ಬಿಗ್ ಬಾಸ್ ಮನೆಯಲ್ಲಿ (Bigg Boss Kannada 10) ಹೈಲೆಟ್ ಆಗಿರುವ ಜೋಡಿಗಳಲ್ಲಿ ಮೈಕಲ್- ಇಶಾನಿ ಕೂಡ ಒಬ್ಬರಾಗಿದ್ದರು. ಇಶಾನಿ ಎಲಿಮಿನೇಟ್ ಆಗುವ ಮುನ್ನ ಮನೆಯಲ್ಲಿ ರಂಪಾಟ ನಡೆದಿತ್ತು. ಇಶಾನಿ ನಡೆಗೆ ಮೈಕಲ್ (Michael) ಕೂಡ ಕಿಡಿಕಾರಿದ್ರು ಅದಾದ ಬಳಿಕ ಬ್ರೇಕಪ್ ಆಗಿತ್ತು. ಆದರೆ ಎಲಿಮಿನೇಷನ್ ಸಮಯದಲ್ಲಿ ಪ್ರೀತಿಯಿಂದ ಮೈಕಲ್ ಕಳುಹಿಸಿಕೊಟ್ಟಿದ್ರು. ಇದಾದ ಮೇಲೆ ಏನಾಯ್ತು ಎಂದು ಮತ್ತೆ ಇಶಾನಿ-ಮೈಕಲ್ ಪ್ರೀತಿ ಬಗ್ಗೆ ಇದೀಗ ಉತ್ತರ ಸಿಕ್ಕಿದೆ.


ಇದಾದ ಮೇಲೆ ಇಶಾನಿ ಬಗ್ಗೆ ಮೈಕಲ್ ನೆನೆಯಲೇ ಇಲ್ಲ. ಅಸಲಿಗೆ ಇಬ್ಬರಿಗೆ ಲವ್ ಆಯ್ತು. ಮೈಕಲ್ ಇಶಾನಿ ಅವರನ್ನ ಮರೆತ್ರಾ ಎಂಬೆಲ್ಲಾ ಪ್ರಶ್ನೆಯನ್ನ ಅಭಿಮಾನಿಯೊಬ್ಬರು ವಿಡಿಯೋ ಮೆಸೇಜ್ ಮೂಲಕ ಕಿಚ್ಚನ ಪಂಚಾಯಿತಿಯಲ್ಲಿ ಮೈಕಲ್‌ಗೆ ಕೇಳಿದ್ದಾರೆ. ಅದಕ್ಕೆ ನೇರವಾಗಿ ಮೈಕಲ್ ಅಜಯ್ ಉತ್ತರಿಸಿದ್ದಾರೆ.
ಬಿಗ್ ಬಾಸ್ ನೋಡೋಕೆ ಆಸಕ್ತಿ ಬಂದಿದ್ದೆ ಮೈಕಲ್- ಇಶಾನಿ ಲವ್ ಸ್ಟೋರಿ ನೋಡಿದ ಮೇಲೆ. ಆದರೆ ಒಂದೇ ವಾರದಲ್ಲಿ ಎಲ್ಲೋ ಗೋಜಪ್ಪ ಇಶಾನಿಯನ್ನ ಮರೆತು ಬಿಟ್ರಾ ಅಂತ ಅನಿಸುತ್ತಿದೆ ಎಂದು ಬಿಗ್ ಬಾಸ್ ಅಭಿಮಾನಿಯೊಬ್ಬರು ಪ್ರಶ್ನೆ ಮುಂದಿಟ್ಟಿದ್ದಾರೆ. ಅದಕ್ಕೆ, ಲೈಫ್‌ನಲ್ಲಿ ಸ್ವಲ್ಪ ಕಾಂಪ್ಲಿಕೇಶನ್ಸ್ ಇರುತ್ತೆ. ಸಾಕಷ್ಟು ಭಿನ್ನಾಭಿಪ್ರಾಯ ಮತ್ತೆ ಕಂಟಿನ್ಯೂ ಮಾಡೋಕೆ ಆಗಲ್ಲ ಎಂದಿದ್ದಾರೆ ಮೈಕಲ್.
ನಾನು ಇಶಾನಿ ಈಗ ಫ್ರೆಂಡ್ಸ್ ಆಗಿದ್ವಿ. ಬಿಗ್ ಬಾಸ್ ಆಟ ಮುಗಿದ ಮೇಲೆ ಹೊರಗಡೆ ಬಂದ ಮೇಲೆ ಇಶಾನಿಯನ್ನ ಖಂಡಿತವಾಗಿಯೂ ಮೀಟ್ ಆಗುತ್ತೀನಿ. ದಯವಿಟ್ಟು ನೀವು ನನ್ನ ಇನ್ಸ್ಟಾಗ್ರಾಂ ಫಾಲೋ ಮಾಡಿ. ನಮ್ಮಿಬ್ಬರ ಪೋಸ್ಟ್ ನೀವು ನೋಡಬಹುದು ಎಂದು ಮೈಕಲ್ ರಿಯಾಕ್ಟ್ ಮಾಡಿದ್ದಾರೆ. ಈ ಮೂಲಕ ಇಶಾನಿಯನ್ನ ನಾನೇ ಸಿರಿಯಸ್ ಆಗಿ ತೆಗೆದುಕೊಂಡಿಲ್ಲ. ನೀವ್ಯಾಕೆ ತೆಗೆದುಕೊಂಡಿದ್ದೀರಾ ಎಂಬ ಅರ್ಥದಲ್ಲಿ ಮೈಕಲ್ ಚಾಟಿ ಬೀಸಿದ್ದಾರೆ.



