ಸಿರಿ (Siri) ಈ ವಾರ ಬಿಗ್ ಬಾಸ್ (Bigg Boss Kannada) ಮನೆಯಿಂದ ಹೊರ ಬಂದಿದ್ದಾರೆ. ತಮ್ಮ ಜರ್ನಿ ಕುರಿತಾಗಿ ಅವರು ಮುಕ್ತವಾಗಿ ಮಾತನಾಡಿದ್ದಾರೆ. ತಾವು ಅಲ್ಲಿ ಹೇಗಿದ್ದರು, ದೊಡ್ಮನೆಯಲ್ಲಿದ್ದವರನ್ನು ಹೇಗೆ ನೋಡಿದ್ದಾರೆ, ಹಾಗೂ ಇತರರ ಕುರಿತು ಮಾತನಾಡಿದ್ದಾರೆ.
Advertisement
ನಾನು ಡಿಪ್ಲೋಮೆಟಿಕ್ ಅಂದ್ರೆ ಒಪ್ಕೋತೀನಿ. ಯಾಕಂದರೆ ನಾನು ಇರೋದೇ ಹಾಗೆ. ಈವತ್ತು ನಾನು ಹೊರಗೆ ಬಂದಾಗ, ನನಗೋಸ್ಕರ ಮನೆಯೊಳಗೆ ಇಬ್ಬರು ಮೂವರು ಕಣ್ಣೀರು ಹಾಕ್ತಿದ್ದಾರೆ ಅಂದರೆ ಅರ್ಥ ಮಾಡ್ಕೊಳ್ಳಿ. ಹಾಗೆಯೇ ಹೊರಗೆ ನನ್ನ ಅಭಿಮಾನಿಗಳಿರಬಹುದು. ನನಗೆ ಓಟ್ ಹಾಕಿರುವವರು ಇರಬಹುದು. ಅವರ ಮನಸ್ಸನ್ನು ನಾನು ಗೆದ್ದಿದೀನಿ . ಬಿಗ್‌ಬಾಸ್ ಮನೆಯೊಳಗೆ ಎಲ್ಲರೂ ನನ್ನನ್ನು ಡಿಪ್ಲೋಮೆಟಿಕ್ ಅಂದಿರಬಹುದು, ಸೇಫ್ ಝೋನ್ ಅಂದಿರಬಹುದು. ಆದರೆ ನಾನು ಮನೆಯಿಂದ ಹೊರಗೆ ಬರುವಾಗ ಹಾಗೆ ಹೇಳಿದವರು ಕಣ್ಣಲ್ಲೂ ನೀರು ನೋಡ್ದೆ. ಹಾಗಾಗಿ ಅವರ ಮನಸ್ಸನ್ನೂ ನಾನು ಗೆದ್ದಿದೀನಿ ಅಂದ್ಕೊಂಡಿದೀನಿ. ಯಾರ ಮನಸ್ಸನ್ನು ನೋವಾದಾಗ, ಸಮಾಧಾನ ಮಾಡಿದೀನಲ್ಲಾ, ಅವರೆಲ್ಲರೂ ನನಗೆ ಅಕ್ಕನ ಸ್ಥಾನ ಕೊಟ್ಟಿದಾರಲ್ಲಾ. ಅದರ ಬಗ್ಗೆ ಖುಷಿಯಿದೆ.
