‘ಮನೆಯೇ ಮೊದಲ ಪಾಠಶಾಲೆ’ ಎಂಬ ಮಾತು ಬಿಗ್‌ಬಾಸ್ ಮನೆಯಲ್ಲಿ (Bigg Boss Kannada 10) ಅಕ್ಷರಶಃ ಸತ್ಯವಾಗುತ್ತಿದೆ. ಬಿಗ್‌ಬಾಸ್ ಮನೆಯಲ್ಲಿ ಪ್ರಾಥಮಿಕ ಶಾಲೆ ಪ್ರಾರಂಭವಾಗಿದೆ. ಹಾಗಾದ್ರೆ ವಿದ್ಯಾರ್ಥಿಗಳು ಯಾರು? ಕಳೆದ ವಾರ ರಕ್ಕಸರ ಹಾಗೆ ಕಿತ್ತಾಡಿದ್ದವರೇ ಈ ವಾರ ಪುಟ್ಟ ಮಕ್ಕಳಾಗಿ ಶಾಲೆಗೆ ಸೇರಿಕೊಂಡಿದ್ದಾರೆ. ಒಬ್ಬರ ಕೈಗೆ ಇನ್ನೊಬ್ಬರು ಕಚ್ಚುತ್ತ, ಒಬ್ಬರ ಬಗ್ಗೆ ಇನ್ನೊಬ್ಬರು ದೂರು ಹೇಳುತ್ತ, ಎಲ್ಲರ ಜೊತೆ ಸೇರಿ ಒಟ್ಟಿಗೆ ಪ್ರಾರ್ಥನೆ ಮಾಡುತ್ತ ಕೋಲಾಹಲವೆದ್ದಿದ್ದ ಮನೆಯಲ್ಲಿ ಕಲರವ ಉಂಟುಮಾಡುತ್ತಿದ್ದಾರೆ. ಕ್ರೌರ್ಯ ಮೆರೆದಾಡಿದ್ದ ಜಾಗದಲ್ಲಿ ಮುಗ್ಧತೆ ಅರಳುತ್ತಿದೆ. ಜಿಯೋ ಸಿನಿಮಾದಲ್ಲಿ ಪ್ರೋಮೋ ರಿಲೀಸ್ ಆಗಿದೆ.
Advertisement
ಈ ವಾರದ ಟಾಸ್ಕ್‌ನಲ್ಲಿ ಬಿಗ್‌ಬಾಸ್ ಮನೆಯ (Bigg Boss Kannada) ಎಲ್ಲ ಸದಸ್ಯರನ್ನು ಬಾಲ್ಯಕ್ಕೆ ಕರೆದೊಯ್ಯುತ್ತಿದ್ದಾರೆ. ಎಲ್ಲ ಸ್ಪರ್ಧಿಗಳೂ ಪ್ರಾಥಮಿಕ ಶಾಲೆಯ ಸಮವಸ್ತ್ರ ತೊಟ್ಟು ಅಕ್ಷರಶಃ ಮಕ್ಕಳೇ ಆಗಿಬಿಟ್ಟಿದ್ದಾರೆ. ಒಬ್ಬೊಬ್ಬರೂ ಇನ್ನೊಬ್ಬರ ಚೇಷ್ಟೆಗಳನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಗುತ್ತಿದ್ದಾರೆ. ಈ ವಾರವಿಡೀ ಮಕ್ಕಳಾಟದ ಮನರಂಜನೆ ಭರಪೂರ ಸಿಗಲಿದೆ. ಇದನ್ನೂ ಓದಿ:‘ಹಾಯ್ ನಾನ್ನ’ ಮೆಚ್ಚಿಕೊಂಡ ಶಿವರಾಜ್ ಕುಮಾರ್
Advertisement
ವ್ಯಕ್ತಿತ್ವ ವಿಕಸದ ಪಾಠಗಳನ್ನು ಕೇಳಿದ ಮೇಲೆ ಭಾಷೆಯ ಪಾಠವೂ ಬೇಕಲ್ಲವೇ? ಪ್ರಾಥಮಿಕ ಶಾಲೆಯಲ್ಲಿ ಕನ್ನಡ ಪಾಠ ಮಾಡಿಲ್ಲವೆಂದರೆ ಹೇಗೆ? ಕನ್ನಡ ಕಲಿಸಲು ಬಂದ ಮೇಷ್ಟ್ರು ಯಾರು ಗೊತ್ತೆ? ವಿದೇಶದಿಂದ ಬಂದಿರುವ ಮೈಕಲ್, ಕೋಟು ತೊಟ್ಟು ಕನ್ನಡ ತರಗತಿ ಮಾಡಲು ಸಜ್ಜಾಗಿದ್ದಾರೆ.
Advertisement
Advertisement
ವಿದೇಶದಿಂದ ಬಂದಿದೀನಿ. ಕನ್ನಡ ಭಾಷೆಯ ಮೇಲೆ ನನಗೆ ಪ್ರೀತಿ ಆಯ್ತು. ಈಗ ಪಂಡಿತ ಆಗಲು ಯತ್ನಿಸುತ್ತಿದ್ದೇನೆ ಎಂದಿದ್ದಾರೆ ಮೈಕಲ್ (Michael Ajay) ಮೇಷ್ಟ್ರು. ಅಷ್ಟೇ ಅಲ್ಲ, ಪುಂಡ ಹುಡುಗ ಕಾರ್ತಿಕ್‌ಗೆ (Karthik Mahesh), ಆಂಗ್ಲ ಭಾಷೆ ಬಳಕೆ ಮಾಡಿದರೆ ಶಿಕ್ಷೆ ಕೊಡ್ತೀನಿ ಎಂದು ಎಚ್ಚರಿಕೆ ಬೇರೆ ನೀಡಿದ್ದಾರೆ. ಎಲ್ಲಾದರೂ ಇರು ಎಂತಾದರೂ ಇರು, ಎಂದೆಂದಿಗೂ ನೀ ಕನ್ನಡವಾಗಿರು ಎಂದು ಮೈಕಲ್ ಹೇಳುತ್ತಿದ್ದರೆ ವಿದ್ಯಾರ್ಥಿಗಳ ಬಾಯಲ್ಲಿ ಕನ್ನಡ ರೋಮಾಂಚನವೀ ಕನ್ನಡ ಎಂಬ ಹಾಡು ತಂತಾನೆಯೇ ಹೊಮ್ಮಿದೆ. ಈ ಕನ್ನಡ ಕ್ಲಾಸ್ ಅನ್ನು ನೋಡಿದ ಎಲ್ಲರಿಗೂ ರೋಮಾಂಚನ ಹುಟ್ಟಿಸುವುದಂತೂ ಖಂಡಿತ.