ಮುಂಬೈ: 15 ಐಪಿಎಲ್ ಆವೃತ್ತಿಯಲ್ಲಿ ಕಳೆದ 5 ಪಂದ್ಯಗಳಲ್ಲೂ ಸತತವಾಗಿ ಸೋಲನ್ನು ಅನುಭವಿಸಿರುವ ಮುಂಬೈ ಇಂಡಿಯನ್ಸ್ ತಂಡಕ್ಕೆ ಮತ್ತೊಂದು ಬರೆ ಬಿದ್ದಿದೆ.
ಹೌದು.. ಮುಂಬೈ ಇಂಡಿಯನ್ಸ್ ತಂಡದ ನಾಯಕ ರೋಹಿತ್ ಶರ್ಮಾ ಸೇರಿದಂತೆ 11 ಸಹ ಆಟಗಾರರಿಗೆ ಪಂಜಾಬ್ ಕಿಂಗ್ಸ್ ವಿರುದ್ದದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದಕ್ಕಾಗಿ ದಂಡ ವಿಧಿಸಲಾಗಿದೆ. ಇದನ್ನೂ ಓದಿ: 4 ತಿಂಗಳ ಕಾಲ ಕ್ರಿಕೆಟ್‍ನಿಂದ ಹೊರಗುಳಿಯಬೇಕಾಗಿದೆ ದೀಪಕ್ ಚಹರ್ – ಟಿ20 ವಿಶ್ವಕಪ್‍ಗೂ ಡೌಟ್
Advertisement
Advertisement
ಬುಧವಾರ ಪುಣೆಯ ಮಹಾರಾಷ್ಟ್ರ ಕ್ರಿಕೆಟ್ ಆಸೋಸಿಯೆಶನ್ ಸ್ಟೇಡಿಯಂನಲ್ಲಿ ನಡೆದ ಕಿಂಗ್ಸ್ ಪಂಜಾಬ್ ವಿರುದ್ಧದ ಐಪಿಎಲ್ ಪಂದ್ಯದಲ್ಲಿ ನಿಧಾನಗತಿಯ ಬೌಲಿಂಗ್ ಪ್ರದರ್ಶಿಸಿದ್ದಕ್ಕಾಗಿ ರೋಹಿತ್ ಶರ್ಮಾಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ತಂಡದ 10 ಸಹ ಆಟಗಾರರಿಗೆ ತಲಾ 6 ಲಕ್ಷ ಅಥವಾ ಅವರ ಪಂದ್ಯದ ಶುಲ್ಕದ ಶೇ.25 ಪ್ರತಿಶತದಷ್ಟು ದಂಡ ವಿಧಿಸಲಾಗಿದೆ ಎಂದು ಐಪಿಎಲ್ ಆಯೋಜಕರು ತಿಳಿಸಿದ್ದಾರೆ.
Advertisement
15ನೇ ಆವೃತ್ತಿಯ ಐಪಿಎಲ್‌ನ ಕಿಂಗ್ಸ್ ಪಂಜಾಬ್ ವಿರುದ್ಧ ನಡೆದ ಪಂದ್ಯದಲ್ಲಿ 186 ರನ್‌ಗಳಿಸಿದ ಮುಂಬೈ ಇಂಡಿಯನ್ಸ್ ತಂಡವು 12 ರನ್‌ಗಳ ಅಂತರದಿಂದ ಸೋಲನ್ನು ಅನುಭವಿಸಿದೆ. ಇದರಿಂದಾಗಿ ಐಪಿಎಲ್ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ಕುಸಿಯುವಂತಾಗಿದೆ. ಇದನ್ನೂ ಓದಿ: ಜ್ಯೂನಿಯರ್ ಎಬಿಡಿ ಅಬ್ಬರದಾಟ ವ್ಯರ್ಥ – ಮುಂಬೈ ವಿರುದ್ಧ ಪಂಜಾಬ್‍ಗೆ 12 ರನ್‌ಗಳ ಜಯ
Advertisement
ಪಂದ್ಯದ ಬಳಿಕ ಮಾತನಾಡಿದ ಕ್ಯಾಪ್ಟನ್ ರೋಹಿತ್ ಶರ್ಮಾ, ಮುಂಬೈ ಇಂಡಿಯನ್ಸ್ ಸತತವಾಗಿ 5 ಪಂದ್ಯಗಲ್ಲಿ ಸೋಲನ್ನು ಕಂಡಿದೆ. ಪಂಜಾಬ್ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ನಾವು ಮೈದಾನದಲ್ಲಿ ಉತ್ತಮ ಪ್ರದರ್ಶನವನ್ನೇ ನೀಡಿದ್ದೇವೆ. ಕೊನೆಯ ಇನ್ನಿಂಗ್ಸನಲ್ಲಂತೂ ಗೆಲುವಿನ ಸಮೀಪಕ್ಕೆ ಬಂದಿದ್ದೇವೆ. ಆದರೆ, ಪ್ರಮುಖ ರನೌಟ್‌ಗಳು ಸಂಭವಿಸಿದ್ದರಿಂದ ಸೋಲಾಯಿತು. ಬದಲಾವಣೆಗಾಗಿ ಹೊಸ ಆಲೋಚನಾ ಕ್ರಮವನ್ನು ಅನುಸರಿಸುತ್ತಿದ್ದೇವೆ ಎಂದು ಹೇಳಿದ್ದಾರೆ.