ಚೆನ್ನೈ: ತಮಿಳುನಾಡಿನ ಧಾರ್ಮಿಕ ಕಾರ್ಯಕ್ರಮದ ಫ್ಲೆಕ್ಸ್‌ವೊಂದರಲ್ಲಿ ಮಾಜಿ ನೀಲಿ ತಾರೆ ಮಿಯಾ ಖಲೀಫಾ (Mia Khalifa) ಅವರ ಫೋಟೋ ಕಾಣಿಸಿಕೊಂಡಿದ್ದು, ಭಾರೀ ಆಕ್ಷೇಪ ವ್ಯಕ್ತವಾದ ಬಳಿಕ ಫ್ಲೆಕ್ಸನ್ನು (Religious Hoarding) ತೆರವುಗೊಳಿಸಲಾಗಿದೆ.
Kuruvimalai, Tamil Nadu: An image of Mia Khalifa was used on a hoarding for the Aadi Perukku festival carrying a traditional milk vessel. Magaral Police Station removed the hoarding pic.twitter.com/xYRcuJqIOb
— IANS (@ians_india) August 8, 2024
Advertisement
ತಮಿಳುನಾಡಿನ (Tamil Nadu) ಕೊರುವಿಮಲೈನಲ್ಲಿ ಧಾರ್ಮಿಕ ಕಾರ್ಯಕ್ರಮಕ್ಕೆ ಸಂಬಂಧಿಸಿದ ಫ್ಲೆಕ್ಸ್‌ವೊಂದರಲ್ಲಿ ಲೆಬನಾನ್ ಮೂಲದ ಮಾಜಿ ನೀಲಿ ತಾರೆ ಮಿಯಾ ಖಲೀಫಾ ಅವರ ಫೋಟೋ ಬಳಸಲಾಗಿತ್ತು. ಈ ಫ್ಲೆಕ್ಸ್‌ನ ವೀಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡಲಾಗಿತ್ತು. ಭಾರೀ ಆಕ್ಷೇಪಗಳು ಕೇಳಿಬಂದ ಮಗರಾಲ್ ಠಾಣೆಯ ಪೊಲೀಸರು ಫ್ಲೆಕ್ಸ್ ಅನ್ನು ತೆರವುಗೊಳಿಸಿದ್ದಾರೆ. ಅಲ್ಲದೇ ಅಭಾಸಕ್ಕೆ ಕಾರಣವಾದ ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿಯೂ ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಮುಂದೊಂದು ದಿನ ಮೋದಿ ನಿವಾಸಕ್ಕೆ ಜನ ನುಗ್ಗುತ್ತಾರೆ: ನಾಲಗೆ ಹರಿಬಿಟ್ಟ ಕೈ ಹಿರಿಯ ನಾಯಕ
Advertisement
Advertisement
ಈ ಹಿಂದೆ ಇಸ್ರೇಲ್-ಹಮಾಸ್ ಯುದ್ಧದ ಸಂದರ್ಭದಲ್ಲೂ ಮಿಯಾ ಖಲೀಫಾ ಸುದ್ದಿಯಾಗಿದ್ದರು. ಇಸ್ರೇಲ್ ವಿರುದ್ಧ ಸರಣಿ ಪೋಸ್ಟ್ ಮಾಡಿದ್ದರು. ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಅವರು ಪ್ಯಾಲೆಸ್ತೀನ್ ಪರವಾಗಿ ಸಾಕಷ್ಟು ಪೋಸ್ಟ್‌ಗಳನ್ನ ಹಂಚಿಕೊಂಡು, ತಾವು ಪ್ಯಾಲೆಸ್ತೀನ್ ಪರವಾಗಿ ನಿಂತಿರುವುದಾಗಿ ಹೇಳಿಕೊಂಡಿದ್ದರು. ಮಿಯಾ ಪೋಸ್ಟ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರೀ ಸದ್ದು ಮಾಡಿತ್ತು. ಇದರಿಂದಾಗಿ ಮಿಯಾ ಅವರನ್ನ ಖಾಸಗಿ ಕಂಪನಿ ಕೆಲಸದಿಂದಲೇ ವಜಾಗೊಳಿಸಿತ್ತು. ಇದನ್ನೂ ಓದಿ: 20 ಲಕ್ಷ ಲಂಚ ಪಡೆಯುವಾಗ ರೆಡ್‍ಹ್ಯಾಂಡ್ ಆಗಿ ಸಿಕ್ಕಿಬಿದ್ದ ಇ.ಡಿ ಅಧಿಕಾರಿ
Advertisement
ಇದಕ್ಕೂ ಮುನ್ನ ಮಿಯಾ ಖಲೀಫಾ, ಕಿರುತೆರೆಯ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ (Bigg Boss Hindi) ಕಾರ್ಯಕ್ರಮಕ್ಕೆ ಬರಲಿದ್ದಾರೆ ಎಂದು ಸುದ್ದಿಯಾಗಿತ್ತು. ಇದನ್ನೂ ಓದಿ: Wayanad landslides | ಸಂತ್ರಸ್ತರಿಗೆ 15 ಕೋಟಿ, 300 ಮನೆ ನೆರವು ನೀಡಲು ಮುಂದಾದ ಬೆಂಗ್ಳೂರು ಮೂಲದ ಆರೋಪಿ