಂದರೆ ತನ್ನ ಪ್ರೀತಿ ಕೇವಲ ಭಾವನಾತ್ಮಕವಾದದ್ದಲ್ಲ, ಬದಲಿಗೆ ದೈಹಕವಾದದ್ದು ಸಹ ಎಂದು ಮಿಷೆಲ್ ಹೆಮ್ಮಯಿಂದ ಹೇಳಿದ್ದಾರೆ.

ಬೋಯಿಂಗ್ 737-800ನ್ನು ‘ಷಾಟ್ಜ್’ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಈ ವಿಮಾನವು ಸೊಗಸಾಗಿ ಹಾಗೂ ಅತ್ಯಂತ ಆಕರ್ಷಕವಾಗಿದೆ. 737-800 ನನಗೆ ತುಂಬಾ ಇಷ್ಟ ಆಕರ್ಷಕ ಹಾಗೂ ಮಾದಕವಾಗಿದೆ. ಅವನನ್ನು ಅತ್ಯಂತ ಸುಂದರವಾಗಿ ನಿರ್ಮಿಸಲಾಗಿದೆ. ಇದು ಅತ್ಯಂತ ಸೊಗಸಾದ ಹಾಗೂ ಆಕರ್ಷಕ ವಿಮಾನ ಎಂದು ಮಿಷೆಲ್ ವಿಮಾನವನ್ನು ಹಾಡಿ ಹೊಗಳಿದ್ದಾರೆ.

https://www.facebook.com/michele.kobke/videos/10212429261360425/

ಆದರೆ ಇತರ ಯಾವುದೇ ಸಂಬಂಧಗಳಂತೆ ಬೋಯಿಂಗ್ ವಿಮಾನದೊಂದಿಗೆ ಖಾಸಗಿ ಸಮಯವನ್ನು ಕಳೆಯುವುದು ಮಿಷೆಲ್‍ಗೆ ಕಷ್ಟಕರವಾಗಿದೆ. ನಾನು ಅವನೊಂದಿಗೆ ಹಾರಾಟ ನಡೆಸಿದಾಗ ಅಥವಾ ಹ್ಯಾಂಗರ್ ಬಳಿಗೆ ಬಂದಾಗ ಮಾತ್ರ ಅವನ ಹತ್ತಿರ ಹೋಗಿದ್ದೇನೆ. ಅದು ನನ್ನ ಜೀವನದಲ್ಲಿ ಒಮ್ಮೆ ಮಾತ್ರ ಸಂಭವಿಸಿದೆ ಎಂದು ಹೇಳುತ್ತಾರೆ.

ಈಗ ಮಿಷೆಲ್ ತನ್ನ ಪ್ರೀತಿಗೆ ಹತ್ತಿರವಾಗಲು ಇನ್ನೊಂದು ಮಾರ್ಗವನ್ನು ಕಂಡುಕೊಂಡಿದ್ದು, ಇದೀಗ ಬೋಯಿಂಗ್ 737-800ರ ಫೈಬರ್‍ನ ದೊಡ್ಡ ಮಾದರಿಯನ್ನು ಖರೀದಿಸಿದ್ದಾರೆ. ಇದನ್ನು ಫೈಬರ್‍ನಲ್ಲಿ ತಯಾರಿಸಲಾಗಿದೆ. ಮಿಷೆಲ್ ಫೈಬರ್‍ನಿಂದ ತಯಾರಿಸಿದ ವಿಮಾನದ ಮಾದರಿಯನ್ನು ಯಾವಾಗಲೂ ತನ್ನ ಹತ್ತಿರ ಇಟ್ಟುಕೊಂಡಿರುತ್ತಾರೆ. ನಿದ್ದೆ ಮಾಡುವ ಸಂದರ್ಭದಲ್ಲಿ ಈ ಫೈಬರ್‍ನ ಬೋಯಿಂಗ್‍ನ್ನು ತಬ್ಬಿಕೊಂಡು ಮಲಗುತ್ತಾರೆ.