Advertisement
Advertisement
ಕ್ಯಾಪ್ಟನ್ಸಿ ಟಾಸ್ಕ್ ಕನಸು
Advertisement
ಕ್ಯಾಪ್ಟನ್ಸಿ ಟಾಸ್ಕ್‌ಗೆ ನಾನು ಬಹಳ ಹತ್ತಿರ ಹೋಗಿದ್ದೆ. ಎರಡು ಸಲ ಹೋಗಿದ್ದೆ. ಆದರೆ ಕ್ಯಾಪ್ಟನ್ ಆಗಲು ಆಗಲಿಲ್ಲ. ಕ್ಯಾಪ್ಟನ್ ಬೆಡ್ ಮೇಲೆ ಮಲಗುವ ಅವಕಾಶ ಸಿಗಲಿಲ್ಲ. ಆದರೆ ಕ್ಯಾಪ್ಟನ್‌ಗೆ ಸಿಗುವ ಸೌಲಭ್ಯಗಳನ್ನೆಲ್ಲ ಕಳೆದ ವಾರಗಳಲ್ಲಿ ನಾನು ತೆಗೆದುಕೊಂಡಿದೀನಿ. ಹಾಗಾಗಿ ಸುದೀಪ್ ಅವರೇ ನನಗೆ ಮನೆಯನ್ನು ನಿಭಾಯಿಸುವ ಜವಾಬ್ದಾರಿ ಕೊಟ್ರು. ಇಮ್ಯೂನಿಟಿ ಸಿಗುತ್ತದೆ ಕ್ಯಾಪ್ಟನ್ ಆದವರಿಗೆ. ವೈಲ್ಡ್ ಕಾರ್ಡ್ ಎಂಟ್ರಿ ಆದವರು ಆ ವಾರ ನನ್ನನ್ನು ಸೇವ್ ಮಾಡಿ ಆ ಸೌಲಭ್ಯವೂ ಸಿಗುವಂತೆ ಮಾಡಿದರು. ಮನೆಯವರು ಫೋಟೊ ಬರುತ್ತದೆ ಕ್ಯಾಪ್ಟನ್ ಆದವರಿಗೆ. ನನಗೆ ಮನೆಯಿಂದ ಪತ್ರ ಬಂದಾಗಲೇ ನನ್ನದು ನನ್ನ ತಂದೆಯವರದ್ದು ಫೋಟೊ ಬಂದಿತ್ತು. ಹಾಗಾಗಿ, ಕ್ಯಾಪ್ಟನ್ ಆಗಿ ಸಿಗುವ ಸೌಲಭ್ಯಗಳಲ್ಲಿ ಬಹುತೇಕ ನನಗೆ ಸಿಕ್ಕಿದೆ. ಆದರೆ ಕ್ಯಾಪ್ಟನ್ ಕೋಣೆ ಎಂಟರ್ ಆಗಿಲ್ಲ ನಾನು.
ಕಾರ್ತಿಕ್ ಜೆನ್ಯೂನ್
ಈ ಸೀಸನ್‌ನಲ್ಲಿ ಅತ್ಯಂತ ಜೆನ್ಯೂನ್ ಅನಿಸುವುದು ಕಾರ್ತಿಕ್. ತುಂಬ ಕಷ್ಟಪಟ್ಟು, ತುಂಬ ಇಷ್ಟಪಟ್ಟು ಆಟ ಆಡ್ತಾ ಇದ್ದಾರೆ. ಫೇಕ್ ಅಂತ ನಾನು ಹೇಳೋದಿಲ್ಲ. ಆದರೆ ಆಟಕ್ಕೆ ಏನು ಬೇಕೋ, ಹೇಗೆ ಬೇಕೋ ಹಾಗೆ ತಿರುಗೋದು ಅಂದ್ರೆ ಅದು ತುಕಾಲಿ ಸಂತೋಷ್. ಟಾಪ್ 5ನಲ್ಲಿ ಕಾರ್ತೀಕ್, ವಿನಯ್, ವಿನಯ್, ತುಕಾಲಿ ಸಂತೋಷ್ ಮತ್ತು ತನಿಷಾ ಇರಬೇಕು. ಹುಡುಗಿ ವಿನ್ನರ್ ಆದ್ರೆ ನನಗೆ ಖುಷಿಯಾಗುತ್ತದೆ. ಹಾಗೆ ನೋಡಿದ್ರೆ ಸಂಗೀತಾ ಗೆಲ್ಲಬೋದು ಅನಿಸುತ್ತದೆ. ಆದರೆ ಈಗಿನ ಸನ್ನಿವೇಶ ನೋಡಿದ್ರೆ ಕಾರ್ತೀಕ್ ಗೆಲ್ಲಬಹುದು ಅನ್ನಿಸತ್ತೆ. ಮುಂದಿನ ವಾರ ಡೇಂಜರ್ ಝೋನ್‌ನಲ್ಲಿ ಮೈಕಲ್ ಇರ್ತಾರೆ ಅಂದ್ಕೊತೀನಿ.
