ಚಂಡಮಾರುತ ಆವಾಂತರ: ನಟಿ ನಮಿತಾ ಮನೆಗೆ ನುಗ್ಗಿದ ನೀರು

Public TV
2 Min Read
namitha

ಮಿಚಾಂಗ್ (Michang) ಚಂಡಮಾರುತದ (Toofan) ಹಾವಳಿ ಚೆನ್ನೈ (Chennai) ಜನರನ್ನು ನಿದ್ದೆಗೆಡಿಸಿದೆ. ಸಿಕ್ಕ ಸಿಕ್ಕ ಜಾಗಗಳಿಗೆ ನೀರು ನುಗ್ಗಿ ಆವಾಂತರವನ್ನೇ ಸೃಷ್ಟಿ ಮಾಡಿದೆ. ಭಾರೀ ಮಳೆಯಿಂದ ಮನೆಗಳು ಜಲಾವೃತಗೊಂಡಿದ್ದು, ನಟಿ ನಮಿತಾ (Namitha) ಮನೆಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿದೆ. ಚೆನ್ನೈ ಸಮೀಪದಲ್ಲಿರುವ ಪಲ್ಲಿಕರಣ ನಾರಾಯಣಪುರಂ ಕೆರೆ ಒಡೆದು, ನಮಿತಾ ಮನೆಗೆ ನೀರು ನುಗ್ಗಿದ್ದು, ಮನೆಯಲ್ಲಿ ಆರು ಅಡಿಗಳಷ್ಟು ನೀರು ತುಂಬಿದೆ ಎಂದು ಹೇಳಿದ್ದಾರೆ ನಮಿತಾ.

Rain 3

ನಮಿತಾ ವಾಸವಿದ್ದ ಪಳ್ಳಿಕರಣ ಸಮೀಪದ ಅಪಾರ್ಟ್ ಮೆಂಟ್ ನಲ್ಲಿ ನಟಿ ನಮಿತಾ ವಾಸವಿದ್ದಾರೆ. ಇಬ್ಬರು ಮಕ್ಕಳು ಮತ್ತು ಪತಿಯೊಂದಿಗೆ ಮನೆಯಲ್ಲೇ ಇದ್ದ ಸಂದರ್ಭದಲ್ಲಿ ಭಾರೀ ಪ್ರಮಾಣದಲ್ಲಿ ನೀರು ಹರಿದು ಬಂದಿದೆ. ಕೂಡಲೇ ರಕ್ಷಣಾ ಸಿಬ್ಬಂದಿಗೆ ಕರೆ ಮಾಡಿ, ಬಚಾವ್ ಆಗಿದ್ದಾರೆ ನಟಿ.

Rain 2

ಆಮೀರ್, ವಿಶಾಲ್ ರಕ್ಷಣೆ

ಎಡಬಿಡದೆ ಸುರಿದ ಭಾರೀ ಮಳೆಯಿಂದಾಗಿ ಕಾಲಿವುಡ್ ಹೀರೋ ವಿಷ್ಣು ವಿಶಾಲ್ ಮನೆಯಿರುವ ಪ್ರದೇಶ ಜಲಾವೃತ್ತಗೊಂಡಿದೆ. ಈ ಪರಿಣಾಮ, ಮನೆಯಿಂದ ಯಾರೂ ಹೊರಬರಲಾರದ ಸ್ಥಿತಿಯಲ್ಲಿದ್ದಾರೆ. ಇದೇ ವೇಳೆ, ಬಾಲಿವುಡ್ ನಟ ಆಮೀರ್ ಖಾನ್ ಅವರು ನಟ ವಿಷ್ಣು (Vishnu Vishal) ಮನೆಯಲ್ಲೇ ಲಾಕ್ ಆಗಿದ್ದಾರೆ.

aamir khan

ಚೆನ್ನೈನ ಕರಪಾಕ್ಕಂ ಪ್ರದೇಶದಲ್ಲಿರುವ ತಮಿಳು ನಟ ವಿಷ್ಣು ವಿಶಾಲ್ ಮನೆಗೆ ಆಮೀರ್ ಖಾನ್ ಭೇಟಿ ನೀಡಿದ್ದರು. ಪ್ರವಾಹ ಪರಿಸ್ಥಿತಿಯಿಂದಾಗಿ ವಿಷ್ಣು ವಿಶಾಲ್ ಅವರ ನಿವಾಸದಲ್ಲೇ ಆಮೀರ್ ಖಾನ್ ಸಿಲುಕಿದ್ದರು. ಈ ಸಂದರ್ಭದಲ್ಲಿ ನೀರಿನ ಮಟ್ಟ ತೀವ್ರವಾಗಿ ಏರುತ್ತಿದ್ದು, ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ನೆಟ್‌ವರ್ಕ್, ವೈಫೈ ಯಾವುದೂ ಇಲ್ಲವಾಗಿದೆ. ಇದೇ ಸಮಯದಲ್ಲಿ ವಿಷ್ಣು ವಿಶಾಲ್ ಮನೆಯೊಳಗೆ ನೀರು ನುಗ್ಗಿದ್ರಿಂದ ಸಹಾಯಕ್ಕಾಗಿ ನಟ ವಿಷ್ಣು ವಿಶಾಲ್ ಅವರು ಸೋಷಿಯಲ್ ಮೀಡಿಯಾದಲ್ಲಿ ಮೂಲಕ ಮನವಿ ಮಾಡಿದ್ದರು.

Rain

ಕೂಡಲೆ ಅಗ್ನಿಶಾಮಕ ದಳ ನಟ ವಿಷ್ಣು ವಿಶಾಲ್ ಮತ್ತು ಆಮೀರ್ ಖಾನ್ (Aamir Khan) ಅವರನ್ನು ರಕ್ಷಿಸಿ ಸುರಕ್ಷಿತ ಸ್ಥಳಕ್ಕೆ ಧಾವಿಸಿದ್ದಾರೆ. ಮಿಚಾಂಗ್ ಚಂಡಮಾರುತದಿಂದ ನನ್ನ ಮನೆಯೊಳಗೆ ನೀರು ನುಗ್ಗಿದೆ ಅವಾಂತರ ಆಗಿದೆ. ಕರಪಾಕ್ಕಂನಲ್ಲಿ ನೀರಿನ ಮಟ್ಟ ತೀವ್ರವಾಗಿ ಏರಿಕೆಯಾಗುತ್ತಿದೆ. ಸಹಾಯಕ್ಕಾಗಿ ಕರೆ ಮಾಡಿದ್ದೇನೆ. ವಿದ್ಯುತ್ ಸಂಪರ್ಕ ಇಲ್ಲ. ವೈಪೈ, ಫೋನ್ ಸಿಗ್ನಲ್ ಇಲ್ಲ. ಇಲ್ಲಿರುವವರ ಸಹಾಯಕ್ಕೆ ಯಾರಾದರೂ ಧಾವಿಸಲಿ ಎಂದು ಬಯಸುತ್ತೇನೆ ಎಂದು ವಿಷ್ಣು ವಿಶಾಲ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದರು.

 

ಈ ವಿಷಯ ಅರಿತ, ಅಗ್ನಿಶಾಮಕ ದಳ ವಿಷ್ಣು ಮನೆಗೆ ಧಾವಿಸಿ, ನಟ ವಿಷ್ಣು ಮತ್ತು ಆಮೀರ್ ಖಾನ್ ರಕ್ಷಣೆ ಮಾಡಿದ್ದಾರೆ. ಅಗ್ನಿಶಾಮಕ ತಂಡಕ್ಕೆ ವಿಷ್ಣು ಮತ್ತು ಆಮೀರ್‌ ಖಾನ್‌ ಧನ್ಯವಾದ ತಿಳಿಸಿದ್ದಾರೆ.

Share This Article