ಈಗ ನಾನು ಫೈಬರ್ ಗ್ಲಾಸ್ ನಿಂದ ತಯಾರಿಸಿದ ದೊಡ್ಡ ಮಾದರಿಯನ್ನು ಹೊಂದಿದ್ದೇನೆ. ಹೀಗಾಗಿ ನನ್ನ ಪ್ರೀತಿಯನ್ನು ಸ್ವಲ್ಪ ಮಟ್ಟಿಗೆ ನಿರ್ವಹಿಸುತ್ತೇನೆ. ಮಾರ್ಚ್ 2013ರಲ್ಲಿ ಮೊದಲ ಬಾರಿಗೆ ವಿಮಾನದಲ್ಲಿ ಹಾರಾಟ ನಡೆಸಿದ ನಂತರ ವಿಮಾನಗಳ ಮೇಲೆ ಪ್ರೀತಿ ಅರಳಿತು. ಆದರೆ ಮೇ 2019ರಲ್ಲಿ ಬೋಯಿಂಗ್ 737-800 ಹತ್ತಿದ ನಂತರ ಇವನು ನನ್ನವನೇ ಎಂದುಕೊಂಡು ಪ್ರೀತಿ ಮಾಡಲು ಪ್ರಾರಂಭಿಸಿದೆ ಎಂದು ಮಿಷೆಲ್ ತಮ್ಮ ಪ್ರೀತಿ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ.

ನಾನು ವಿಮಾನ ಹತ್ತಲು ತುಂಬಾ ಉತ್ಸುಕಳಾಗಿದ್ದೇನೆ. ಈ ವೇಳೆಯೇ ನನಗೆ 737-800 ಬೋಯಿಂಗ್ ಮೇಲೆ ಪ್ರೀತಿಯಾಯಿತು. ನಾವು ನಿಜವಾಗಿಯೂ ಮೊದಲ ಬಾರಿಗೆ ಭೇಟಿಯಾಗಿದ್ದು ಮೇ 1, 2019ರಂದು. ನಾನು ಅವನೊಂದಿಗೆ ಕಳೆದ ಪ್ರತಿ ಮಿಲಿಸೆಕೆಂಡ್‍ನ್ನು ಸಹ ಆನಂದಿಸಿದ್ದೇನೆ. ಅವನನ್ನು ನೋಡಿ ನಕ್ಕು ಸುಸ್ತಾಗಿ ನನ್ನ ಕೆನ್ನೆಗಳು ನೋಯುತ್ತವೆ. ಪ್ರಪಂಚದಲ್ಲೇ ಅತ್ಯಂತ ಸಂತೋಷ ಹೊಂದಿದ ಮಹಿಳೆ ನಾನು. ಅವನೊಂದಿಗೆ ಇರುವಾಗ ಸರ್ವಸ್ವವೂ ಇದ್ದಂತೆ ಎಂದು ತಮ್ಮ ಭಾವನೆಗಳನ್ನು ಮಿಚೆಲ್ ವ್ಯಕ್ತಪಡಿಸಿದ್ದಾರೆ.

ನಿರ್ಜೀವ ವಸ್ತುಗಳ ಮೇಲಿನ ಮಿಷೆಲ್‍ರ ಪ್ರೀತಿಯನ್ನು ‘ಆಬ್ಜೆಕ್ಟೊಫಿಲಿಯಾ’ ಎಂದು ಕರೆಯಲಾಗುತ್ತದೆ. ಇದು ನಿರ್ಜೀವ ವಸ್ತುಗಳ ಮೇಲಿನ ಲೈಂಗಿಕ ಅಥವಾ ಪ್ರಣಯದ ಆಕರ್ಷಣೆಯಾಗಿದೆ.

Click to comment

Leave a Reply

Your email address will not be published. Required fields are marked *