ಜಿಯೊಸಿನಿಮಾ ಫನ್ ಫ್ರೈಡೆ
ಜಿಯೊ ಸಿನಿಮಾ ಫನ್ ಫ್ರೈಡೇ ಅಂತ ಬಂದಾಗ ನಾವೆಲ್ಲರೂ ಫನ್ ಆಗಿಯೇ ತಗೋತಿದ್ವಿ. ನಿನ್ನೆ ಕೂಡ ಬ್ರೆಡ್ ತಿನ್ನುವ ಫನ್ ಟಾಸ್ಕ್ ಇತ್ತು. ನಾನು ಸುಮಾರು ವಾರ ಗೆದ್ದಿದೀನಿ. ಖುಷಿಯಾಗಿರುತ್ತದೆ. ಸುಮಾರು ವರ್ಷಗಳ ಹಿಂದೆ ‘ಚಂದು’ ಸಿನಿಮಾದಲ್ಲಿ ಸುದೀಪ್ ಅವರ ಜೊತೆಗೆ ತೆರೆಯನ್ನು ಹಂಚಿಕೊಂಡಿದ್ದೆ. ಬಿಗ್‌ಬಾಸ್ ಅಂತ ಬಂದಾಗ, ನಮಗೆ ಒಬ್ಬ ವ್ಯಕ್ತಿ ಪ್ರತಿವಾರ ಒಬ್ಬ ವ್ಯಕ್ತಿ ಸಿಕ್ಕು, ನಮ್ಮ ಕೊರತೆಗಳನ್ನು ಹೇಳಿ ಮುಂದೆ ಹೋಗಲು ಪ್ರೋತ್ಸಾಹಿಸುತ್ತಾರೆ ಅಂದ್ರೆ ಅದು ಸುದೀಪ್. ಆಗ ಒಬ್ಬ ಸ್ಟಾರ್‍ನ ನೋಡ್ತಿದ್ದೆ. ಈಗ ನಾನೂ ಸುದೀಪ್ ಅವರ ಫ್ಯಾಮಿಲಿ ಮೇಂಬರ್ ಅನ್ನೋ ಫೀಲ್ ಬಂದಿದೆ. ಬೆಳಗಿನ ಹೊತ್ತಿನ ಹಾಡನ್ನು ಖಂಡಿತ ಮಿಸ್ ಮಾಡ್ಕೋತೀನಿ. ಮತ್ತು ಮೈಕ್ ಅನ್ನೂ ಮಿಸ್ ಮಾಡ್ಕೋತೀನಿ.
ನನ್ನ ಬಿಗ್‌ಬಾಸ್ ಪ್ರಯಾಣ ತುಂಬ ಚೆನ್ನಾಗಿತ್ತು. ಸಾಕಷ್ಟು ಏರಿಳಿತಗಳು ಇದ್ದರೂ ಇಷ್ಟು ದೂರ ಬಂದಿರುವುದು ಖುಷಿಕೊಟ್ಟಿದೆ. ಬದುಕಿನಲ್ಲಿ ಒಮ್ಮೆ ಮಾತ್ರ ಇಂಥ ಅನುಭವ ಸಿಗಲು ಸಾಧ್ಯ. ಅದು ನನಗೆ ಸಿಕ್ಕಿದೆ. ಅದಕ್ಕೆ ಖುಷಿಯಿದೆ. ಪ್ರತಿ ಟಾಸ್ಕ್, ಸೆಫ್ಟಿ, ಚಟುವಟಿಕೆಗಳು, ತಂತ್ರಜ್ಞರು ಎಲ್ಲರೂ ಎಷ್ಟು ಶ್ರಮಪಡುತ್ತಿದ್ದಾರೆ…. ಅವರೆಲ್ಲರಿಗೂ ನಾನು ಥ್ಯಾಂಕ್ಸ್ ಹೇಳ್ತೀನಿ.