ನ್ಯಾ.ಕುನ್ಹಾ ಏಜೆಂಟ್ ಎಂಬ ಜೋಶಿ ಹೇಳಿಕೆಗೆ ಸಚಿವರ ತಿರುಗೇಟು
ಗದಗ: ಜಸ್ಟಿಸ್ ಮೈಕೆಲ್ ಕುನ್ಹಾ (Michael D’Cunha) ಅವರು ಕಡತಗಳನ್ನು ಪರಿಶೀಲಿಸಿ 7,223 ಕೋಟಿ ರೂ. ಅವ್ಯವಹಾರದ ಸತ್ಯಶೋಧನೆ ನಡೆಸಿದ್ದಾರೆ. ನೂರಾರು ಕೋಟಿ ರೂ. ವೆಚ್ಚಗಳ ಕುರಿತು ಲೆಕ್ಕಪತ್ರಗಳಿಲ್ಲ, ಕಾಗದಗಳೂ ಇಲ್ಲ. ಯಡಿಯೂರಪ್ಪ ಸಿಎಂ ಹಾಗೂ ಶ್ರೀರಾಮುಲು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಹೆಚ್.ಕೆ ಪಾಟೀಲ್ ಹೇಳಿದ್ದಾರೆ.
Advertisement
ಈ ಬಗ್ಗೆ ನಗರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಕೆಲ್ ಕುನ್ಹಾ ಅವರ ಆಯೋಗವು ಸಲ್ಲಿಸಿದ ಮಧ್ಯಂತರ ವರದಿಯಲ್ಲಿ ಯಡಿಯೂರಪ್ಪ (B. S.Yediyurappa) ಅವರು ಸಿಎಂ ಹಾಗೂ ಶ್ರೀರಾಮುಲು ಅವರು ಆರೋಗ್ಯ ಸಚಿವರಾಗಿದ್ದ ಸಂದರ್ಭದಲ್ಲಿ 3 ಲಕ್ಷ ಪಿಪಿಇ ಕಿಟ್‌ಗಳನ್ನು 2,117 ರೂ. ನಂತೆ ಖರೀದಿಸಿ ಮಾರಾಟ ಮಾಡಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಅವರು ಜಸ್ಟಿಸ್ ಮೈಕೆಲ್ ಕುನ್ಹಾ ಅವರ ಬಗ್ಗೆ ಏಜೆಂಟ್ ಎಂದು ಹೇಳಿರುವುದು, ಆಯೋಗದ ಬಗ್ಗೆ ಲಘುವಾಗಿ ಟೀಕೆ ಮಾಡಿರುವುದು ಅತ್ಯಂತ ದುರ್ದೈವದ ಸಂಗತಿ. ಸಂವಿಧಾನ ಎತ್ತಿ ಹಿಡಿಯುವ, ನ್ಯಾಯಾಂಗದ ಬಗ್ಗೆ ಪ್ರಶ್ನಿಸಬಾರದು. ಜೋಶಿ ಅವರು ಕೂಡಲೇ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: 3 ಕ್ಷೇತ್ರದಲ್ಲಿ ಶಾಂತಿಯುತ ಮತದಾನ – ಚನ್ನಪಟ್ಟಣದಲ್ಲಿ 89% ದಾಖಲೆಯ ವೋಟಿಂಗ್
Advertisement
Advertisement
ಕಳೆದ ಕೆಲ ದಿನಗಳಿಂದ ಉನ್ನತ ಹಾಗೂ ಎತ್ತರದ ಹುದ್ದೆಗಳಲ್ಲಿರುವ ಜವಾಬ್ದಾರಿ ವ್ಯಕ್ತಿಗಳು ಮನಬಂದಂತೆ ಮಾತನಾಡುತ್ತಿದ್ದಾರೆ. ನ್ಯಾಯಾಂಗದ ಭಾಗವಾಗಿರುವ ನ್ಯಾಯಮೂರ್ತಿಗಳು ಹಾಗೂ ತನಿಖಾ ಸಂಸ್ಥೆಯ ನೇತೃತ್ವ ಹೊಂದಿರುವ ಆಯೋಗಗಳಿಗೂ ಮನಬಂದಂತೆ ಮಾತನಾಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಜೋಶಿ (Pralhad Joshi) ನಮ್ಮ ರಾಜ್ಯದ ತನಿಖಾ ಆಯೋಗದಕ್ಕೆ ಅಗೌರವ ಹಾಗೂ ಅಸಂಬದ್ಧ ರೀತಿ ನಡೆದುಕೊಂಡಿರುವುದು ಸರಿಯಲ್ಲ. ರಾಷ್ಟ್ರಪತಿಗಳು ಅವರನ್ನು ತಕ್ಷಣ ಮಂತ್ರಿ ಸ್ಥಾನದಿಂದ ತೆಗೆದುಹಾಕಬೇಕು. ಅಲ್ಲದೇ ರಾಜಕೀಯ ಭಯ, ಸತ್ಯಾನ್ವೇಶನೆ ನಡೆಯಬಾರದು. ಭ್ರಷ್ಟಾಚಾರಿಗಳಿಗೆ ಶಿಕ್ಷೆ ಆಗಬಾರದು ಎಂಬ ಹಾದಿಯಲ್ಲಿ ಹೊರಟಿರುವ ಜೋಶಿ ಅವರ ಮೇಲೆ ರಾಷ್ಟ್ರಪತಿಗಳು ಕಾನೂನು ಕ್ರಮಕೈಗೊಳ್ಳುವ ಮೊದಲೇ ತಕ್ಷಣ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಆರೋಗ್ಯವಾಗಿದ್ದೇನೆ, ಕಠಿಣ ವ್ಯಾಯಾಮದಲ್ಲಿ ತೊಡಗಿರೋದ್ರಿಂದ ದೈಹಿಕ ಬದಲಾವಣೆ: ಸುನಿತಾ ವಿಲಿಯಮ್ಸ್ ಸ್ಪಷ್ಟನೆ
Advertisement
ಕೇಂದ್ರ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ಮಾನ್ಯತೆ ಇಲ್ಲದ 14 ಖಾಸಗಿ ಪ್ರಯೋಗಾಲಯ ಕೋಟ್ಯಂತರ ಹಣ ಸಂದಾಯ ಮಾಡಿದ್ದಾರೆ. ಮತ್ತು ಇನ್ನೂ 8 ಪ್ರಯೋಗಾಲಯ 4 ಕೋಟಿ ಗೂ ಅಧಿಕ ಹಣ ಸಂದಾಯ ಮಾಡಿರುವುದನ್ನು ಆಯೋಗ ತರಾಟೆ ತೆಗೆದುಕೊಂಡಿದೆ. ಕರೋನಾದಂತಹ ಸನ್ನಿವೇಶದಲ್ಲಿ ಭ್ರಷ್ಟಾಚಾರ ಮಾಡಿರುವುದನ್ನು ಆಯೋಗ ಹೇಳಿದೆ. ಅದನ್ನು ಸಹಿಸಿಕೊಳ್ಳಲಾಗದೇ ಜೋಶಿ ಅವರು ಪ್ರತಿಕ್ರಿಯಿಸಿದ್ದಾರೆ. ಸತ್ಯವನ್ನು ಎದುರಿಸುವ ಧೈರ್ಯ ಇಲ್ಲದ ಜೋಶಿ ಅವರು ಕುನ್ಹಾ ಅವರ ಆಯೋಗದ ಬಗ್ಗೆ ಏಜೆಂಟ್ ಎಂದು ಕರೆದಿರುವುದು, ಮದ್ಯಂತರ ವರದಿಗಳ ಬಗ್ಗೆ ಟೀಕೆ ಮಾಡಿರುವುದು ಸಂವಿಧಾನಕ್ಕೆ ಮಾಡಿದ ಅಪಚಾರ ಎಂದರು. ಇದನ್ನೂ ಓದಿ: ಪರಿಹಾರದ ಹಣ ನೀಡಲಿಲ್ಲ ಅಂತ ಎಸಿ ಕೂತಿದ್ದ ಚೇರನ್ನೇ ಹೊತ್ತೊಯ್ದ ಸಂತ್ರಸ್ತರು!
ಇನ್ನು ಜಿಲ್ಲೆಯಲ್ಲಿ ಕೋಟುಮಚಗಿ ಗ್ರಾಮದಲ್ಲಿ 562 ಸರ್ವೇ ನಂಬರ್‌ನ ಸೋಮೇಶ್ವರ ದೇವಸ್ಥಾನ ಟ್ರಸ್ಟ್ ಕಮೀಟಿ ಹೆಸರು ಇದ್ದಾಗ್ಯೂ ಇದು ವಕ್ಫ್ ಹೆಸರಿನಲ್ಲಿದೆ ಎಂದು ಅಪಪ್ರಚಾರ ಮಾಡಿದ್ದಾರೆ. ಇದು ಬದಲಾವಣೆ ಆಗಿಲ್ಲ. ಆ ರೀತಿ ಬದಲಾವಣೆ ಮಾಡಕೂಡದು ಎಂದು ಸರಕಾರ ಆದೇಶ ನೀಡಿದೆ. ಈ ಕುರಿತು ತಪ್ಪು ಮಾಹಿತಿ ಹರಡುವವರ ಮಾತಿಗೆ ಯಾರೂ ಕಿವಿಕೊಡಬಾರದು ಎಂದು ಮನವಿ ಮಾಡಿದರು. ಇದನ್ನೂ ಓದಿ: ಅಮೆರಿಕದಲ್ಲಿ 10 ಶತಕೋಟಿ ಡಾಲರ್ ಹೂಡಿಕೆಗೆ ಬದ್ಧ, 15,000 ಉದ್ಯೋಗ ಸೃಷ್ಟಿ ಗುರಿ: ಅದಾನಿ
ಈ ವೇಳೆ ಮುಖಂಡರಾದ ಬಿ.ಬಿ. ಅಸೂಟಿ, ಅಶೋಕ್ ಮಂದಾಲಿ, ಬಸವರಾಜ ಕಡೇಮನಿ ಸೇರಿ ಅನೇಕರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು. ಇದನ್ನೂ ಓದಿ: ಉದ್ಧವ್ ಠಾಕ್ರೆ ಬ್ಯಾಗ್ ಗದ್ದಲದ ನಡುವೆ ಮಹಾರಾಷ್ಟ್ರದಲ್ಲಿ ಏಕನಾಥ್ ಶಿಂಧೆ ಹೆಲಿಕಾಪ್ಟರ್ ತಪಾಸಣೆ